Samantha Meditation: ದೇವರ ಮುಂದೆ ಧ್ಯಾನಕ್ಕೆ ಕುಳಿತ ನಟಿ ಸಮಂತಾ, ಸ್ಯಾಮ್ ಭಕ್ತಿಯನ್ನು ಮೆಚ್ಚಿದ ಪ್ಯಾನ್ಸ್.

Actress Samantha Instagram Post: ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಖುಷಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ನಟಿ ತಮ್ಮ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ.

ಇನ್ನು ಇದೀಗ ನಟಿ ವಿಜಯ್ ದೇವರಕೊಂಡ (Vijay Devarakonda) ನಟನೆಯ ಖುಷಿ ಚಿತ್ರದ (Kushi Movie) ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದೀಗ ನಟಿ ಸಮಂತಾ ದೇವರ ಆರಾಧನೆಯಲ್ಲಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Actress Samantha Instagram Post meditation
Image Source: Instagram

ಲಿಂಗ ಭೈರವಿಯ ಪರಮ ಭಕ್ತೆಯಾದ ನಟಿ ಸಮಂತಾ
ನಟಿ ಸಮಂತಾ ರುತ್ ಪ್ರಭು ಅವರು ದೇವಿಯ ಆರಾಧನೆಯಲ್ಲಿ ಮುಳುಗಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ದೇವರ ಮುಂದೆ ಕುಳಿತು ನಟಿ ಸಮಂತಾ ಧ್ಯಾನ ಪ್ರಾರ್ಥನೆಯಲ್ಲಿ ಮುಳುಗಿದ್ದಾರೆ. ಸಮಂತಾ ಅವರ ಭಕ್ತಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ದೇವರ ಮೇಲೆ ಇರುವ ನಂಬಿಕೆಯ ಬಗ್ಗೆ ಹೇಳಿದ ನಟಿ ಸಮಂತಾ
“ಕೆಲವೊಮ್ಮೆ, ಇದು ಅತಿಮಾನುಷ ಶಕ್ತಿಯನ್ನು ತೆಗೆದುಕೊಳ್ಳುವುದಿಲ್ಲ. ನಂಬಿಕೆಯು ನಿಮ್ಮನ್ನು ಸಾಧಿಸುತ್ತದೆ. ನಂಬಿಕೆಯು ನಿಮ್ಮನ್ನು ಶಾಂತವಾಗಿರುಸುತ್ತದೆ.

ನಂಬಿಕೆಯು ನಿಮ್ಮ ಗುರು ಮತ್ತು ನಿಮ್ಮ ಸ್ನೇಹಿತರಾಗುತ್ತದೆ. ನಂಬಿಕೆಯು ನಿಮ್ಮನ್ನು ಅತಿಮಾನುಷನನ್ನಾಗಿ ಮಾಡುತ್ತದೆ” ಎಂದು ಕ್ಯಾಪ್ಷನ್ ಕೊಡುವ ಮೂಲಕ ನಟಿ ದೇವಿಯ ಆರಾಧನೆಯಲ್ಲಿ ಮುಳುಗಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

Actress Samantha Instagram Post meditation
Image Source: India Today

 

View this post on Instagram

 

A post shared by Samantha (@samantharuthprabhuoffl)

ನಟಿ ಸಮಂತಾ ರುತ್ ಪ್ರಭು ಅವರ ಕೈಯಲ್ಲಿ ಇದೀಗ ಸಾಲು ಸಾಲು ಚಿತ್ರಗಳಿವೆ. ನಟಿ ಸಿನಿಮಾದ ಜೊತೆಗೆ ವೆಬ್ ಸಿರೀಸ್ ನಲ್ಲಿ ಕೂಡ ನಟಿಸುತ್ತಿದ್ದಾರೆ.

ಈ ಹಿಂದೆ ನಟಿ ಸಮಂತಾ ಮಯೋಟಿಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು. ತಮ್ಮ ಅನಾರೋಗ್ಯದಿಂದಾಗಿ ನಟಿ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದರು. ಇದೀಗ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ನಟಿ ಖುಷಿ ಚಿತ್ರತಂಡಕ್ಕೆ ಮರಳಿದ್ದಾರೆ. ಇನ್ನು ಖುಷಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಸಿಗುವವರೆಗೂ ಕಾಡು ನೋಡಬೇಕಿದೆ.

Actress Samantha Instagram Post meditation
Image Source: Times Of India

Join Nadunudi News WhatsApp Group