Ragini Dwivedi Holi Photoshoot: ಹೋಳಿ ಹಬ್ಬದ ವಿಶೇಷ ಫೋಟೋಗಳನ್ನು ಹಂಚಿಕೊಂಡ ನಟಿ ರಾಗಿಣಿ.
Actress Ragini Dwivedi Holi Celebration: ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಆಕ್ಟಿವ್ ಆಗಿದ್ದಾರೆ. ನಟಿ ರಾಗಿಣಿ ಇತ್ತೀಚಿಗೆ ತಮ್ಮ ಹೊಸ ಹೊಸ ಫೋಟೋಶೂಟ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.
ಇದೀಗ ಹೋಳಿ ಹಬ್ಬವನ್ನು ನಟಿ ರಾಗಿಣಿ ಆಚರಿಸಿಕೊಂಡಿದ್ದಾರೆ. ಹೋಳಿ ಹಬ್ಬದಂದು ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದೀಗ ನಟಿಯ ಹೋಳಿ ಸೆಲೆಬ್ರೇಶನ್ ಫೋಟೋಗಳು ಬಾರಿ ವೈರಲ್ ಆಗುತ್ತಿದೆ.
ಹೋಳಿ ಆಚರಿಸಿದ ನಟಿ ರಾಗಿಣಿ ದ್ವಿವೇದಿ
ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ಇದೀಗ ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ನಟಿ ತಮ್ಮ ಮನೆಯಲ್ಲಿಯೇ ಹೋಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ಜುಡಿಷಿಯಲ್ ಲೇಔಟ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ನಟಿ ರಾಗಿಣಿ ಹೋಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
View this post on Instagram
ಹೋಳಿ ಹಬ್ಬದ ವಿಶೇಷ ಫೋಟೋಗಳನ್ನು ಹಂಚಿಕೊಂಡ ನಟಿ
ಹೊಸ ಹೊಸ ಫೋಟೋಶೂಟ್ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದ ನಟಿ ರಾಗಿಣಿ ಇದೀಗ ಹೋಳಿ ವೈಬ್ಸ್ ಶೇರ್ ಮಾಡಿದ್ದಾರೆ. ವಿವಿದ ಬಣ್ಣಗಳನ್ನು ಹಚ್ಚಿಕೊಂಡು ನಟಿ ವಿಭಿನ್ನವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಜೊತೆಗೆ ನಾಯಿ ಜೊತೆ ಕೂಡ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ನಾಯಿ ಜೊತೆಗಿನ ಫೋಟೋವನ್ನು ಕೂಡ ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯ ತಿಳಿಸುತ್ತ ನಟಿ ತಮ್ಮ ಹೋಳಿ ಫೋಟೋಶೂಟ್ ಗಳನ್ನೂ ಹಂಚಿಕೊಂಡಿದ್ದಾರೆ.
ಬಿಳಿ ಬಣ್ಣದ ಶರ್ಟ್ ಡ್ರೆಸ್ ಧರಿಸಿ ನಟಿ ಹೋಳಿ ಆಚರಿಸಿದ್ದಾರೆ. ನಟಿಯ ಹೋಳಿ ವೈಬ್ಸ್ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇವರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.