Tamannaah Bhatia: ಗೆಳತಿ ತಮನ್ನಾಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟ ರಾಮ್ ಚರಣ್, ಊಹಿಸಲಾಗದು ಈ ವಜ್ರದ ಬೆಲೆ

5 ನೇ ಅತಿ ದೊಡ್ಡ ವಜ್ರದ ಉಂಗುರವನ್ನು ಧರಿಸಿದ ನಟಿ ತಮನ್ನಾ.

Actress Tamannaah Bhatia: ಖ್ಯಾತ ನಟಿ ತಮನ್ನಾ ಇದೀಗ ಸುದ್ದಿಯಲ್ಲಿದ್ದಾರೆ. ನಟಿ ತಮನ್ನಾ (Tamannaah Bhatia) ಇದೀಗ ಕಾವಾಲಾ ಹಾಡಿನ ಮೂಲಕ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಎಲ್ಲಿ ನೋಡಿದರು ಈಗ ಕಾವಾಲಾ ಹಾಡಿನದೇ ಸುದ್ದಿ ಆಗಿದೆ. ನಟಿ ತಮನ್ನಾ ತಮ್ಮ ನಟನೆಯ ಮೂಲಕ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ನಟಿ ತಮನ್ನಾ ಕಾವಾಲಾ ಹಾಡಿನ ಮೂಲಕ ಅಭಿಮಾನಿಗಳ ಮೋಡಿ ಮಾಡುತ್ತಿದ್ದಾರೆ.

Actress Tamanna wearing the 5th largest diamond ring
Image Credit: Siasat

ಕಾವಾಲಾ ಹಾಡಿನ ಮೂಲಕ ಫೇಮಸ್ ಆದ ನಟಿ ತಮನ್ನಾ
ನಟಿ ತಮನ್ನಾ ಅವರ ಕಾವಾಲಾ ಹಾಡಿಗೆ ಹೆಚ್ಚಿನ ಜನರು ಫಿದಾ ಆಗಿದ್ದಾರೆ. ಜನರು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟಿ ತಮನ್ನಾ ಎಲ್ಲಾ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮನ್ನಾ ನಟನೆ ಜೊತೆಗೆ ಫ್ಯಾಶನ್ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ತಮನ್ನಾ ಬಳಿ ಅತಿ ದೊಡ್ಡ ವಜ್ರದ ಉಂಗುರವಿದೆ. ಇದು ವಿಶ್ವದಲ್ಲಿಯೇ 5 ನೇ ಅತಿ ದೊಡ್ಡ ಉಂಗುರವಾಗಿದೆ ಎಂದು ಹೇಳಲಾಗುತ್ತಿದೆ. ತಮ್ಮ ಬಳಿ ಇರುವ ಉಂಗುರವನ್ನು ಅವರಿಗೆ ಗಿಫ್ಟ್ ಕೊಟ್ಟಿದ್ದು ಒಬ್ಬರು ಸ್ಟಾರ್ ನಟನ ಪತ್ನಿ ಎನ್ನಲಾಗುತ್ತಿದೆ.

5 ನೇ ಅತಿ ದೊಡ್ಡ ಉಂಗುರವನ್ನು ಧರಿಸಿದ ನಟಿ ತಮನ್ನಾ
ತಮನ್ನಾ ವಿಶ್ವದಲ್ಲಿಯೇ 5 ನೇ ಅತಿ ದೊಡ್ಡ ಉಂಗುರದ ಒಡತಿಯಾಗಿದ್ದಾರೆ. ಇದರ ಬೆಲೆ ಬರೋಬ್ಬರಿ 2 ಕೋಟಿ ರೂಪಾಯಿ ಎನ್ನಲಾಗಿದೆ. ಇದು ತಮನ್ನಾ ಮಾಡಿದ ಉಂಗುರವಲ್ಲ. ಇದನ್ನು ತೆಲುಗು ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನಾ ಗಿಫ್ಟ್ ನೀಡಿದ್ದು. ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಿದ ಕರಣ ತಮನ್ನಾ ಅವರಿಗೆ ಈ ಉಂಗುರವನ್ನು ಗಿಫ್ಟ್ ನೀಡಲಾಗಿದೆ ಎನ್ನಲಾಗಿದೆ.

Actress Tamannaah Bhatia latest news
Image Credit: Herzindagi

ಆ ಸಿನಿಮಾದಲ್ಲಿ ನಟಿ ತಮನ್ನಾ ಜೊತೆಗೆ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ಅನುಷ್ಕಾ ಶೆಟ್ಟಿ, ವಿಜಯ್ ಸೇತುಪತಿ, ನಯನತಾರ ಮತ್ತು ನಿಹಾರಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವನ್ನು ಕೊನಿದೆಲ್ಲಾ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ರಾಮ್ ಚರಣ್ ನಿರ್ಮಿಸಿದ್ದರು. ಈ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಸುಂದರವಾದ ಉಡುಗೊರೆಯನ್ನು ತಮನ್ನಾಗೆ ಗಿಫ್ಟ್ ನೀಡಲಾಗಿದೆ. ತಮನ್ನಾ ಈ ಉಂಗುರವನ್ನು ಬೆರಳಿಗೆ ಹಾಕಿಕೊಂಡು ಪೋಸ್ ನೀಡಿದ್ದಾರೆ. ಹಳೆಯ ಫೋಟೋ ಮತ್ತೆ ವೈರಲ್ ಆಗಿದೆ.

ನಟಿ ತಮನ್ನಾ ಫೋಟೋವನ್ನು ಉಪಾಸನಾ ಶೇರ್ ಮಾಡಿದ್ದರು. ತಮನ್ನಾ ಕೂಡ ಪ್ರತಿಕ್ರಿಯೆ ನೀಡಿ ಪ್ರೀತಿ ವ್ಯಕ್ತಪಡಿಸಿದ್ದರು. ತಮನ್ನಾ ಗಿಫ್ಟ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಸೈರಾ ಸಿನಿಮಾದಲ್ಲಿ ತಮನ್ನಾ ನಟನೆಯನ್ನು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ಅದ್ಭುತ ನಟನೆಗೆ ಸಿಕ್ಕ ಸುಂದರ ಗಿಫ್ಟ್ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದರು. ಹಳೆಯ ಗಿಫ್ಟ್ ವಿಚಾರ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Nadunudi News WhatsApp Group

Join Nadunudi News WhatsApp Group