Adah Sharma: ದಿಡೀರ್ ಆಸ್ಪತ್ರೆಗೆ ದಾಖಾಲಾದ ಪುನೀತ್ ರಾಜಕುಮಾರ್ ಚಿತ್ರದ ನಾಯಕಿ, ಆತಂಕದಲ್ಲಿ ಫ್ಯಾನ್ಸ್.

ಅನಾರೋದ್ಯದಲ್ಲಿ ನಟಿ ಅದಾ ಶರ್ಮಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

Adah Sharma Health Issue: ಬಹುಭಾಷಾ ನಟಿ ಅದಾ ಶರ್ಮಾ (Adah Sharma) ದಿ ಕೇರಳ ಸ್ಟೋರಿ ಚಿತ್ರದ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ದಿ ಕೇರಳ ಸ್ಟೋರಿ ಸಿನಿಮಾ ಅದಾ ಶರ್ಮಾ ಅವರ ಸಿನಿ ಪಯಣಕ್ಕೆ ಮಹತ್ತರ ತಿರುವನ್ನು ನೀಡಿದೆ. ಈ ಚಿತ್ರ ತೆರೆ ಕಂಡು ಯಶಸ್ವಿಯಾದ ಬಳಿಕ ನಟಿ ಚಿತ್ರರಂಗದಲ್ಲಿ ಬಾರಿ ಬೇಡಿಕೆ ಪಡೆದಿದ್ದಾರೆ. ನಟಿ ಅದಾ ಶರ್ಮ ಅವರು ಪುನೀತ್ ರಾಜಕುಮಾರ್ ಅವರ ರಣ ವಿಕ್ರಮ ಚಿತ್ರದಲ್ಲಿ ನಟನೆ ಮಾಡುವುದರ ಮೂಲಕ ಕನ್ನಡಿಗರ ಮೆಚ್ಚುಗೆಗೆ ಕೂಡ ಕಾರಣವಾಗಿದ್ದರು. 

ಸಾಲು ಸಾಲು ಚಿತ್ರಗಳು ನಟಿಯನ್ನು ಅರಸಿ ಬಂದಿದೆ. ಈ ಹಿಂದೆ ದಿ ಕೇರಳ ಸ್ಟೋರಿ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯ ಸಮಯದಲ್ಲಿ ನಟಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಇದಾದ ಬಳಿಕ ಚೇತರಿಸಿಕೊಂಡು ನಟಿ ಚಿತ್ರಿಕರಣಕ್ಕೆ ಮರಳಿದ್ದರು. ಇದೀಗ ನಟಿ ಮತ್ತೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದಾರೆ. 

Adah Sharma Health Issue
Image Credit: Timesofindia

ಬಹುಭಾಷಾ ನಟಿ ಅದಾ ಶರ್ಮಾ
ನಟಿ ಅದಾ ಶರ್ಮಾ ನಟ ಪುನೀತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು. ಕನ್ನಡ ಸೇರಿದಂತೆ ತೆಲುಗು, ತಮಿಳು ಹಿಂದಿ ಚಿತ್ರಗಳಲ್ಲೂ ನಟಿ ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನಸ್ಸನು ಗೆದಿದ್ದಾರೆ. ಇನ್ನು ದಿ ಕೇರಳ ಸ್ಟೋರಿ ಚಿತ್ರದ ಮೂಲಕ ಅದಾ ಶರ್ಮಾ ಹೆಚ್ಚಿನ ಜನಪ್ರಿಯತೆ ಪಡೆದಿದ್ದರು. ನಟಿಯ ಅಭಿನಯಕ್ಕೆ ಸಾಕಷ್ಟು ಅಭಿಮಾನಿಗಳು ನಟಿಯನ್ನು ಮೆಚ್ಚಿಕೊಂಡಿದ್ದರು.

ಇನ್ನು ನಟಿ ಅದಾ ಶರ್ಮಾ ಸಿನಿಮಾಗಳ ಚಿತ್ರೀಕರಣದ ಜೊತೆಗೆ ವೆಬ್ ಸಿರೀಸ್ ಗಳಲ್ಲಿಯೂ ನಟಿಸುತ್ತಿದ್ದಾರೆ. ಪ್ರಸ್ತುತ ನಟಿ ಕಮಾಂಡೋ ವೆಬ್ ಸಿರೀಸ್ ಪ್ರಚಾರದಲ್ಲಿ ಬ್ಯುಸಿ ಆಗಿದ್ದರು. ಆಗಸ್ಟ್ 11 ರಿಂದ ಓಟಿಟಿ ಫ್ಲಾಟ್ ಫಾರ್ಮ್ ಹೊಟ್ಸ್ಟಾರ್ ನಲ್ಲಿ ಕಮಾಂಡೋ ವೆಬ್ ಸಿರೀಸ್ ಬಿಡುಗಡೆಯಾಗಲಿದೆ. ವೆಬ್ ಸಿರೀಸ್ ಪ್ರಚಾರದ ವೇಳೆ ನಟಿಯ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆ ದಾಖಲಾಗಿದ್ದಾರೆ.

Actress Adah Sharma has been hospitalized in Anarodya
Image Credit: Indiatoday

ದಿಡೀರ್ ಆಸ್ಪತ್ರೆಗೆ ದಾಖಲಾದ ಕಾಶ್ಮೀರ್ ಫೈಲ್ಸ್ ನಿಕ್ಕಿ ಆದಾ ಶರ್ಮಾ
ನಟಿ ಆದ ಶರ್ಮಾ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದಾ ಅಲರ್ಜಿ ಮತ್ತು ಅತಿಸಾರದಿಂಸ ನಟಿ ಅಸ್ವಸ್ಥರಾಗಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ನಟಿಯ ಅನಾರೋಗ್ಯದ ಬಗ್ಗೆ ನಟಿಯ ಆಪ್ತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

Join Nadunudi News WhatsApp Group

ಅದಾ ಶರ್ಮಾ ಬೇಗ ಗುಣಮುಖವಾಗಲಿ ಎಂದು ಅಭಿಮಾನಿಗಳು ಆಶಿಸುತಿದ್ದಾರೆ. ಇನ್ನು ನಟಿಯು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ.

Join Nadunudi News WhatsApp Group