Samantha: ಚಿತ್ರಗಳಿಗೆ ಗುಡ್ ಬೈ ಹೇಳಿ ದೊಡ್ಡ ನಿರ್ಧಾರ ತಗೆದುಕೊಂಡ ಸಮಂತಾ, ಆರೋಗ್ಯಕ್ಕಾಗಿ ಈ ನಿರ್ಧಾರ.
ವೃತ್ತಿ ಜೀವನಕ್ಕೆ ಬ್ರೆಕ್ ಕೊಟ್ಟು, ಧ್ಯಾನದಲ್ಲಿ ತೊಡಗಿಕೊಂಡ ನಟಿ ಸಮಂತಾ.
Actress Samantha Ruth Prabhu: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಸದಾ ಸುದ್ದಿಯಲ್ಲಿರುತ್ತಾರೆ. ನಟಿ ಸಮಂತಾ ರುತ್ ಪ್ರಭು ಅವರು ಹಲವು ದಿನಗಳ ಬಳಿಕ ಚಿತ್ರರಂಗಕ್ಕೆ ತಿರುಗಿ ಬಂದಿದ್ದಾರೆ. ಅದೆಷ್ಟೋ ದಿನಗಳಿಂದ ನಟಿ ಸಮಂತಾ ಅರೋಗ್ಯ ಸಮಸ್ಯೆಯಿಂದ ಬಳಲಿದ್ದಾರೆ.
ನಂತರ ಅರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಸಮಂತಾ ರುತ್ ಪ್ರಭು ಅವರು ಇದೀಗ ಸಿನಿಮಾಗಳಿಗೆ ಗುಡ್ ಬಾಯ್ ಹೇಳಿದ್ದಾರೆ ಎಂದು ವರದಿಯಾಗಿದೆ.
ವೃತ್ತಿ ಜೀವನಕ್ಕೆ ಬ್ರೇಕ್ ಕೊಟ್ಟ ನಟಿ ಸಮಂತಾ
ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಅವರು ಮಯೋಸಿಟೀಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಒಪ್ಪಿಕೊಂಡಿರುವ ಸಿನಿಮಾ, ವೆಬ್ ಸೀರಿಸ್ ಎಲ್ಲಾ ಮುಗಿಸಿಕೊಟ್ಟಿದ್ದಾರೆ. ಆರೋಗ್ಯದ ಕಡೆ ಗಮನ ಕೊಡುವುದಕ್ಕಾಗಿ ನಟಿ ಸಮಂತಾ ವೃತ್ತಿ ಜೀವನಕ್ಕೆ ಒಂದು ವರ್ಷ ಬ್ರೇಕ್ ಕೊಟ್ಟಿದ್ದಾರೆ. ಹೀಗಿರುವಾಗ ಇಶಾ ಫೌಂಡೇಶನ್ ಆಡಿಯೋಗೆ ಭೇಟಿ ನೀಡಿದ್ದಾರೆ. ಅಲ್ಲಿ ಧ್ಯಾನ ಮಾಡಿ ದಿನ ಕಳೆಯುತ್ತಿರುವ ಫೋಟೋವನ್ನು ನಟಿ ಶೇರ್ ಮಾಡಿದ್ದಾರೆ.
ಧ್ಯಾನದಲ್ಲಿ ತೊಡಗಿಕೊಂಡ ನಟಿ ಸಮಂತಾ
ನಟಿ ಸಮಂತಾ ತಮ್ಮ ವಯಕ್ತಿಕ ಸಮಸ್ಯೆಗಳಿಂದ ಹೊಸ ಬರಲು ಬಿಡುವು ತೆಗೆದುಕೊಂಡಿದ್ದಾರೆ. ಅರೋಗ್ಯ ಮತ್ತು ಮನಸ್ಸಿಗೆ ರಿಲ್ಯಾಕ್ಷೆಶನ್ ಬೇಕಾಗಿದೆ. ಈ ಕಾರಣದಿಂದ ನಟಿ ಸಮಂತಾ ಸದ್ಗುರು ಸಂಘಕ್ಕೆ ಸೇರಿದ್ದಾರೆ. ಸದ್ಗುರುವಿನ ಅನುಯಾಯಿ ಆಗಿರುವ ನಟಿ ಸಮಂತಾ ಕೊಯಮತ್ತೂರಿನಲ್ಲಿ ಸದ್ಗುರು ಸ್ಥಾಪಿಸಿರುವ ಇಶಾ ಸೆಂಟರ್ ಸೇರಿಕೊಂಡಿದ್ದು ಅಲ್ಲಿ ಸದ್ಗುರುವಿನ ಮಾರ್ಗದರ್ಶನದಲ್ಲಿ ಧ್ಯಾನ, ಪೂಜೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಕುರಿತು ಫೋಟೋವನ್ನು ಶೇರ್ ಮಾಡಿದ್ದಾರೆ.
ನಟಿ ಸಮಂತಾ ಇತರ ಭಕ್ತಾದಿಗಳ ಜೊತೆ ಕುಳಿತು ಧ್ಯಾನ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಕೆಲವು ಹೊತ್ತಿಗೆ ಮುಂಚೆ ಏನಾದರೂ ತಿರುವುತ್ತಾ, ಮುರಿಯುತ್ತಾ, ಮೈಯಿ ಕೆರೆಯುತ್ತಾ ಯೋಚನೆಗಳ ಪ್ರವಾಹಗಳಲ್ಲಿ ಇರುತ್ತಿದ್ದೆ. ಇವುಗಳನ್ನು ಮಾಡದೆ ಸುಮ್ಮನೆ ಕೂರುವುದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿದ್ದೆ. ಆದರೆ ಇಂದು ಧ್ಯಾನಮಗ್ನಳಾಗಿಬಿಟ್ಟೆ.
ಧ್ಯಾನ ನನ್ನ ಶಕ್ತಿ ಎಂದು ಅರಿತುಕೊಂಡೆ. ಧ್ಯಾನ ನನ್ನ ಸಂವಹನ, ನನಗೆ ಸ್ಪಷ್ಟನೆಯನ್ನು ನೀಡುತ್ತದೆ ಎಂದು ಅರಿತುಕೊಂಡೆ. ಇಷ್ಟು ಸರಳವಾದ ಕಾರ್ಯವೊಂದರಲ್ಲಿ ಇಷ್ಟು ಶಕ್ತಿ ಅಡಗಿರುತ್ತದೆ ಎಂದು ತಿಳಿದಿರಲಿಲ್ಲ ಎಂದು ಸಮಂತಾ ಬರೆದುಕೊಂಡಿದ್ದಾರೆ.