Rakhi Sawant Latest: ಉಲ್ಟಾ ಹೊಡೆದ ನಟಿ ರಾಖಿ ಸಾವಂತ್, ಗಂಡನಿಗೆ ಜಾಮೀನು ಕೊಡಿ ಅಂದ ನಟಿ. .
Rakhi Sawant And Adil Khan Jailed: ಬಾಲಿವುಡ್ ನಟಿ ರಾಖಿ ಸಾವಂತ್ (Rakhi sawanth) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಈ ನಡುವೆ ನಟಿ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದರು. ಮದುವೆಯಾಗಿ 6 ತಿಂಗಳಿಗೆ ನಟಿ ರಾಖಿ ಸಾವಂತ್ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ.
ಇನ್ನು ತಮ್ಮ ಪತಿ ಆದಿಲ್ ಖಾನ್ (Adil Khan) ಮೇಲೆ ರಾಖಿ ಆರೋಪಗಳ ಸುರಿಮಳೆಗೈದು ಆತನನ್ನು ಜೈಲು ಪಾಲು ಮಾಡಿದ್ದರು.ಇನ್ನು ಇತ್ತೀಚಿಗೆ ನಟಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ತಮ್ಮ ಪತಿಯ ಬಗ್ಗೆ ಆರೋಪ ಮಾಡುತ್ತಾ ಅಳುತ್ತಿದ್ದರು.
ಇದೀಗ ನಟಿ ರಾಖಿ ಸಾವಂತ್ ಮತ್ತೆ ತಮ್ಮ ಪತಿಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮತ್ತೆ ತಮ್ಮ ಪತಿಯನ್ನು ನಟಿ ನೆನಪಿಸಿಕೊಂಡಿದ್ದಾರೆ. ಮತ್ತೆ ಆದಿಲ್ ಜೊತೆ ಸಂಸಾರ ಮಾಡುತ್ತಾರಾ ಎನ್ನುದರ ಬಗ್ಗೆ ನಟಿ ಇದೀಗ ಮಾತನಾಡಿದ್ದಾರೆ.
ಗಂಡನಿಗೆ ಜಾಮೀನು ಸಿಗಲಿ ಎಂದು ಪ್ರಾರ್ಥಿಸಿದ ನಟಿ ರಾಖಿ
ನಟಿ ರಾಖಿ ಸಾವಂತ್ ಅವರು ಇತ್ತೀಚೆಗಷ್ಟೇ ಎರಡನೇ ಮದುವೆಯಾಗಿದ್ದು, ಕೆಲವೇ ತಿಂಗಳುಗಳಲ್ಲಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಬಂದಿದೆ. ಪತಿ ಆದಿಲ್ ಖಾನ್ ಮೇಲೆ ಹಲ್ಲೆಯ ಆರೋಪ ಹಾಗೂ ಬೇರೆ ಹುಡುಗಿಯ ಜೊತೆ ಅನೈತಿಕ ಸಂಬಂಧ ಇದೆ ಎಂದು ಪತಿ ಆದಿಲ್ ಖಾನ್ ವಿರುದ್ದ ಆರೋಪ ಮಾಡಿದ್ದರು.
ಪತ್ನಿ ಮಾಡಿದ ಆರೋಪದ ಮೇರೆಗೆ ಆದಿಲ್ ಇದೀಗ ಜೈಲು ಪಾಲಾಗಿದ್ದರು. ಪತಿಯನ್ನು ಜೈಲುಪಾಲು ಮಾಡಿದ ನಟಿ ರಾಖಿ ಇದೀಗ ತಮ್ಮ ಪತಿಗೆ ಜಾಮೀನು ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ರಾಖಿ ಸಾವಂತ್
ಇತ್ತೀಚಿಗೆ ದುಬೈಗೆ ಭೇಟಿ ನೀಡಿದ್ದ ರಾಖಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. “ಇಂದು ಬೆಳಗ್ಗೆ ಪ್ರಾರ್ಥನೆ ಮಾಡುವಾಗ ನನಗೆ ಈ ಆಲೋಚನೆ ಬಂದಿದೆ. ರಂಜಾನ್ ಎಂದರೆ ಕ್ಷಮಿಸುವ ಮಾಸ. ನಾನು ಆದಿಲ್ ನನ್ನ ಕ್ಷಮಿಸದೇ ಇರಬಹುದು. ಆದರೆ ಅವನಿಗೆ ಜಾಮೀನು ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ನಾನು ಒಳ್ಳೆಯ ಪತ್ನಿ ಆಗಿದ್ದೆ. ಆದರೆ ಅವನು ನನ್ನ ಜೀವನ ಹಾಲು ಮಾಡಿದ. ನಾನು ಅಷ್ಟು ಪ್ರೀತಿ ಮಾಡಬಾರದಿತ್ತು. ಅವನಿಗೆ ನಾನು ಸಂದೇಶ ಕಳುಹಿಸುತ್ತಿದ್ದೇನೆ ಜಾಮೀನು ಸಿಕ್ಕ ಬಳಿಕ ನೀನು ಬೇರೆ ಯಾರ ಜೀವನವನ್ನು ಹಾಳು ಮಾಡಬೇಡ. ನೀನು ಬದಲಾಗಲು ಪ್ರಯತ್ನಿಸು. ಮದುವೆಯಾದರೆ ನನ್ನ ಜೊತೆ ನಡೆದುಕೊಂಡ ಹಾಗೆ ಆ ವ್ಯಕ್ತಿಯ ಜೊತೆ ನಡೆದುಕೊಳ್ಳಬೇಡ” ಎಂದು ರಾಖಿ ಸಾವಂತ್ ಹೇಳಿದ್ದಾರೆ.