Samantha Ruth Prabhu IVIG Therapy: IVIG ಥೆರಪಿ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಸಮಂತಾ, ಆರೋಗ್ಯ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಸಮಂತಾ.

Actress Samantha Ruth Prabhu Health: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪಭು (Samantha Ruth Prabhu) ತಮ್ಮ ಸಾಕಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಸಮಂತಾ ರುತ್ ಪ್ರಭು ಹಲವು ತಿಂಗಳಿನಿಂದ ಮಯೋಸಿಟೀಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಇದೀಗ ಚೇತರಿಸಿಕೊಂಡು ಚಿತ್ರೀಕರಣದಲ್ಲಿ ಸಹ ಭಾಗಿಯಾಗಿದ್ದಾರೆ. ನಟಿ ಸಮಂತಾ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.

Actress Samantha Ruth Prabhu gave information about health
Image Credit: instagram

ಕಾಯಿಲೆಯಿಂದ ಚೇತರಿಸಿಕೊಂಡ ನಟಿ ಸಮಂತಾ
ನಟಿ ಸಮಂತಾ ಯಶೋದಾ ಸಿನಿಮಾದ ರಿಲೀಸ್ ಸಮಯದಲ್ಲಿ ಮಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಹಲವು ತಿಂಗಳುಗಳ ಕಾಲ ನಟಿ ಸಮಂತಾ ಚಿತ್ರೀಕರಣದಿಂದ ಸಹ ದೂರ ಉಳಿದು ಕಾಯಿಲೆಗೆ ಸೂಕ್ತವಾದ ಚಿಕಿತ್ಸೆ ಪಡೆದರು.

ಮಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದ ಸಮಂತಾ ಶಾಕುಂತಲಂ ಸಿನಿಮಾ ಇವೆಂಟ್ ನಲ್ಲಿ ಕಣ್ಣೀರು ಹಾಕಿದ್ದಾರೆ. ಆದರೆ ನಟಿ ಸಮಂತಾ ಅದೆಷ್ಟೇ ಕಷ್ಟ ಬಂದರು ಸಹ ಸಿನಿಮಾ ಮೇಲಿನ ಪ್ರೀತಿಯನ್ನು ಕಡಿಮೆ ಮಾಡಿಕೊಳ್ಳಲಿಲ್ಲ.

Actress Samantha Ruth Prabhu who underwent IVIG therapy
Image Credit: instagram

IVIG ಥೆರಪಿ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಸಮಂತಾ
ಇದೀಗ ನಟಿ ಸಮಂತಾ ಶೂಟಿಂಗ್ ನಡುವೆಯೂ ತಮ್ಮ ಆರೋಗ್ಯದ ಬಗ್ಗೆಯೂ ಅಪ್ಡೇಟ್ ನೀಡಿದ್ದಾರೆ. IVIG ಥೆರಪಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಸಮಂತಾ ನಿರ್ದೇಶಕ ರಾಹುಲ್ ಮತ್ತು ನಾದಿನಿ ರೆಡ್ಡಿ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದು ಫೋಟೋ ಸಹ ಶೇರ್ ಮಾಡಿದ್ದಾರೆ.

Join Nadunudi News WhatsApp Group

IVIG ಎಂದರೆ ಥೆರಪಿಯಾಗಿದೆ. ದುರ್ಬಲಗೊಂಡಿರುವ ವ್ಯಕ್ತಿ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಒಂದು ಚಿಕಿತ್ಸೆಯಾಗಿದೆ. ಸದ್ಯ ಸಮಂತಾ ಕೂಡ ಇದೇ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Actress Samantha Ruth Prabhu, who underwent IVIG therapy, gave information about her health
Image Credit: instagram

ಚಿಕಿತ್ಸೆ ಪಡೆಯುತ್ತಿರುವ ಫೋಟೋ ಹಂಚಿಕೊಂಡ ಸಮಂತಾ
ಈ ಚಿಕಿತ್ಸೆಯ ಪ್ರಕ್ರಿಯೆ ಸುಮಾರು 2 ರಿಂದ 4 ಗಂಟೆಗಳವೆರೆಗೆ ತೆಗೆದುಕೊಳ್ಳಬಹುದು ಮತ್ತು ಚಿಕಿತ್ಸೆಯ ಸಮಯದಲ್ಲಿ ತಯಾರಾದ ಇಮ್ಮುನೊಗ್ಲಾಬ್ಯುಲಿನ್ ಅನ್ನು ರಕ್ತನಾಳಗಳಲ್ಲಿ ತುಂಬಿಸಲಾಗುತ್ತದೆ.

ನಟಿ ಸಮಂತಾ ಫೋಟೋವನ್ನು ಶೇರ್ ಮಾಡಿದ್ದಾರೆ. ಡ್ರಿಪ್ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಆದರೆ ಅವರ ಮುಖ ಕಾಣುವುದಿಲ್ಲ. ಸಮಂತಾ ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Join Nadunudi News WhatsApp Group