Ration Card New Update: ರೇಷನ್ ಕಾರ್ಡಿಗೆ ಹೊಸ ಸದಸ್ಯರ ಹೆಸರನ್ನ Online ಮೂಲಕ ಸೇರಿಸುವುದು ಹೇಗೆ..? ಇಲ್ಲಿದೆ ಡೀಟೇಲ್ಸ್.

ರೇಷನ್ ಕಾರ್ಡ್ ನಲ್ಲಿ ಹೊಸ ಸದ್ಯಸ್ಯರ ಹೆಸರನ್ನು ಸೇರಿಸಬೇಕಾ...?

Add New Member Name To Ration Card: ಭಾರತೀಯ ಪ್ರಜೆಯಾದವರು ಆಧಾರ್ ಕಾರ್ಡ್, ಪಾನ್ ಕಾರ್ಡ್ ರೀತಿಯ ವೈಯಕ್ತಿಕ ದಾಖಲೆಯನ್ನು ಹೊಂದುವುದು ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಕುಟುಂಬದ Ration card ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕೂಡ ಮುಖ್ಯವಾಗಿದೆ.

ರೇಷನ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಗಾಗ ವಿಶೇಷ ಸೌಲಭ್ಯವನ್ನು ನೀಡುತ್ತಿರುತ್ತದೆ. ಹೀಗಾಗಿ ಎಲ್ಲರು ರೇಷನ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ. ಕೆಲವೊಮ್ಮೆ ರೇಷನ್ ಕಾರ್ಡ್ ಇದ್ದರು ಕೂಡ ಕುಟುಂಬದ ಕೆಲ ಸದಸ್ಯರ ಹೆಸರನ್ನು ಸೇರಿಸಲು ಆಗದೆ ಇರಬಹುದು. ನಾವೀಗ ಈ ಲೇಖನದಲ್ಲಿ ಈ ವಿಷಯದ ಬಗ್ಗೆ ಮಾಹಿತಿ ನೀಡಲಿದ್ದೇವೆ.

Add New Member Name To Ration Card
Image Credit: Informalnewz

ರೇಷನ್ ಕಾರ್ಡ್ ನಲ್ಲಿ ಹೊಸ ಸದ್ಯಸ್ಯರ ಹೆಸರನ್ನು ಸೇರಿಸಬೇಕಾ…?
ಇಂತಹ ಸಂದರ್ಭದಲ್ಲಿ ನೀವು ರೇಷನ್ ಕಾರ್ಡ್ ಗೆ ಆ ವ್ಯಕ್ತಿಗೆ ಹೆಸರನ್ನು ಸೇರಿಸುವುದು ಅಗತ್ಯವಾಗುತ್ತದೆ. ಇನ್ನು ನೀವು ರೇಷನ್ ಕಾರ್ಡ್ ನಲ್ಲಿ ಹೊಸ ಸದ್ಯಸ್ಯರ ಹೆಸರನ್ನು ಸೇರಿಸಲು ಚಿಂತಿಸುವ ಅಗತ್ಯ ಇಲ್ಲ. ಆಹಾರ ಇಲಾಖೆಯು ಇದಕ್ಕಾಗಿ ಆನ್ಲೈನ್ ನಲ್ಲಿ ಅವಕಾಶವನ್ನು ಮಾಡಿಕೊಟ್ಟಿದೆ. ಆನ್ಲೈನ್ ಮೂಲಕ ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ರೇಷನ್ ಕಾರ್ಡಿಗೆ ಹೊಸ ಸದಸ್ಯರ ಹೆಸರನ್ನ Online ಮೂಲಕ ಸೇರಿಸುವುದು ಹೇಗೆ..?
•ನೀವು ಮೊದಲು ನಿಮ್ಮ ರಾಜ್ಯದ ಆಹಾರ ಪೂರೈಕೆ ಇಲಾಖೆಯ ವೆಬ್‌ ಸೈಟ್‌ ಗೆ ಹೋಗಬೇಕು.

•ವೆಬ್‌ ಸೈಟ್‌ ಗೆ ಹೋಗಿ ಮತ್ತು ಆಡ್ ನ್ಯೂ ಮೆಂಬರ್ ನೇಮ್ ಟು ರೇಷನ್ ಕಾರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ.

Join Nadunudi News WhatsApp Group

•ಇದರ ನಂತರ ನೀವು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.

•ಹೊಸ ಸದಸ್ಯರ ಮೊಬೈಲ್ ಸಂಖ್ಯೆ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ನೀವು ಅಗತ್ಯ ದಾಖಲೆಗಳನ್ನು ಅಪ್‌ ಲೋಡ್ ಮಾಡಬೇಕಾಗುತ್ತದೆ.

Ration Card Latest News Update
Image Credit: Zee News

•ದಾಖಲೆಗಳನ್ನು ಅಪ್‌ ಲೋಡ್ ಮಾಡಿದ ನಂತರ ನೀವು ಅರ್ಜಿ ಶುಲ್ಕವನ್ನು ಠೇವಣಿ ಮಾಡಬೇಕಾಗುತ್ತದೆ.

•ಅರ್ಜಿ ಶುಲ್ಕವನ್ನು ಠೇವಣಿ ಮಾಡಿದ ನಂತರ ನಿಮ್ಮ ಅರ್ಜಿಯನ್ನು ಅನುಮೋದಿಸಲಾಗುತ್ತದೆ.

ರೇಷನ್ ಕಾರ್ಡಿಗೆ ಹೊಸ ಸದಸ್ಯರ ಹೆಸರನ್ನ ಸೇರಿಸಲು ಈ ದಾಖಲೆಗಳು ಅಗತ್ಯ
•ಪಡಿತರ ಚೀಟಿ ಸಂಖ್ಯೆ

•ಕುಟುಂಬದ ಮುಖ್ಯಸ್ಥನ ಹೆಸರು

•ಹೊಸ ಸದಸ್ಯರ ಹೆಸರು

•ಹೊಸ ಸದಸ್ಯರ ಜನನ ಪ್ರಮಾಣಪತ್ರ

•ಹೊಸ ಸದಸ್ಯರ ಆಧಾರ್ ಕಾರ್ಡ್

Ration Card Latest Update
Image Credit: Digit

Join Nadunudi News WhatsApp Group