Shilpa Shetty Holi: ಹೋಲಿಕಾ ದಹನ ಆಚರಿಸುವಾಗ ಎಡವಟ್ಟು ಮಾಡಿದ ಶಿಲ್ಪಾ ಶೆಟ್ಟಿ, ಟ್ರೋಲ್ ಮಾಡಿದ ನೆಟ್ಟಿಗರು.
Actress Shilpa Shetty Controversy: ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಇದೀಗ ಹೋಳಿ ಹಬ್ಬದ ಸಂಭ್ರಮದಲ್ಲಿದ್ದಾರೆ.
ನಟಿ ಹೋಳಿ ಹಬ್ಬದ ನಿಮಿತ್ತ ಹೋಲಿಕಾ ದಹನ ಆಚರಿಸಲು ಮುಂದಾಗಿದ್ದಾರೆ. ಹೋಲಿಕಾ ದಹನ ಮಾಡುವಾಗ ನಟಿ ಮಾಡಿದ ಎಡವಟ್ಟು ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಇದೀಗ ನಟಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೋಲಿಕಾ ದಹನ ಮಾಡಿದ ನಟಿ ಶಿಲ್ಪಾ ಶೆಟ್ಟಿ
ಕುಟುಂಬ ಸಹಿತರಾಗಿ ಹೋಲಿಕಾ ದಹನ ಮಾಡುತ್ತಿರುವ ವಿಚಾರವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
“ನಾವು ಹೋಲಿಕಾ ದಹನವನ್ನು ಆಚರಿಸುತ್ತಿದ್ದೇವೆ. ನಾವೆಲ್ಲ ಚಿಕ್ಕ ಚಿಕ್ಕ ಚಿಟ್ ಗಳನ್ನೂ ಮಾಡಿ ಅದರಲ್ಲಿ ಋಣಾತ್ಮಕ ವಿಚಾರಗಳನ್ನು ಬರೆದು ಹೋಲಿಕಾ ಬೆಂಕಿಯಲ್ಲಿ ಸುಡುತ್ತೇವೆ.
ಇದು ನಾವು ಪ್ರತಿ ವರ್ಷವೂ ಮಾಡುತ್ತೇವೆ. ಇದರಿಂದ ನಕಾರಾತ್ಮಕ ಶಕ್ತಿ ಹೋಗುತ್ತದೆ. ದೇವರು ಸದಾ ನಮ್ಮೊಂದಿಗಿದ್ದಾನೆ, ನಮ್ಮನ್ನು ರಕ್ಷಿಸುತ್ತಾನೆ ಮತ್ತು ದುಷ್ಟರನ್ನು ಸುಟ್ಟು ಬೂದಿ ಮಾಡುತ್ತಾನೆ ಎಂದು ಭರವಸೆ ನೀಡುವ ಹಬ್ಬವಾಗಿದೆ” ಎಂದು ಬರೆದುಕೊಂಡಿದ್ದಾರೆ. ಆದರೆ ಶಿಲ್ಪಾ ಶೆಟ್ಟಿ ಅವರು ಬಿದಿರಿನ ಕೋಲುಗಳಿಂದ ದಹನ ಮಾಡುತ್ತಿರುವುದು ಟ್ರೂಲ್ ಆಗುತ್ತಿದೆ.
View this post on Instagram
ನಟಿ ಶಿಲ್ಪಾ ಶೆಟ್ಟಿ ಅವರನ್ನು ಟ್ರೂಲ್ ಮಾಡಿದ ನೆಟ್ಟಿಗರು
ನಟಿ ಶಿಲ್ಪಾ ಶೆಟ್ಟಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಬಿದಿರಿನ ಕೋಲುಗಳಿಂದ ದಹನ ಮಾಡಿರುವುದು ಟ್ರೊಲ್ ಗೆ ಕಾರಣವಾಗಿದೆ. ಶಿಲ್ಪಾ ಶೆಟ್ಟಿ ಅವರು ಮಾಡಿದ ತಪ್ಪು ಏನೆಂದರೆ, ಅವರು ಉರುವಲಿಗೆ ಬಿದಿರನ್ನು ಬಳಸುತ್ತಿದ್ದರು. ಅಸಲಿಗೆ ಬಿದಿರನ್ನು ದಹಿಸಲು ಬಳಸುವುದು ಹಿಂದೂ ಸಂಸ್ಕ್ರತಿಯಲ್ಲ.
ಅದರಲ್ಲಿಯೂ ಇಂತಹ ಹೋಲಿಕಾ ದಹನದಲ್ಲಿ ಅದನ್ನು ಬಳಸುವಂತೆ ಇಲ್ಲ. ಬದಲಿಗೆ ಹೋಲಿಕಾ ದಹನದ ಸಂದರ್ಭದಲ್ಲಿ ಹಸುವಿನ ಸಗಣಿಯಿಂದ ಮಾಡಿದ ಕಂದಗಳನ್ನು ಬಳಸುತ್ತಾರೆ.
ಒಂದು ವೇಳೆ ಅದು ಸಿಗದೇ ಹೋದರೆ, ಅಲಸಂದೆ ಮರದ ತುಂಡುಗಳನ್ನು ಬಳಸುತ್ತಾರೆ. ಆದರೆ ಇವುಗಳ ಅರಿವು ಇಲ್ಲದ ಶಿಲ್ಪಾ ಬಿದಿರಿನ ತುಂಡನ್ನು ಬಳಸಿದ್ದು ಟ್ರೊಲ್ ಗೆ ಕಾರಣವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುವ ಮೂಲಕ ಶಿಲ್ಪಾ ಶೆಟ್ಟಿ ಅವರನ್ನು ಟ್ರೊಲ್ ಮಾಡುತ್ತಿದ್ದಾರೆ.
ಹೋಲಿಕಾಳನ್ನು ಇಂದಿಗೂ ಮನೆಯ ಸಮೀಪ ಸುಡುವುದಿಲ್ಲ, ಇಂದಿನಿಂದ ಗಂಡ ರಾಜ್ ಕುಂದ್ರಾ ಅವರ ಎಲ ಮುಖವಾಡಗಳನ್ನು ಬೆಂಕಿಯಲ್ಲಿ ಸುಟ್ಟು ಹಾಕಿ, ಅವರಿಗೆ ಸ್ವಾತಂತ್ರ್ಯ ನೀಡಿ ಎಂದು ನಟಿಯನ್ನು ಕಾಲೆಳೆಯುತ್ತಿದ್ದಾರೆ.