Ads By Google

Ramya Kannada Talk: ಅಜ್ಜಿಯರಿಗಾಗಿ ಕನ್ನಡ ಮಾತನಾಡುತ್ತೇನೆ ಅಂದ ರಮ್ಯಾ, ಟ್ರೊಲ್ ಮಾಡಿದವರಿಗೆ ಉತ್ತರ ಕೊಟ್ಟ ರಮ್ಯಾ.

ramya about troll
Ads By Google

Actress Ramya About Troll: ನಟಿ ಮೋಹಕತಾರೆ ರಮ್ಯಾ (Ramya) ಅವರು ವೀಕೆಂಡ್ ವಿಥ್ ರಮೇಶ್ ಶೋ (Weekend With Ramesh) ಗೆ ಮೊದಲ ಅತಿಥಿಯಾಗಿ ಬರಲಿದ್ದಾರೆ ಎಂಬ ವಿಚಾರ ಕೇಳಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ ಮತ್ತು ಅವರನ್ನ ವೇದಿಕೆಯ ಮೇಲೆ ನೋಡಿ ಮೆಚ್ಚುಗೆಯನ್ನ ಕೂಡ ಹೊರಹಾಕಿದ್ದಾರೆ.

Image Credit: zee5

ನಟಿ ರಮ್ಯಾ ಅವರು ವೀಕೆಂಡ್ ವಿತ್ ಶೋ ನಲ್ಲಿ ಮೊದಲ ಅತಿಥಿಯಾಗಿ ಬಂದು ಸಾಧಕರ ಖುರ್ಚಿಯಲ್ಲಿ ಕುಳಿತು ತಮ್ಮ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದರು. ಇನ್ನು ನಟಿ ರಮ್ಯಾ ಅವರು ಈ ಶೋ ನಲ್ಲಿ ಬರಿ ಇಂಗ್ಲಿಷ್ ನಲ್ಲಿಯೇ ಮಾತನಾಡಿ ನೆಟ್ಟಿಗರ ಟ್ರೊಲ್ ಗೆ ಒಳಗಾಗಿದ್ದಾರೆ.

Imge Credit: timesofindia.indiatimes

ನೆಟ್ಟಿಗರಿಂದ ಟ್ರೊಲ್ ಆದ ನಟಿ ರಮ್ಯಾ
ನಟಿ ರಮ್ಯಾ ಅವರು ವೀಕೆಂಡ್ ವಿತ್ ರಮೇಶ್ ಶೋ ಗೆ ಬಂದ ಸಂಚಿಕೆ ಪ್ರಸಾರವಾಗಿ ಕೆಲ ಸಮಯ ಕಳೆಯುತ್ತಿದ್ದಂತೆಯೇ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾದರು.

ನಟಿ ರಮ್ಯಾ ವೀಕೆಂಡ್ ವಿಥ್ ರಮೇಶ್ ನಲ್ಲಿ ಭಾಗವಹಿಸಿದ ನಂತರ ನೆಟ್ಟಿಗರು ಅವರನ್ನು ಟ್ರೊಲ್ ಮಾಡಲು ಶುರು ಮಾಡಿದರು ಮತ್ತು ಇದಕ್ಕೆ ಕಾರಣ ನಟಿ ರಮ್ಯಾ ಇಂಗ್ಲಿಷ್ ಬಾಷೆಯನ್ನು ಹೆಚ್ಚು ಬಳಸಿದ್ದು. ನಟಿ ರಮ್ಯಾ ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಕನ್ನಡ ಬಳಕೆ ಮಾಡದೆ ಬರಿ ಇಂಗ್ಲಿಷ್ ನಲ್ಲಿ ಮಾತನಾಡಿದ ರೀತಿಗೆ ನೆಟ್ಟಿಗರು ಸಾಕಷ್ಟು ಟ್ರೊಲ್ ಮಾಡಿದ್ದಾರೆ.

Image Credit: ottplay

ಅಜ್ಜಿಯರಿಗಾಗಿ ಕನ್ನಡ ಮಾತನಾಡುತ್ತೇನೆ ಎಂದ ನಟಿ ರಮ್ಯಾ
ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರು ಡಾ.ಬ್ರೋ ಕರೆಸಿಕೊಳ್ಳುತ್ತೀರಾ ಎಂದು ಪ್ರಶ್ನೆ ಕೇಳಿದ ವರದಿಗಾರನಿಗೆ ನಿಮ್ಮ ಅಜ್ಜಿಗೆ ಡಾ.ಬ್ರೋ ಗೊತ್ತಾ ಎಂದು ಹೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು ನೆಟ್ಟಿಗರು ರಮ್ಯಾ ಮಾತನಾಡಿದ್ದು ನಮ್ಮ ಅಜ್ಜಿಗೆ ಅರ್ಥವಾಗಿಲ್ಲ ಎಂದು ಕಾಲೆಳೆದಿದ್ದಾರೆ.

ಈ ಟ್ರೊಲ್ ಗಳಿಗೆ ಉತ್ತರ ನೀಡಿದ ನಟಿ ರಮ್ಯಾ ಅವರು ಕಾರ್ಯಕ್ರಮಕ್ಕೆ ಬಂದ ಕೆಲವು ಅತಿಥಿಗಳು ಕನ್ನಡಿಗರಾಗಿರಲಿಲ್ಲ. ಹೀಗಾಗಿ ಎಲ್ಲರಿಗೂ ಅರ್ಥವಾಗಲು ಪ್ರಯತ್ನಪಟ್ಟೆ.

ಮುಂದಿನ ಕಾರ್ಯಕ್ರಮದಲ್ಲಿ ಮುದ್ದು ಅಜ್ಜಿಯಂದಿರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ. ರಮ್ಯಾ ಅವರು ಮುಂದಿನ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡುತ್ತೇನೆ ಎಂದು ಟ್ರೊಲ್ ಮಾಡುವ ಜನರಿಗೆ ಉತ್ತರವನ್ನ ನೀಡಿದ್ದಾರೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in