Soundarya: ಸಾಯುವ ಮುನ್ನ ಸೌಂದರ್ಯ ಗರ್ಭಿಣಿಯಾಗಿದ್ದರಾ, ನಿರ್ದೇಶಕರಿಗೆ ಕರೆಮಾಡಿ ಹೀಗೆ ಹೇಳಿದ್ದರು ಸೌಂದರ್ಯ.

ನಟಿ ಸೌಂದರ್ಯ ಅವರು ಸಾಯುವ ಮುನ್ನ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ.

Actress Soundarya Plane Accident: ಬಹುಭಾಷಾ ನಟಿ ಸೌಂದರ್ಯ (Soundarya) ಅವರು ಆಗಲಿ 19 ವರ್ಷಗಳು ಕಳೆದಿವೆ. ಇನ್ನು ಏಪ್ರಿಲ್ 17 ರಂದು ಸೌಂದರ್ಯ ಅವರ 19 ನೇ ಪುಣ್ಯತಿಥಿ ನೆರವೇರಿದೆ. ಇನ್ನು ನಟಿ ಸೌಂದರ್ಯ ಅವರ ಅಗಲಿಕೆಯಿಂದಾಗಿ ಭಾರತೀಯ ಚಿತ್ರರಂಗ ದೊಡ್ಡ ನಷ್ಟವನ್ನು ಅನುಭವಿಸಿದೆ.

ಇದೀಗ ಸೌಂದರ್ಯ ಅವರ ಬಗ್ಗೆ ತಿಳಿದಿರದ ಕೆಲವು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಈ ನಟಿಯ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Actress Soundarya Plane Accident
Image Source: Times Of India

ಏಪ್ರಿಲ್ 17 ರಂದು ವಿಮಾನ ಅಪಘಾತದಲ್ಲಿ ನಿಧನ ಹೊಂದಿದ್ದರು ನಟಿ ಸೌಂದರ್ಯ
ಏಪ್ರಿಲ್ 17 2004 ರಂದು ಸೌಂದರ್ಯ ಅವರು ವಿಮಾನ ಅಪಘಾತದಲ್ಲಿ ನಿಧನರಾಗಿದ್ದರು. ಸೌಂದರ್ಯ ಅವರು ಸಾವನ್ನಪ್ಪುವಾಗ ಅವರಿಗೆ ಕೇವಲ 31 ವರ್ಷ ಆಗಿತ್ತು. ಸೌಂದರ್ಯ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವೇಳೆ ಸಿನಿಮಾಗಳ ಜೊತೆಗೆ ರಾಜಕೀಯದಲ್ಲಿ ಕೂಡ ಭಾಗಿಯಾಗಿದ್ದರು. ಬಿಜೆಪಿ ಪಕ್ಷಕ್ಕೆ ಸೌಂದರ್ಯ ಸೇರ್ಪಡೆಗೊಂಡಿದ್ದರು.

ಬಿಜೆಪಿ ಪ್ರಚಾರದ ಕಾರಣ ಬೆಂಗಳೂರಿಂದ ಕರೀಂನಗರಕ್ಕೆ ತೆರಳುತ್ತಿದ್ದ ವೇಳೆ ವಿಮಾನ ಅಪಘಾತದಲ್ಲಿ ನಟಿ ಸೌಂದರ್ಯ ನಿಧನರಾಗಿದ್ದರು. ಸೌಂದರ್ಯ ಅವರ ಜೊತೆ ಅವರ ಕಿರಿಯ ಸಹೋದರ ಕೂಡ ಸಾವನ್ನಪ್ಪಿದ್ದಾರೆ. ಹಾಗೆಯೆ ಸೌಂದರ್ಯ ಅವರ ಅಗಲಿಕೆಯ ಬಳಿಕ ಅವರ ಪತಿ ಗೋವಾ ಮೂಲದ ಡಾಕ್ಟರ್ ಅನ್ನು ಎರಡನೇ ಮದುವೆ ಆಗಿ ಈಗ ವಿದೇಶದಲ್ಲಿ ವಾಸವಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

Actress Soundarya Plane Accident
Image Source: Filmibeat

ಸಾಯುವ ಸಮಯದಲ್ಲಿ ಗರ್ಭಿಣಿ ಆಗಿದ್ದಾರಾ ನಟಿ ಸೌಂದರ್ಯ
ವಿಮಾನ ಅಪಘಾತದಲ್ಲಿ ಸಾವು ಸಂಭವಿಸುವ ಒಂದು ದಿನದ ಮೊದಲು ನಟಿ ಸೌಂದರ್ಯ ಅವರು ತಮಿಳು ನಿರ್ದೇಶಕ ಆರ್ ವಿ ಉದಯಕುಮಾರ್ ಅವರ ಬಳಿ ಒಂದು ಗಂಟೆಯ ಕಾಲ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ತಾನು ತಾಯಿಯಾಗಲಿದ್ದೇನೆ ಮತ್ತು ಚಿತ್ರರಂಗದಿಂದ ದೂರ ಇರಲು ಬಯಸುತ್ತೇನೆ ಎಂದು ನಟಿ ನಿರ್ದೇಶಕರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಾಯುವ ಸಮಯದಲ್ಲಿ ನಟಿ ಗರ್ಭಿಣಿಯಾಗಿದ್ದಾರೆ ಎನ್ನಲಾಗುತ್ತಿದೆ.

Join Nadunudi News WhatsApp Group

Actress Soundarya Plane Accident
Image Source: FilmiBeat

Join Nadunudi News WhatsApp Group