Sindhu Death: ಕ್ಯಾನ್ಸರ್ ಚಿಕಿತ್ಸೆಗೆ ಹಣ ಇಲ್ಲದೆ ದುರಂತ ಸಾವು ಕಂಡ ಇನ್ನೊಬ್ಬ ಖ್ಯಾತ ನಟ, ನಟಿಯ ದುರಂತ ಅಂತ್ಯ.
ಚಿಕಿತ್ಸೆಗೆ ನೀಡಲು ಹಣವಿಲ್ಲದೆ ದುರಂತ ಸಾವು ಕಂಡ ಖ್ಯಾತ ನಟಿ.
Actress Sindhu Death: ಸಾಮಾನ್ಯವಾಗಿ ಚಿತ್ರರಂಗದಲ್ಲಿ ಕೆಲಸ ಮಾಡುವವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂದು ಎಲ್ಲರು ಊಹಿಸಿರುತ್ತಾರೆ. ಆದರೆ ಎಲ್ಲ ಕಲಾವಿದರ ಜೀವನ ಅಷ್ಟು ಸುಲಭವಾಗಿರುವುದಿಲ್ಲ. ಚಿತ್ರರಂಗದಲ್ಲಿ ನಟಿಸುವ ಕಲಾವಿದರು ಅವರದ್ದೇ ಆದ ಕೆಲ ಸಮಸ್ಯೆಗಳಿಂದ ಬಳಲುತ್ತಾರೆ. ಅವರ ಸಮಸ್ಯೆ ಹೇಳಿಕೊಳ್ಳಲಾರದ ಪರಿಸ್ಥಿಯಲ್ಲಿರುತ್ತದೆ.
ಚಿಕೆತ್ಸೆಗೆ ಹಣವಿಲ್ಲದೆ ಪರದಾಡಿದ ನಟಿ
ಮೇಲ್ನೋಟಕ್ಕೆ ಸಂತೋಷಿವಾಗಿದ್ದರು ಕೆಲವರ ಜೀವನದಲ್ಲಿ ಸಾಕಷ್ಟು ಕಹಿ ಘಟನೆಗಳಿರುತ್ತದೆ. ಇನ್ನು ಭಾರತೀಯ ಚಿತ್ರರಂಗದಲ್ಲಿ ಅನೇಕ ನಟ ನಟಿಯರು ತಮ್ಮ ಅನಾರೋಗ್ಯ ಸಮಸ್ಯೆಯಿಂದಾಗಿ ಮರಣ ಹೊಂದುತ್ತಾರೆ. ಚಿತ್ರರಂಗದಲ್ಲಿ ಸಹ ನಟ ನಟಿಯರು, ಹಾಸ್ಯ ನಟರು ಹೆಚ್ಚಾಗಿ ಕೊನೆಯ ಗಳಿಗೆಯಲ್ಲಿ ಆರ್ಥಿಕ ಸಮಸ್ಯೆಯಲ್ಲಿರುತ್ತಾರೆ.
ಅವರ ಅನಾರೋಗ್ಯದ ಕಾರಣ ಅವರಿಗೆ ಯಾವುದೇ ಚಿತ್ರಗಳಲ್ಲಿ ನಟಿಸುವ ಅವಕಾಶ ಕೂಡ ಇರುವುದಿಲ್ಲ. ಅನಾರೋಗ್ಯದ ಕಾರಣ ಆಸ್ಪತ್ರೆ ದಾಖಲಾಗಿದ್ದಾಗ ಅವರ ಸಹಾಯಕ್ಕೆ ಬರುವವರು ಯಾರು ಇರುವುದಿಲ್ಲ. ಇದೀಗ ತಮಿಳು ಚಿತ್ರರಂಗದ ಖ್ಯಾತ ನಟಿ ಓರ್ವರು ಹಣಕಾಸಿನ ತೊಂದರೆಯಿಂದಾಗಿ ಮರಣ ಹೊಂದಿದ್ದಾರೆ. ಚಿಕಿತ್ಸೆಗೆ ನೀಡಲು ಹಣವಿಲ್ಲದೆ ದುರಂತ ಸಾವು ಕಂಡಿದ್ದಾರೆ.
ಕ್ಯಾನ್ಸರ್ ನಿಂದ ದುರಂತ ಸಾವು ಕಂಡ ತಮಿಳಿನ ನಟಿ ಸಿಂಧು
ತಮಿಳಿನ ಖ್ಯಾತ ನಟಿ ಸಿಂಧು (Sindhu) ಅವರು 2020 ರಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅನಾರೋಗ್ಯದಿಂದ ಗುಣಮುಖವಾಗಲು ಸುದೀರ್ಘ ಚಿಕಿತ್ಸೆ ಪಡೆಯುತ್ತಿದ್ದರು. ಸ್ತನ ಕ್ಯಾನ್ಸರ್ ನಿಂದಾಗಿ ನಟಿ ಸಿಂಧು ಕಲ್ಪಕನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಟಿ ತಮ್ಮ ಚಿಕಿತ್ಸೆಗೆ ಹಣಕಾಸಿನ ತೊಂದರೆ ಅನುಭವಿಸಿದ್ದರು. ನಟಿ ಈ ಹಿಂದೆ ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಚಿಕಿತ್ಸೆಗೆ ಹಣ ಸಹಾಯ ಮಾಡುವಂತೆ ಕೋರಿ ವಿಡಿಯೋ ಮಾಡಿದ್ದರು.
ದಯಾಮರಣ ಕೋರಿದ ನಟಿ
ಕಾರ್ತಿ, ಈಸಾರಿ ಗಣೇಶ್, ಸತೀಶ್ ಕುಮಾರ್ ಸೇರಿದಂತೆ ಇನ್ನಿತರು ಅವರ ಚಿಕಿತ್ಸೆಗೆ ನೆರವಾಗಿದ್ದರು. ಆದರೆ ನಟಿಯ ಚಿಕಿತ್ಸೆಗೆ ಅಪಾರ ಹಣ ಅಗತ್ಯವಿತ್ತು. ಇನ್ನು ಸಂದರ್ಶನದಲ್ಲಿ ಮಾತನಾಡುವಾಗ ನಟಿ ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. ಇನ್ನು ಕ್ಯಾನ್ಸರ್ ನಿಂದಾಗಿ ತಮ್ಮ ಒಂದು ಸ್ತನವನ್ನು ಕತ್ತರಿಸಿ ತೆಗಿರುವ ಬಗ್ಗೆ ಕೂಡ ನಟಿ ಮಾಹಿತಿ ಹಂಚಿಕೊಂಡಿದ್ದರು.
ನೋವು ಮತ್ತು ಸಂಕಟದಿಂದ ನಾನು ಬದುಕಲು ಬಯಸುವುದಿಲ್ಲ. ಹೀಗಾಗಿ ದಯಾಮರಣವನ್ನು ಕೋರುತ್ತೇನೆ ಎಂದಿದ್ದರು. ಇನ್ನು ನಟಿ ಸಿಂಧು ಅವರು ಸ್ತನ ಕ್ಯಾನ್ಸರ್ ನಿಂದಾಗಿ ನಿನ್ನೆ ಮಧ್ಯರಾತ್ರಿ ಎರಡು ಗಂಟೆಗೆ ಮರಣ ಹೊಂದಿದ್ದಾರೆ. ತಮ್ಮ 44 ನೇ ವಯಸ್ಸಿನಲ್ಲಿ ತಮಿಳಿನ ನಟಿ ದುರಂತ ಸಾವನ್ನು ಕಂಡಿದ್ದಾರೆ. ನಟಿಯ ದುರಂತ ಸಾವಿನ ಬಗ್ಗೆ ತಿಳಿದು ಚಿತ್ರರಂಗ ಕಂಬನಿ ಮಿಡಿಯುತ್ತಿದೆ.