Ads By Google

Adalat Update: ಆಗಸ್ಟ್ 15 ಕ್ಕಿಂತ ಮೊದಲು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ ಮಹಿಳೆಯರಿಗೆ 6000 ರೂ ಜಮಾ, ಸರ್ಕಾರದ ಘೋಷಣೆ

Adalat For Gruha Lakshmi Amount

Image Credit: Original Source

Ads By Google

Adalat For Gruha Lakshmi Amount: ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Lakshmi ಅನುಷ್ಠಾನಗೊಂಡಿದ್ದರು ಕೂಡ ಯೋಜನೆಯ ಲಾಭ ಸಂಪೂರ್ಣ ಮಹಿಳೆಯರಿಗೆ ತಲುಪುತ್ತಿಲ್ಲ. ತಾಂತ್ರಿಕ ದೋಷಗಳ ನಿವಾರಣೆಗೆ ಸರ್ಕಾರ ಕ್ರಮ ಕೈಗೊಂಡಿದ್ದು ಈಗಾಗಲೇ ಸಾಕಷ್ಟು ಬದಲಾವಣೆಯನ್ನು ತಂದಿದೆ.

ಅರ್ಹ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ವಿವಿಧ ಸೌಲಭ್ಯವನ್ನು ನೀಡುತ್ತಿದೆ. ಇದೀಗ ಸರ್ಕಾರದಿಂದ ಗೃಹ ಲಕ್ಷ್ಮಿ ಯೋಜನೆಯ ಕುರಿತು ಮಹತ್ವದ ನಿರ್ಧಾರ ಹೊರಬಿದ್ದಿದೆ. ನೀವು Gruha Lakshmi ಯೋಜನೆಗೆ ಆಗಸ್ಟ್ 15 ಕ್ಕಿಂತ ಮೊದಲು ಅರ್ಜಿ ಸಲ್ಲಿಸಿದ್ದರೆ ಈ ಮಾಹಿತಿ ನೀವು ತಿಳಿದುಕೊಳ್ಳುವುದು ಉತ್ತಮ.

Image Credit: Kannada News Today

ಆಗಸ್ಟ್ 15 ಕ್ಕಿಂತ ಮೊದಲು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಈ ಮಾಹಿತಿ ತಿಳಿದುಕೊಳ್ಳಿ
ಹೌದು, ಸರ್ಕಾರ ಇದೀಗ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಈಗಾಗಲೇ ಮೂರು ಕಂತುಗಳ ಹಣ ಜಮಾ ಆಗಿದೆ. ಆದರೆ ಸಾಕಷ್ಟು ಮಹಿಳೆಯರು ಒಂದು ಕಂತಿನ ಹಣ ಕೂಡ ಬಂದಿಲ್ಲ. ಸದ್ಯ ನೀವು ಆಗಸ್ಟ್ 15 ರ ಮೊದಲು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಹಣ ಜಮಾ ಆಗದಿರುವ ಬಗೆ ಚಿಂತಿಸುವ ಅಗತ್ಯ ಇಲ್ಲ. ಆಗಸ್ಟ್ 15 ರ ಮೊದಲು ಅರ್ಜಿ ಸಲ್ಲಿಸಿದವರಿಗೆ ಯೋಜನೆಯ ಹಣ ತಲುಪಿಸಲು ಗೃಹ ಲಕ್ಷ್ಮಿ ಅದಾಲತ್ ನಡೆಸಲು ಸರ್ಕಾರ ನಿರ್ಧರಿಸಿದೆ. ಇದರ ಮೂಲಕ ಅರ್ಹರಿಗೆ ಯಾವುದೇ ಸಮಸ್ಯೆಗಳಿಲ್ಲದೆ ಹಣ ಜಮಾ ಮಾಡುವುದಾಗಿ ಭರವಸೆ ನೀಡಿದೆ.

ಇಂತಹ ಮಹಿಳೆಯರ ಖಾತೆಗೆ 6000 ಹಣ ಜಮಾ
ರಾಜ್ಯ ಸರ್ಕಾರ ಇದೀಗ ಗೃಹ ಲಕ್ಷ್ಮಿ ಅದಾಲತ್ ಆಯೋಜಿಸಿದ್ದು, ನೀವು ಆಗಸ್ಟ್ 15 ರ ಮೊದಲು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಹಣ ಬಂದಿಲ್ಲದಿದ್ದರೆ ದೂರನ್ನು ಗ್ರಾಮ ಪಂಚಾಯತ್ ನಲ್ಲಿ ನೀಡಬಹುದಾಗಿದೆ. ಅವರು ನಿಮ್ಮ ಖಾತೆಯನ್ನು ತಕ್ಷಣವೇ ಪರಿಶೀಲಿಸಿ ಹಣ ಜಮಾ ಮಾಡುವಲ್ಲಿ ಯಶಸ್ವಿಯಾಗಲಿದ್ದಾರೆ. ಇನ್ನು ಡಿಸೇಂಬರ್ ಅಂತ್ಯದೊಳಗೆ ಎಲ್ಲ ಮಹಿಳೆಯರಿಗೆ ಗೃಹ ಲಕ್ಷ್ಮಿ 6000 ಹಣ ಜಮಾ ಆಗುತ್ತದೆ ಎಂದು ಮಹಿಳಾ ಮತ್ತು ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

Image Credit: Hindustantimes

ಗೃಹ ಲಕ್ಷ್ಮಿ ಫಲಾನುಭವಿಗಳು ದಾಖಲೆ ರೆಡಿಮಾಡಿ ಇಟ್ಟುಕೊಳ್ಳಿ
ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರನ್ನು ಗೃಹ ಲಕ್ಷ್ಮಿ ಯೋಜನೆಗೆಂದು ಕೆಲಸ ಮಾಡಲು ಪ್ರೇರೇಪಿಸುತ್ತಿದೆ. ರಾಜ್ಯ ಸಾರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರನ್ನು ಗೃಹ ಭೇಟೆಗೆ ಸೂಚಿಸಿದ್ದಾರೆ.

ಅದಾಲತ್ ನಡೆಸಲು ಸರಕಾರ ಸಿದ್ಧವಿದೆ. ಹಣ ಸಿಗದವರ ಬಳಿ ತೆರಳಿ ಸಮಸ್ಯೆ ಬಗೆಹರಿಸಲು ಸರ್ಕಾರ ನಿರ್ಧರಿಸಿದ್ದು, ಇನ್ನೂ ಹಣ ಸಿಗದವರು ಅದಾಲತ್ ನಲ್ಲಿ ದೂರು ದಾಖಲಿಸಬಹುದು. ತಾಂತ್ರಿಕ ದೋಷ ನಿವಾರಣೆಗೆ ದಾಖಲೆ ಸಂಗ್ರಹಣೆಗೆ ಮನೆ ಬಾಗಿಲಿಗೆ ತೆರಳು ಇಲಾಖೆ ನಿರ್ಧರಿಸಿದೆ. ಹೀಗಾಗಿ ಗೃಹ ಹಣ ನಿಮ್ಮ ಖಾತೆಗೆ ಜಮಾ ಮಾಡಿಕೊಳ್ಳಲು ನೀವು ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in