Actress Ramya Tweets Against Hindi Imposition: ಜೂನಿಯರ್ ಏನ್ ಟಿಆರ್ (Jr NTR) ಹಾಗು ರಾಮ್ ಚರಣ್ ತೇಜ (Ram Charan Teja) ಅಭಿನಯದ RRR ಚಿತ್ರ ಆಸ್ಕರ್ ಪ್ರಶತಿ ಪಡೆದು ಮತ್ತೊಂದು ವಿಶೇಷ ದಾಖಲೆಯನ್ನು ಬರೆಯುತ್ತಿದೆ. ಇದೀಗ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಬರುತ್ತಿದ್ದಂತೆ ಹಲವು ಬಾಲಿವುಡ್ (Bollywood) ಮೇಲೆ ಕಿಡಿಕಾರುತ್ತಿದ್ದಾರೆ.
ಸಾಕಷ್ಟು ನಟರು ಆಸ್ಕರ್ ಪ್ರಶಸ್ತಿಯನ್ನಿಟ್ಟುಕೊಂಡು ಬೇರೆ ಬೇರೆ ರೀತಿಯಲ್ಲಿ ಟಾಂಗ್ ನೀಡುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದವರ ವಿರುದ್ಧ ವಾಗ್ದಾಳಿ ಮಾಡಿರುವ ಅವರು, ಆಸ್ಕರ್ ಪ್ರಶಸ್ತಿ ಬಂದಿದ್ದಕ್ಕೆ ಈಗ ಏನು ಹೇಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದಿ ಹೇರಿಕೆಯ ವಿರುದ್ಧ ನಟಿ ರಮ್ಯಾ ಟ್ವೀಟ್
ಇದೀಗ ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ರಮ್ಯಾ (Ramya) ಹಿಂದಿ ಹೇರಿಕೆ ಹಾಗೂ ಬಾಲಿವುಡ್ ಬಗ್ಗೆ ವಿಭಿನ್ನವಾದ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಕನ್ನಡ ಮಾತನಾಡಲ್ಲ ಎಂದು ಹೇಳಿದ ಹಿಂದಿ ಮಹಿಳೆಯನ್ನು ಕೆಳಗೆ ಇಳಿಸಿದ ಆಟೋ ಚಾಲಕನ ವಿಡಿಯೋವನ್ನು ನಟಿ ರಮ್ಯಾ ಹಂಚಿಕೊಂಡಿದ್ದಾರೆ.
I’m also really glad Naatu Naatu was performed in Telugu – about time the world knows that India is a diverse country of different cultures and languages. India is not just Hindi. India is not just Bollywood. Stereotyping is lazy thinking. https://t.co/fGPhAMwkzX
— Ramya/Divya Spandana (@divyaspandana) March 13, 2023
“ಭಾರತ ಹಲವು ಭಾಷೆಗಳನ್ನು, ನಾನಾ ರೀತಿಯ ಸಂಸ್ಕ್ರತಿಯನ್ನು ಹೊಂದಿರುವ ದೇಶ ಯಾರು ಯಾರ ಮೇಲು ಹೇರಿಕೆ ಸಲ್ಲ. ಭಾರತ ಅಂದರೆ ಬಾಲಿವುಡ್ ಅಲ್ಲ, ಭಾರತ ಅಂದರೆ ಹಿಂದಿಯಲ್ಲ” ಎಂದು ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
ಭಾಷಾ ವಿಚಾರವಾಗಿ ನಟಿ ರಮ್ಯಾ ಆಗಾಗ ಧ್ವನಿ ಎತ್ತುತ್ತಾರೆ. ಇದೀಗ ನಟಿ ಹಿಂದಿ ಹೇರಿಕೆಯ ವಿರುದ್ಧ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
ದಕ್ಷಿಣ ಸಿನಿಮಾಗಳ ಬಗ್ಗೆಯೂ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆಸ್ಕರ್ ವೇದಿಕೆಯ ಮೇಲೆ ತೆಲುಗು ಗೀತೆಯನ್ನೇ ಹಾಡಿದ್ದು ಎಂದು ಬರೆಯುವ ಮೂಲಕ ಹಿಂದಿ ಹೇರಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವಿರೋಧಿಸಿದ್ದಾರೆ.