Sanjana Galrani: ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ, ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ.

Actress Sanjana Galrani Complaint: ನಟಿ ಸಂಜನಾ ಗಲ್ರಾನಿ ಇದೀಗ ಸುದ್ದಿಯಲ್ಲಿದ್ದಾರೆ. ಸಾಕಷ್ಟು ವಿವಾದಗಳ ನಂತರ ನಟಿ ಸಂಜನಾ ಗಲ್ರಾನಿ (Sanjana Galrani)ಅವರು ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಸದ್ಯ ನಟಿ ಸಂಜನಾ ಗಲಾನಿ ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ನಟಿ ಕೊಲೆ ಬೆದರಿಕೆಯಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ.

Actress Sanjana Galrani Complaint
Image Source: India Today

ನಟಿ ಸಂಜನಾ ಗಲ್ರಾನಿ ಅವರಿಗೆ ಜೀವ ಬೆದರಿಕೆ
ಸಿನಿಮಾ ರಂಗದಿಂದ ದೂರ ಇರುವ ಸದ್ಯ ನಟಿ ಸಂಜನಾ ಗಲ್ರಾನಿ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ನಟಿ ಸಂಜನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಂಜನಾಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪ ಮಾಡಿರುವ ಅವರು ಬೆದರಿಕೆ ಹಾಕಲಾಗಿದೆ ಎಂದು ಆರೋಪ ಮಾಡಿರುವ ಅವರು ಬೆದರಿಕೆ ಹಾಕಿರುವವರ ವಿರುದ್ಧ ದೂರು ದಾಖಲಿಸಿದ್ದಾರೆ.

Actress Sanjana Galrani Complaint
Image Source: UrTV 24

ಕೊಲೆ ಬೆದರಿಕೆಯಿಂದ ದೂರು ನೀಡಿದ ನಟಿ ಸಂಜನಾ ಗಲ್ರಾನಿ
ಪಾರ್ಕಿಂಗ್ ವಿಚಾರವಾಗಿ ಸ್ಥಳೀಯ ನಿವಾಸಿಗಳ ಜೊತೆ ಗಲಾಟೆ ನಡೆದಿದ್ದು, ಕೊಲೆ ಮಾಡುತ್ತೀನಿ ಅಂತ ಬೆದರಿಕೆ ಹಾಕಿದ್ದಾರೆ ಎಂದು ಸಂಜನಾ ಗಲ್ರಾನಿ ಅವರು ಇಂದಿರಾನಗರ ಠಾಣೆಗೆ ದೂರು ನೀಡಿದ್ದಾರೆ. ಇಂದಿರಾನಗರದ ಧೂಪನಹಳ್ಳಿಯಲ್ಲಿ ವಾಸವಾಗಿರುವ ಸಂಜನಾ ಗಲ್ರಾನಿ ಮನೆ ಬಳಿ ಯಶೋಧಮ್ಮ ಹಾಗು ರಾಜಣ್ಣ ಎಂಬುವವರ ಮನೆಯು ಇದೆ. ಇವರ ಮೇಲೆ ನಟಿ ಸಂಜನಾ ಗಲ್ರಾನಿ ದೂರು ನೀಡಿದ್ದಾರೆ.

Actress Sanjana Galrani Complaint
Image Source: Pinkvilla

ಯಶೋಧಮ್ಮ ಹಾಗು ರಾಜಣ್ಣ ಎನ್ನುವವರು ರಸ್ತೆಗೆ ಅಡ್ಡಲಾಗಿ ಕಾರುಗಳನ್ನು ನಿಲ್ಲಿಸುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ಕೊಲೆ ಮಾಡುತ್ತೇನೆ, ನಾವು ನಲವತ್ತು ವರ್ಷದಿಂದ ವಾಸ ಇದ್ದಿವಿ ಅಂತ ಅವಾಜ್ ಹಾಕಿದ್ದಲ್ಲದೆ ವೇಶ್ಯೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ನಟಿ ಸಂಜನಾ ಗಲ್ರಾನಿ. ಸದ್ಯ ನ್ಯಾಯಾಲಯದ ಅನುಮತಿ ಮೇರೆಗೆ ಎಫ್ ಐ ಆರ್ ದಾಖಲಾಗಿದೆ.

Join Nadunudi News WhatsApp Group

Actress Sanjana Galrani Complaint
Image Source: India Today

Join Nadunudi News WhatsApp Group