Ragini Dwivedi Valentine’s Day: ಪ್ರೇಮಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ನಟಿ ರಾಗಿಣಿ.

Actress Ragini Dwivedi Valentine’s Day Celebration: ವೀರ ಮದಕರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯ ಆದ ನಟಿ ರಾಗಿಣಿ ದ್ವಿವೇದಿ (Ragini Dwivedi). ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ಸಾಕಷ್ಟು ಸಿನಿಮಾದಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ.

ನಟಿ ರಾಗಿಣಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿವಾದಗಳಿಗೆ ಒಳಗಾಗಿ ಅದನ್ನು ಎದುರಿಸಿ ಮುಂದೆ ಬಂದ ನಟಿ ಎನ್ನಬಹುದು.

ನಟಿ ರಾಗಿಣಿ ಇತ್ತೀಚಿಗೆ ಬಾಲಿವುಡ್ (Bollywood) ಸಿನಿಮಾಗಳಲ್ಲಿ ನಟಿಸಲು ಮುಂದಾಗಿದ್ದಾರೆ. ಇವರ ಹಲವು ಸಿನಿಮಾಗಳು ಸದ್ಯದಲ್ಲಿ ಬಿಡುಗಡೆಯಾಗಲಿದ್ದು ನಟಿ ರಾಗಿಣಿ ಈ ಸಿನಿಮಾಗಳ ಬಿಡುಗಡೆಯಲ್ಲಿ ಕಾಯುತ್ತಿದ್ದಾರೆ.

Actress Ragini gave a special gift to her lovers.
Image Source: Instagram

ಪ್ರೇಮಿಗಳಿಗೆ ಪ್ರೀತಿಯ ಪಾಠ ಮಾಡಿದ ರಾಗಿಣಿ ಆಲ್ಬಮ್ ಸಾಂಗ್
ನಟಿ ರಾಗಿಣಿ ಇಲ್ಲಿಯವರೆಗೆ ಒಂದು ಸಿಂಗಲ್ ಆಲ್ಬಮ್ ನಲ್ಲಿ ಕಾಣಿಸಿಕೊಳ್ಳಲಿಲ್ಲ. ಕನ್ನಡದ ಕೆಲವು ನಟಿಯರು ಇಂತಹ ಪ್ರಯೋಗದಲ್ಲಿ ಹೆಚ್ಚು ಗಮನ ಸೆಳೆದಿರುವುದು ಇದೆ. ತುಪ್ಪದ ಹುಡುಗಿ ರಾಗಿಣಿ ಈ ಒಂದು ಪ್ರಯೋಗವನ್ನ ಈಗ ಮಾಡಿದ್ದಾರೆ. ಪ್ರೇಮಿಗಳ ದಿನದಂದು ರಾಗಿಣಿ ಅಭಿನಯದ ಆಲ್ಬಂ ರಿಲೀಸ್ ಆಗಿದೆ.

Actress Ragini gave a special gift to her lovers.
Image Source: Instagram

ಪ್ರೇಮಿಗಳಿಗೆ ಪ್ರೀತಿಯ ಪಾಠ ಮಾಡುತ್ತಿರುವ ಈ ಹಾಡು ವಿಶೇಷ ಅನ್ನೋದನ್ನ ಸ್ವತಃ ರಾಗಿಣಿ ಮಾಧ್ಯಮಗಳಲ್ಲಿ ತಿಳಿಸಿದ್ದಾರೆ. ಕನ್ನಡದಲ್ಲಿ ಈಗಾಗಲೇ ಅನೇಕ ಆಲ್ಬಂ ಬಂದಿವೆ. ಆದರೆ ನಟಿ ರಾಗಿಣಿಯ ಆಲ್ಬಂ ಸಾಂಗ್ ವಿಶೇಷವಾಗಿಯೇ ಇದೆ. ಇದರಲ್ಲಿ ಪಂಜಾಬಿ ಪ್ಯೂಸನ್ ಇರೋದು ಈ ಆಲ್ಬಂನ ವಿಶೇಷ ಆಗಿದೆ.

Join Nadunudi News WhatsApp Group

Actress Ragini gave a special gift to her lovers.
Image Source: Instagram

ಪ್ರೇಮಿಗಳಿಗೆ ಗಿಫ್ಟ್ ಕೊಟ್ಟ ನಟಿ ರಾಗಿಣಿ
ನಟಿ ರಾಗಿಣಿಯ ಹೊಸ ಆಲ್ಬಮ್ ಸಾಂಗ್ ನಿನ್ನೆ ಪ್ರೇಮಿಗಳ ದಿನದಂದು ರಿಲೀಸ್ ಆಗಿದೆ. ಆಲ್ಬಮ್ ಸಾಂಗ್ ಬಿಡುಗಡೆ ಮಾಡುವುದರ ಮೂಲಕ ನಟಿ ರಾಗಿಣಿ ಪ್ರೇಮಿಗಳಿಗೆ ಗಿಫ್ಟ್ ನೀಡಿದ್ದಾರೆ. ರಾಗಿಣಿ ಆಲ್ಬಮ್ ಸಾಂಗ್ ನಲ್ಲಿ ಪ್ರೇಮಿಗಳಿಗೆ ಪಾಠ ಮಾಡಿದ್ದಾರಂತೆ. ಇದೀಗ ಈ ವಿಚಾರ ಸುದ್ದಿಯಾಗಿದೆ.

Actress Ragini gave a special gift to her lovers.
Image Source: Instagram

Join Nadunudi News WhatsApp Group