Rashmika Troll: ನಟಿ ರಶ್ಮಿಕಾ ಮಂದಣ್ಣ ಧರಿಸಿದ್ದು ಯಾರ ಶರ್ಟ್ ಗೊತ್ತಾ…? ಶರ್ಟ್ ಹಾಕಿ ಟ್ರೊಲ್ ಆದ ಕಿರಿಕ್ ಬೆಡಗಿ.
ಶರ್ಟ್ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಆದ ನಟಿ ರಶ್ಮಿಕಾ ಮಂದಣ್ಣ.
Actress Rashmika Mandanna Troll: ಸೋಶಿಯಲ್ ಮೀಡಿಯಾದಲ್ಲಿ (Social Media) ಈಗಾಗಲೇ ಗೀತಾ ಗೋವಿಂದಂ ಜೋಡಿಯ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಯಾಯಾವುದಾದರೂ ಒಂದು ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿ ಇರುತ್ತಾರೆ.
ಸದ್ಯ ನಟಿ ರಶ್ಮಿಕಾ ಮಂದಣ್ಣ ಅವರು ಹಾಕಿದ ಬಟ್ಟೆಯ ವಿಷಯವಾಗಿ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗೆ ಕಾರಣರಾಗಿದ್ದಾರೆ ಎಂದು ಹೇಳಬಹುದು. ನಟಿಯ ಬಟ್ಟೆಯನ್ನ ನೋಡಿದ ಜನರು ಟ್ರೊಲ್ ಮಾಡಲು ಆರಂಭ ಮಾಡಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಬಹಳ ವಿಸ್ತಾರವಾಗಿ ಹಬ್ಬಿದೆ ಎಂದು ಹೇಳಬಹುದು.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ
ನಟಿ ರಶ್ಮಿಕಾ ಮಂದಣ್ಣ ಅವರು ಆಗಾಗ ಕನ್ನಡಿಗರಿಂದ ಟ್ರೋಲ್ ಆಗುತ್ತಲೇ ಇರುತ್ತಾರೆ. ಕನ್ನಡ ಚಿತ್ರರಂಗದಿಂದ ಸಿನಿ ಕೆರಿಯರ್ ಪ್ರಾರಂಭಿಸಿದ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಕನ್ನಡ ಸಿಗಿತ್ರರಂದ ಕಡೆ ಅಸಡ್ಡೆ ತೋರಿಸುತ್ತಿದ್ದಾರೆ.
ಈ ಕಾರಣಕ್ಕೆ ಕನ್ನಡಿಗರು ರಶ್ಮಿಕಾ ಮಂದಣ್ಣ ಅವರನ್ನು ಹೆಚ್ಚಾಗಿ ಟ್ರೋಲ್ ಮಾಡುತ್ತಾರೆ. ಈಗಾಗಲೇ ಸಾಕಷ್ಟು ಬಾರಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರ ವಿಚಾರವಾಗಿ ಸುದ್ದಿಯಾಗಿದ್ದಾರೆ. ಇದೀಗ ಮತ್ತೆ ರಶ್ಮಿಕಾ ಮಂದಣ್ಣ ಹೊಸ ವಿಚಾರವಾಗಿ ಟ್ರೊಲ್ ಆಗುತ್ತಿದ್ದಾರೆ.
ಧರಿಸಿದ ಶರ್ಟ್ ವಿಚಾರವಾಗಿ ಟ್ರೋಲ್ ಆದ ಕಿರಿಕ್ ಬ್ಯೂಟಿ
ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ವಿಮಾನ ನಿಲ್ದಾಣದ ಬಳಿ ಕಾಣಿಸಿಕೊಂಡಿದ್ದರು. ಈ ವೇಳೆ ನಟಿ ಧರಿಸಿದ್ದ ಶರ್ಟ್ ಎಲ್ಲರ ಗಮನ ಸೆಳೆದಿದೆ. ನಟಿ ಧರಿಸಿದ ಶರ್ಟ್ ವಿಚಾರವಾಗಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸುದ್ದಿಯಾಗಿದ್ದಾರೆ. ರಶ್ಮಿಕಾ ಅವರ ಶರ್ಟ್ ನೋಡಿ ವಿಜಯ್ ದೇವರಕೊಂಡ ಶರ್ಟ್ ಧರಿಸಿದ್ದೀರಾ ಎಂದು ಟ್ರೋಲ್ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಧರಿಸಿದ ಶರ್ಟ್ ಫೋಟೋ ಹಾಗೂ ವಿಜಯ್ ದೇವರಕೊಂಡ ಧರಿದ ಶರ್ಟ್ ನ ಫೋಟೋ ಜೋಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಈ ಫೋಟೋ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಪ್ರೀತಿಯ ಗಾಸಿಪ್ ಅನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಇನ್ನು ಈ ಫೋಟೋ ವೈರಲ್ ಆಗಿರುವ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಟಿ ರಶ್ಮಿಕಾ ಮಂದಣ್ಣ ಇದೀಗ ಸೌತ್ ನ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ ನಟಿ ದೂರವಿದ್ದರು ಕೂಡ ಪರ ಭಾಷಾ ಚಿತ್ರಗಳಲ್ಲಿ ನಟಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದಾರೆ.
ಇನ್ನು ರಶ್ಮಿಕಾ ಮಂದಣ್ಣ ಅಭಿಮಾನಿಗಳು ಪುಷ್ಪ 2 ನಿರೀಕ್ಷೆಯಲ್ಲಿದ್ದಾರೆ. ಇನ್ನು ನಟಿ ರಶ್ಮಿಕಾ ಅವರ ಕೈಯಲ್ಲಿ ಇದೀಗ ಸಾಲು ಸಾಲು ಚಿತ್ರಗಳಿದ್ದು ಚಿತ್ರೀಕರಣದಲ್ಲಿ ನಟಿ ಬ್ಯುಸಿ ಆಗಿದ್ದಾರೆ. ಇನ್ನು ಶರ್ಟ್ ವಿಚಾರಕ್ಕೆ ಟ್ರೋಲ್ ಆಗಿರುವ ನಟಿ ರಶ್ಮಿಕಾ ಈ ವೈರಲ್ ಸುದ್ದಿಗೆ ಯಾವ ಉತ್ತರ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.