Actress Urvashi: ನಟಿ ಊರ್ವಶಿ ಗಂಡ ವಿಚ್ಛೇಧನ ಕೊಟ್ಟಿದ್ದು ಯಾಕೆ…? ಈ ಕಾಟದಿಂದ ಮಗಳನ್ನ ಕಳೆದುಕೊಂಡ ನಟಿ ಊರ್ವಶಿ.

ಇದೀಗ ನಟಿ ಊರ್ವಶಿ ಅವರು ತಮ್ಮ ಮೊದಲ ವೈವಾಹಿಕ ಜೀವನದ ವಿಚ್ಛೇದನಕ್ಕೆ ಕಾರಣ ಏನೆನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

Actress Urvashi Divorce Reason: ಕನ್ನಡದ ಖ್ಯಾತ ಹಿರಿಯ ನಟಿ ಊರ್ವಶಿ (Urvashi) ಎಲ್ಲರಿಗು ಪರಿಚತರಾಗಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ನಟಿ ಊರ್ವಶಿ ತಮ್ಮ ನಟನೆಯನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ. ನಟಿ ಊರ್ವಶಿ ಕನ್ನಡ ಸೇರಿದಂತೆ ಪರ ಭಾಷಾ ಚಿತ್ರಗಳಲ್ಲೂ ನಟಿ ಸೈ ಎನಿಸಿಕೊಂಡಿದ್ದಾರೆ.

ಈ ಹಿಂದೆ ನಟಿ ತಮ್ಮ ವೈವಾಹಿಕ ಜೀವನದ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ತಮ್ಮ ಮೊದಲ ಮದುವೆಯ ವಿಚ್ಛೇದನ ಪಡೆದು ಎರಡನೇ ಮದುವೆ ಆಗಿರುವ ಬಗ್ಗೆ ಎಲ್ಲರಿಗು ತಿಳಿದಿರುವ ವಿಚಾರ. ಇದೀಗ ನಟಿ ಊರ್ವಶಿ ಅವರು ತಮ್ಮ ಮೊದಲ ವೈವಾಹಿಕ ಜೀವನದ ವಿಚ್ಛೇದನಕ್ಕೆ ಕಾರಣ ಏನೆನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

Actress Urvashi Divorce Reason
Image Credit: Instanews

 

ವೈವಾಹಿಕ ಜೀವನದಿಂದ ವಿಚ್ಛೇದನ ಪಡೆದಿರುವ ನಟಿ ಊರ್ವಶಿ
ನಟಿ ಊರ್ವಶಿ ಅವರು 23 ವರ್ಷಗಳ ಹಿಂದೆ ಮಲಯಾಳಂ ನಟ ಮನೋಜ್ ಕೆ. ಜಯನ್ (Manoj K. Jayan) ಅವರನ್ನು ಮದುವೆಯಾಗಿದ್ದರು. ಊರ್ವಶಿ ಹಾಗೂ ಮನೋಜ್ ದಂಪತಿಗೆ ತೇಜ ಲಕ್ಷ್ಮಿ ಎನ್ನುವ ಮಗಳಿದ್ದಾಳೆ. ಆದರೆ 8 ವರ್ಷದ ಬಳಿಕ ಈ ಜೋಡಿ ವಿಚ್ಛೇದನ ಪಡೆದಿದ್ದಾರೆ. ಈ ಹಿಂದೆ ಸಂದರ್ಶನದಲ್ಲಿ ನಟಿ ವಿಚ್ಛೇದನದ ಕಾರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ನನ್ನ ಕುಡಿತದ ಚಟದಿಂದಾಗಿ ಮಗಳನ್ನು ದೂರ ಮಾಡಿಕೊಂಡೆ
‘ನಮ್ಮ ವಿಚ್ಛೇದನಕ್ಕೆ ಕಾರಣ ಎಂದರೆ ಅದು ಕುಡಿತದ ಚಟ. ಮನೋಜ್ ಅವರ ಕುಟುಂಬದಲ್ಲಿ ಎಲ್ಲರಿಗು ಕುಡಿತದ ಅಭ್ಯಾಸವಿತ್ತು. ಮನೋಜ್ ನನಗೆ ಆರಂಭದಲ್ಲಿ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದರು. ನಾನು ಕೂಡ ಕುಡಿತಕ್ಕೆ ತುಂಬಾ ಅಡಿಕ್ಟ್ ಆಗಿಬಿಟ್ಟೆ. ಮುಂದೆ ಈ ವಿಚಾರಕ್ಕೆ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಯಿತು. ಈ ಸಾಂಸಾರಿಕ ಗಲಾಟೆಯಲ್ಲಿ ನನ್ನ ಮಗಳು ನನ್ನಿಂದ ದೂರ ಆಗುವಂತಾಯಿತು. ಕೊನೆಗೂ ನನ್ನ ಮಗಳು ನನ್ನ ಕೈಗೆ ಸಿಗ್ಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.

Join Nadunudi News WhatsApp Group

Actress Urvashi latest news update
Image Credit: Vilmibeat

ವಿಚ್ಛೇದನದ ಬಳಿಕ ಊರ್ವಶಿ ಅವರ ದಾಂಪತ್ಯ ಜೀವನ
ಬಹುಭಾಷಾ ನಟಿ ಊರ್ವಶಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು ಕೂಡ ವೈವಾಹಿಕ ಜೀವನದಲ್ಲಿ ಬೇಸತ್ತಿದ್ದರು. ಕನ್ನಡದ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಊರ್ವಶಿ ವೈವಾಹಿಕ ಇವನದ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಿದ್ದರು. ಇನ್ನು 2013 ರಲ್ಲಿ ಚೆನ್ನೈ ಮೂಲದ ಶಿವಪ್ರಸಾದ್ ಅವರನ್ನು ಊರ್ವಶಿ ಮದುವೆಯಾದರು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ಮನೋಜ್ ಅವರು ಕೂಡ 2011 ರಲ್ಲಿ ಎರಡನೇ ಮದುವೆ ಆಗಿದ್ದರು.

Join Nadunudi News WhatsApp Group