Ration Card: ರೇಷನ್ ಕಾರ್ಡಿನಲ್ಲಿ ಡಿಲೀಟ್ ಆದವರ ಹೆಸರನ್ನ ಮತ್ತೆ ಸೇರಿಸುವುದು ಹೇಗೆ…? ಇಲ್ಲಿದೆ ಸುಲಭ ವಿಧಾನ

ರೇಷನ್ ಕಾರ್ಡಿನಲ್ಲಿ ಡಿಲೀಟ್ ಆದವರ ಹೆಸರನ್ನ ಮತ್ತೆ ಸೇರಿಸುವ ವಿಧಾನ.

Add The Deleted Name In Ration Card: ದೇಶದ ಜನತೆಗೆ ಸರ್ಕಾರ ಉಚಿತ ಪಡಿತರನ್ನು ನೀಡುತ್ತಿದೆ. ಬಡತನರೇಖೆಗಿಂತ ಕೆಳಗಿರುವವರು ಸರ್ಕಾರ ಉಚಿತ ಪಡಿತರನ್ನು ಪಡೆಯುತ್ತಿದ್ದಾರೆ. ಇನ್ನು ಉಚಿತ ಪಡಿತರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡಿತರ ಚೀಟಿದಾರರಿಗೆ ಲಭ್ಯವಾಯುತ್ತಿದೆ. ಈ ನಿಟ್ಟಿನಲ್ಲಿ ಪಡಿತರಚೀಟಿ ಮೇಲಿನ ಬೇಡಿಕೆ ಕೊಡ ಹೆಚ್ಚುತ್ತಿದೆ.

Add The Deleted Name In Ration Card
Image Credit: Businessleague

ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಡಿಲೀಟ್ ಆಗಿದ್ಯಾ..?
ಇನ್ನು ರಾಜ್ಯದಲ್ಲಂತೂ ಉಚಿತ ಗ್ಯಾರಂಟಿ ಯೋಜನೆಗಳು ಸಾಲು ಸಾಲಾಗಿ ಜಾರಿಯಾಗುತ್ತಿದೆ. ಈ ಕಾರಣಕ್ಕೆ ಅನರ್ಹರು ಕೂಡ ಪಡಿತರಚೀಟಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿದ ಸರ್ಕಾರ ಪಡಿತರ ಚೀಟಿ ಹೊಂದಲು ಕೆಲವು ಮಾನದಂಡಗಳನ್ನು ಜಾರಿಗೊಳಿಸಿತ್ತು. ಇನ್ನು ಸರ್ಕಾರ ನಿಯಮ ಉಲ್ಲಂಘನೆ ಮಾಡಿದ ಸಾಕಷ್ಟು ಕುಟುಂಬದ ಸದಸ್ಯರ ಹೆಸರನ್ನು ಸರ್ಕಾರ ರೇಷನ್ ಕಾರ್ಡ್ ನಿಂದ ತೆಗೆದುಹಾಕಿತ್ತು.

ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಡಿಲೀಟ್ ಆಗಿದ್ದರೆ ಈ ಮಾಹಿತಿಯ ಆಬಗ್ಗೆ ತಿಳಿದುಕೊಳ್ಳಿ. ಏಕೆಂದರೆ ನೀವು ಒನ್ ಒಂದು ಕ್ಲಿಕ್ ನಲ್ಲಿ ಮನೆಲಿಯೇ ಕುಳಿತುಕೊಂಡು ನಿಮ್ಮ ರೇಷನ್ ಕಾರ್ಡ್ ಗೆ ಡಿಲೀಟ್ ಆದ ನಿಮ್ಮ ಹೆಸರನ್ನು ಪುನಃ ಸೇರಿಸಬಹುದು. ಪಡಿತರ ಚೀಟಿಯೊಂದಿಗೆ ಮನೆಯ ಮುಖ್ಯಸ್ಥರ ಹೆಸರನ್ನು ಜೋಡಿಸಲುಇಲಾಖೆಯು ಆ ಹೆಸರುಗಳನ್ನು ಪಡಿತರ ಚೀಟಿಗೆ ಮತ್ತೆ ಸೇರಿಸುವ ಪ್ರಕ್ರಿಯೆ ಆರಂಭಿಸಿದೆ.

Ration Card Latest Updates
Image Credit: DNA India

ರೇಷನ್ ಕಾರ್ಡಿನಲ್ಲಿ ಡಿಲೀಟ್ ಆದವರ ಹೆಸರನ್ನ ಮತ್ತೆ ಸೇರಿಸುವುದು ಹೇಗೆ…?
•ಸೈಟ್ https://ahara.kar.nic.in/ ಅನ್ನು ಭೇಟಿ ಪಡಿತರ ಚೀಟಿ ಹೆಸರು ಸೇರ್ಪಡೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

•ಇ-ಸೇವೆಗಳನ್ನುಮುಖ್ಯ ಪುಟದಲ್ಲಿ ಆಯ್ಕೆ ಮಾಡಿ. ತಿದ್ದುಪಡಿ ಅಥವಾ ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ.

Join Nadunudi News WhatsApp Group

•ಹೊಸ ಪೇಜ್ ನ ಫಾರ್ಮ್ ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿಮಾಡಿದ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ.

•ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್ಮೀಟ್ ಮಾಡಿ.

•ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನೆಗೆ ಅಪ್ಡೇಟ್ ಆಗಿರುವ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ.

Join Nadunudi News WhatsApp Group