Samantha Kushi Movie: ವಿಜಯ್ ದೇವರಕೊಂಡ ಜೊತೆ ಸಿಹಿಸುದ್ದಿ ಹಂಚಿಕೊಂಡ ನಟಿ ಸಮಂತಾ, ಸಮಂತಾಗೆ ಸ್ವಾಗತ ಮಾಡಿದ ಚಿತ್ರತಂಡ.

Samantha And Vijay Devarakonda Kushi Movie: ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ತಮ್ಮ ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ಇದೀಗ ನಟಿ ತಮ್ಮ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಇನ್ನು ಇದೀಗ ನಟಿ ವಿಜಯ್ ದೇವರಕೊಂಡ (Vijay Devarakonda) ನಟನೆಯ ಖುಷಿ ಚಿತ್ರದ (Kushi Movie) ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

Samantha And Vijay Devarakonda Kushi Movie
Image Source: India Today

ಖುಷಿ ಚಿತ್ರದ ಸೆಟ್ ಗೆ ಸಮಂತಾ ಎಂಟ್ರಿ
ನಟಿ ಸಮಂತಾ ರುತ್ ಪ್ರಭು ಅವರ ಕೈಯಲ್ಲಿ ಇದೀಗ ಸಾಲು ಸಾಲು ಚಿತ್ರಗಳಿವೆ. ನಟಿ ಸಿನಿಮಾದ ಜೊತೆಗೆ ವೆಬ್ ಸಿರೀಸ್ ನಲ್ಲಿ ಕೂಡ ನಟಿಸುತ್ತಿದ್ದಾರೆ. ಈ ಹಿಂದೆ ನಟಿ ಸಮಂತಾ ಮಯೋಟಿಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು.

ತಮ್ಮ ಅನಾರೋಗ್ಯದಿಂದಾಗಿ ನಟಿ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದರು. ಹಾಗಾಗಿ ವಿಜಯ್ ದೇವರಕೊಂಡ ಅಭಿನಯದ ಖುಷಿ ಚಿತ್ರದಲ್ಲಿ ಚಿತ್ರೀಕರಣದಲ್ಲಿ ನಟಿ ಹಾಜರಿರಲಿಲ್ಲ. ಇದೀಗ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ನಟಿ ಖುಷಿ ಚಿತ್ರತಂಡಕ್ಕೆ ಮರಳಿದ್ದಾರೆ.

Samantha And Vijay Devarakonda Kushi Movie
Image Source: News18

ಚಿತ್ರರಂಗದಲ್ಲಿ 13 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸಮಂತಾ ಅವರನ್ನು ಅಭಿನಂದಿಸಲು ಕೇಕ್ ಕಟ್ ಮಾಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಜಯ್, ನಿರ್ದೇಶಕ ಶಿವ ನಿರ್ಮಾಣ ಮತ್ತು ನಿರ್ಮಾಪಕರು ಸಮಂತಾಗೆ ಶುಭ ಕೋರಿದ್ದಾರೆ.

Join Nadunudi News WhatsApp Group

ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಸಮಂತಾ ಮತ್ತೆ ಖುಷಿ ಚಿತ್ರದ ಚಿತ್ರೀಕರಣಕ್ಕೆ ಬಂದಿರುವುದು ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ.

Samantha And Vijay Devarakonda Kushi Movie
Image Source: India Today

ನಟ ವಿಜಯ್ ಇದೀಗ ಖುಷಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಚಿತ್ರದ ಎರಡು ಶೆಡ್ಯೂಲ್ ಗಳು ಪೂರ್ಣಗೊಂಡಿದೆ. ಇದೀಗ ಸಮಂತಾ ಮತ್ತೆ ಚಿತ್ರೀಕರಣಕ್ಕೆ ಎಂಟ್ರಿ ಕೊಟ್ಟಿದ್ದು ಉಳಿದ ಭಾಗಗಳ ಚಿತ್ರೀಕರಣ ಮುಂದುವರೆಯಲಿದೆ.

ಇನ್ನು ಚಿತ್ರದಲ್ಲಿ ಹೊಸ ಶೆಡ್ಯೂಲ್ ನಲ್ಲಿ ಒಂದು ಆಕ್ಷನ್ ಸೀಕ್ವೆನ್ಸ್ ಕೂಡ ಇದೆ ಎಂದು ನಿರ್ದೇಶಕರು ಪೋಸ್ಟ್ ಮಾಡಿದ್ದಾರೆ. ಈ ಶೆಡ್ಯೂಲ್ ಗೆ ಪೀಟರ್ ಹೆನ್ಸ್ ಫೈಟ್ ಸೀನ್ ನಿರ್ದೇಶಿಸಲಿದ್ದಾರೆ. ಇನ್ನು ಖುಷಿ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರ ತಂಡ ಮಾಹಿತಿ ನೀಡುವ ವರೆಗೂ ಕಾದು ನೋಡಬೇಕಿದೆ.

Samantha And Vijay Devarakonda Kushi Movie
Image Source: India Today

Join Nadunudi News WhatsApp Group