Trisha Leg Injury: ಅಪಘಾತದಲ್ಲಿ ಕಾಲು ಮುರಿದುಕೊಂಡ ನಟಿ ತ್ರಿಷಾ, ಅಪಘಾತ ಹೇಗಾಯಿತು ಎಂದು ಹೇಳಿದ ತ್ರಿಷಾ.

Trisha Leg Injury: ತ್ರಿಷಾ ಕೃಷ್ಣನ್ (Trisha Krishnan) ದೇಶದ ಚಿತ್ರರಂಗದ ಟಾಪ್ ನಟಿ. ಕನ್ನಡ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ನಟನೆಯನ್ನ ಮಾಡುವುದರ ಮೂಲಕ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿರುವ ನಟಿ ತ್ರಿಷಾ ಅವರು ಬರಿ ಚಿತ್ರಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ (Social Media) ಆದಲ್ಲಿ ಕೂಡ ಸಾಕಷ್ಟು ಸಕ್ರಿಯರಾಗಿ ಇರುತ್ತಾರೆ.

ಸದ್ಯ ಕೆಲವು ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿ ಇರುವ ನಟಿ ತ್ರಿಷಾ ಅವರು ಈಗ ತಮ್ಮ ಕಾಲಿಗೆ ದೊಡ್ಡ ಮಟ್ಟದ ಪೆಟ್ಟನ್ನ ಮಾಡಿಕೊಂಡಿದ್ದಾರೆ. ಕೆಲವು ಸಮಯಗಳಿಂದ ನಟಿ ತ್ರಿಷಾ ನಟನೆಯ ಯಾವುದೇ ಚಿತ್ರ ಕೂಡ ಬಿಡುಗಡೆ ಆಗಿಲ್ಲ.

ನಟಿ ತ್ರಿಷಾ ಅವರು ಕೆಲವು ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿ ಇದ್ದು ಕೆಲವು ಚಿತ್ರದ ಡಬ್ಬಿಂಗ್ ಕೆಲಸಗಳು ಕೂಡ ಆಗುತ್ತಿದೆ. ಇದರ ನಡುವೆ ನಟಿ ತ್ರಿಷಾ ಅವರ ಅಭಿಮಾನಿಗಳಿಗೆ ಬೇಸರದ ಸುದ್ದಿ ಬಂದಿದೆ. ಹೌದು ನಟಿ ತ್ರಿಷಾ ಅವರು ತಮ್ಮನ್ನ ಕಾಲನ್ನ ಮುರಿದುಕೊಂಡು ನೋವನ್ನ ಅನುಭವಿಸುತ್ತಿದ್ದಾರೆ.

Actress Trisha broke her leg in an accident
Image Credit: economictimes.indiatimes

ಕನ್ನಡದಲ್ಲಿ ಅಪ್ಪು ಜೊತೆ ನಟಿಸಿದ ನಟಿ ತ್ರಿಷಾ
ಹೌದು ತ್ರಿಷಾ ಅವರು ಕನ್ನಡ ಹೆಮ್ಮೆಯ ನಟ ಮತ್ತು ಹಲವು ಜನರ ಪಾಲಿಗೆ ದೇವರಾದ ನಟ ಪುನೀತ್ ರಾಜಕುಮಾತ್ (Puneeth Rajakumar) ಅವರ ಜೊತೆ ನಟನೆಯನ್ನ ಮಾಡಿದ್ದಾರೆ.

ತಮಿಳಿನಲ್ಲಿ ಸಾಕಷ್ಟು ನಟರ ಜೊತೆ ನಟನೆಯನ್ನ ಮಾಡುವುದರ ಮೂಲಕ ಫೇಮಸ್ ಆಗಿರುವ ನಟಿ ತ್ರಿಷಾ ಅವರು ಅಪಘಾತದಲ್ಲಿ ತಮ್ಮ ಕಾಲನ್ನ ಮುರಿದುಕೊಂಡಿದ್ದಾರೆ.

Join Nadunudi News WhatsApp Group

ವಿದೇಶ ಪ್ರವಾಸದಲ್ಲಿ ಕಾಲು ಮುರಿದುಕೊಂಡ ನಟಿ ತ್ರಿಷಾ
ಹೌದು ನಟಿ ತ್ರಿಷಾ ಅವರು ವಿದೇಶದ ಪ್ರವಾಸದಲ್ಲಿ ತಮ್ಮ ಕಾಲನ್ನ ಮುರಿದುಕೊಂಡಿದ್ದಾರೆ. ನಟಿ ತ್ರಿಷಾ ಅವರು ಕಾಲು ಮುರಿದುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಕೂಡ ಆಗಿದೆ. ಪ್ರವಾಸದಲ್ಲಿ ಕಾಲು ಮುರಿದ ಕಾರಣ ನಟಿ ತ್ರಿಷಾ ಅವರು ಪ್ರವಾಸದಿಂದ ವಾಪಾಸ್ ಮರಳಿದ್ದಾರೆ ಎಂದು ತಿಳಿದುಬಂದಿದೆ.

ಕಾಲಿನ ಫೋಟೋ ಶೇರ್ ಮಾಡಿದ ನಟಿ ತ್ರಿಷಾ
ಹೌದು ನಟಿ ತ್ರಿಷಾ ಅವರು ತಮ್ಮ ಕಾಲಿಗೆ ಪೆಟ್ಟಾಗಿರುವ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿರುವ ನಟಿ ತ್ರಿಷಾ ಅವರು. ಸಣ್ಣ ಅಪಘಾತದಲ್ಲಿ ತನ್ನ ಕಾಲಿನ ಮೂಳೆಗೆ ಪೆಟ್ಟಾಗಿರುವ ಕಾರಣ ವಿದೇಶ ಪ್ರವಾಸದಿಂದ ಮರಳಿ ಬರಬೇಕಾಯಿತು ಎಂದು ಹೇಳಿದ್ದಾರೆ.

Actress Trisha returned from a trip with a broken leg
Image Credit: timesofindia.indiatimes

ಮೋಹನ್ ಲಾಲ್ ಜೊತೆ ಸಿನಿಮಾದ ನಂತರ ನಟಿ ತ್ರಿಷಾ ವಿದೇಶ ಪ್ರವಾಸ
ನಟಿ ತ್ರಿಷಾ ಅವರು ಮೋಹನ್ ಲಾಲಾ (Mohan Lal) ಅವರ ರಾಮ್ ಚಿತ್ರದಲ್ಲಿ ನಟನೆಯನ್ನ ಮಾಡಿದ ಚಿತ್ರರಂಗದಿಂದ ಕೊಂಚ ವಿರಾಮವನ್ನ ತಗೆದುಕೊಂಡು ಕೆಲವು ಯುರೋಪಿಯನ್ ದೇಶಗಳನ್ನ ಸುತ್ತಾಡಲು ಶುರು ಮಾಡಿದರು.

ಸದ್ಯ ವಿದೇಶ ಪ್ರವಾಸದ ಸಮಯದಲ್ಲಿ ಸಣ್ಣ ಅಪಘಾತ ಆಗಿದ್ದು ನಟಿ ತ್ರಿಷಾ ಅವರ ಕಾಲಿಗೆ ಬಲವಾದ ಪೆಟ್ಟಾದ ಕಾರಣ ಕಾಲಿಗೆ ಮೂಳೆ ಮುರಿದಿದ್ದು ಸದ್ಯ ನಟಿ ತ್ರಿಷಾ ಅವರು ದೇಶಕ್ಕೆ ವಾಪಾಸ್ ಆಗಿದ್ದಾರೆ. ನಟಿ ತ್ರಿಷಾ ಅವರು ತಮ್ಮ ಕಾಲಿನ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಅದನ್ನ ನೋಡಿದ ನಟಿ ತ್ರಿಷಾ ಅವರ ಅಭಿಮಾನಿಗಳು ಆದಷ್ಟು ಬೇಗ ಗುಣಮುಖರಾಗಿ ಎಂದು ಕಮೆಂಟ್ ಮಾಡಿದ್ದಾರೆ.

ನಟಿ ತ್ರಿಷಾ ಅವರು ಕೆಲವು ಸಮಯಗಳ ಕಾಲ ಬೆಡ್ ರೆಸ್ಟ್ ನಲ್ಲಿ ಇರಬೇಕು ಎಂದು ವೈದ್ಯರು ಸಲಹೆಯನ್ನ ನೀಡಿದ್ದು ಸದ್ಯ ನಟಿ ತ್ರಿಷಾ ಅವರು ಮನೆಯಲ್ಲಿ ವಿಶ್ರಾಂತಿಯನ್ನ ಪಡೆದುಕೊಳ್ಳುತ್ತಿದ್ದಾರೆ.

Join Nadunudi News WhatsApp Group