Ration Card: ರೇಷನ್ ಕಾರ್ಡಿನಲ್ಲಿ ನಿಮ್ಮ ಹೆಸರು ಸೇರ್ಪಡೆ ಆಗಿದೆಯಾ…? ಈ ರೀತಿಯಲ್ಲಿ ಚೆಕ್ ಮಾಡಿ
ಪಡಿತರ ಚೀಟಿಯಲ್ಲಿನ ಹೆಸರು ಸೇರ್ಪಡೆಗೆ ಅವಕಾಶ
Addition Of Name In Ration Card: ರಾಜ್ಯ ಸರ್ಕಾರ ರಾಜ್ಯದ ಬಡ ಜನತೆಗಾಗಿ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಯೋಜನೆಗಳ ಲಾಭವನ್ನು ಸರ್ಕಾರ BPL Ration Card ಹೊಂದಿರುವವರಿಗೆ ನೀಡುತ್ತಿದೆ. ಆದರೆ ಸರ್ಕಾರದ ಉಚಿತ ಯೋಜನೆಯ ಲಾಭವನ್ನು ಎಲ್ಲ ಅರ್ಹ ಫಲಾನುಭವಿಗಳು ಪಡೆಯಲು ಸಾಧ್ಯವಾಗುತ್ತಿಲ್ಲ.
ಅರ್ಹರು ಯೋಜನೆಯಿಂದ ವಂಚಿತರಾಗುತಿರಲು ಒಂದೇ ಕಾರಣ ಎಂದರೆ ಪಡಿತರ ಚೀಟಿಯಲ್ಲಿನ ತಪ್ಪುಗಳು. ಹೌದು, ಪಡಿತರ ಚೀಟಿಯಲ್ಲಿ ಯಾವುದೇ ರೀತಿಯ ತಪ್ಪಿದ್ದರು ಕೂಡ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಪ್ರತಿಯೊಬ್ಬರ ಹೆಸರು ಕೂಡ ಇರುವುದು ಅಗತ್ಯ. ಸದ್ಯ ಸರ್ಕಾರ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶವನ್ನು ನೀಡಿದೆ.
ಪಡಿತರ ಚೀಟಿಯಲ್ಲಿನ ಹೆಸರು ಸೇರ್ಪಡೆಗೆ ಅವಕಾಶ
ರಾಜ್ಯ ಸರ್ಕಾರ ಈಗಾಗಲೇ ಜನಸಾಮಾನ್ಯರಿಗೆ ಪಡಿತರ ಚೀಟಿಯಲ್ಲಿನ ಹೆಸರು ಸೇರ್ಪಡೆಗೆ ಅವಕಾಶವನ್ನು ನೀಡಿದೆ. ಅದರಂತೆ ಇದೀಗ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದೆ. ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದವರ ಪಟ್ಟಿ ಬಿಡುಗಡೆಯಾಗಿದೆ. ಅರ್ಜಿ ಸಲ್ಲಿಸಿದವರು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ತಮ್ಮ ಹೆಸರನ್ನು ಪರಿಶೀಲಿಸಬಹುದು. ಕರ್ನಾಟಕ ಪಡಿತರ ಚೀಟಿ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಲು ನೀವು ಕೆಳಗಿನ ಸರಳ ಹಂತಗಳನ್ನು ಅನುಸರಿಸಬಹುದು.
ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಸೇರ್ಪಡೆ ಆಗಿದೆಯಾ ಎಂದು ಹೀಗೆ ಚೆಕ್ ಮಾಡಿಕೊಳ್ಳಿ
•ಅಧಿಕೃತ ವೆಬ್ ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ
•ಮೆನು ಬಾರ್ ನಿಂದ, “ಇ-ಸೇವೆಗಳು” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
•”ಇ-ರೇಷನ್ ಕಾರ್ಡ್” ಲಿಂಕ್ ಅನ್ನು ಕ್ಲಿಕ್ ಮಾಡಿ.
•”ಗ್ರಾಮ ಪಟ್ಟಿ” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
•ನಂತರ ಕೆಳಗಿನ ಮಾಹಿತಿಯನ್ನು ಆಯ್ಕೆಮಾಡಿ.
*ಜಿಲ್ಲೆ
*ತಾಲೂಕು
*ಗ್ರಾಮ ಪಂಚಾಯಿತಿ
*ಗ್ರಾಮ
•”Go” ಬಟನ್ ಕ್ಲಿಕ್ ಮಾಡಿ.
•ಈ ಎಲ್ಲ ಪ್ರಕ್ರಿಯೆಯ ನಂತರ ನಿಮ್ಮ ಪರದೆಯ ಮೇಲೆ ಪಡಿತರ ಚೀಟಿದಾರರ ಪಟ್ಟಿ ಕಾಣಿಸುತ್ತದೆ.