Adi Lokesh: ಅಕ್ಕನ ಎರಡನೆಯ ಮದುವೆ ಬಗ್ಗೆ ಮುಲಾಜಿಲ್ಲದೆ ಉತ್ತರಿಸಿದ ಆದಿ ಲೋಕೇಶ್, ನಾವು ಜಸ್ಟ್ ಅಕ್ಕ ತಮ್ಮ.

ನಟಿ ಪವಿತ್ರಾ ಲೋಕೇಶ್ ಅವರ ಸಹೋದರ ಆದಿ ಅವರು ಮತ್ತೆ ಮದುವೆ ಬಗ್ಗೆ ಮಾತನಾಡಿದ್ದಾರೆ.

Adi Lokesh About Pavithra Lokesh Movie: ನಟಿ ಪವಿತ್ರ ಲೋಕೇಶ್ (Pavithra Lokesh) ಹಾಗು ನರೇಶ್ ಬಾಬು (Naresh Babu) ನಟನೆಯ ಮತ್ತೆ ಮದುವೆ ಸಿನಿಮಾ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡಿತ್ತು. ಇನ್ನು ನಟಿ ಪವಿತ್ರಾ ಲೋಕೇಶ್ ಹಾಗು ನರೇಶ್ ಬಾಬು ಈ ಸಿನಿಮಾದಿಂದ ಹೆಚ್ಚು ಸುದ್ದಿಯಾಗಿದ್ದರು.

ನಿಜವಾಗಿ ಜೀವನದಲ್ಲಿ ಮದುವೆಯಾಗಲು ಆಗದಿದ್ದರೂ ನರೇಶ್ ಹಾಗು ಪವಿತ್ರ ಲೋಕೇಶ್ ಸಿನಿಮಾದ ಮುಖಾಂತರ ಅದನ್ನು ಮಾಡಿ ತೋರಿಸಿದ್ದಾರೆ. ಇದೀಗ ಮತ್ತೆ ಇವರಿಬ್ಬರ ಸಿನಿಮಾದ ಬಗ್ಗೆ ಸುದ್ದಿಯಾಗುತ್ತಿದೆ.

Adi Lokesh spoke about Pavitra Lokesh's wedding movie
Image Credit: Timesofindia

ಪವಿತ್ರ ಲೋಕೇಶ್ ಮತ್ತೆ ಮದುವೆ ಸಿನಿಮಾ ಬಗ್ಗೆ ಮಾತನಾಡಿದ ಆದಿ ಲೋಕೇಶ್
ಇದೀಗ ನಟಿ ಪವಿತ್ರ ಲೋಕೇಶ್ ಅವರ ಸಹೋದರ ಆದಿ ಅವರು ಮತ್ತೆ ಮದುವೆ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ನಟ ಆದಿ ಅವರಿಗೆ ಮತ್ತೆ ಮದುವೆ ಸಿನಿಮಾದ ಬಗ್ಗೆ ಪ್ರಶ್ನೆ ಮಾಡಿದಾಗ ಆದಿ ಉತ್ತರ ಕೊಟ್ಟಿದ್ದಾರೆ. ನಾನು ಮತ್ತೆ ಮದುವೆ ಸಿನಿಮಾವನ್ನು ನೋಡಿಲ್ಲ.

ನಮ್ಮ ಮನೆಯಲ್ಲಿ ಒಂದೇ ಟೇಬಲ್ ಮೇಲೆ ಕುಳಿತುಕೊಂಡು ಊಟ ಮಾಡುವುದು, ಆಗ ನೀನು ಯಾವ ಸಿನಿಮಾ ಮಾಡುತ್ತಿರುವೆ ಯಾವ ಸಿನಿಮಾ ಚಿತ್ರೀಕರಣ ಮಾಡುತ್ತಿರುವ ಯಾವ ಸಿನಿಮಾ ರಿಜೆಕ್ಟ್ ಮಾಡಿದೆ ಅನ್ನೋ ಚರ್ಚೆ ಮಾಡುವುದಿಲ್ಲ.

ಮನೆಯಲ್ಲಿ ಮನೆ ವಿಚಾರ ಮಾತನಾಡುತ್ತೀವಿ, ಮನೆ ಊಟ ಮಾಡುತ್ತೀವಿ ಅಷ್ಟೇ ಹೊರತು ಸಿನಿಮಾ ಬಗ್ಗೆ ಮಾತನಾಡುವುದಿಲ್ಲ. ನೀನು ಆರ್ಟಿಸ್ಟ್ ಅಲ್ಲ ನಾನು ಆರ್ಟಿಸ್ಟ್ ಅಲ್ಲ. ನಾನು ನನ್ನ ಅಪ್ಪ ಅಮ್ಮನ ಮಗ ನೀನು ಅಪ್ಪ ಅಮ್ಮನ ಮಗಳು ಅಷ್ಟರಲ್ಲೇ ಇರುತ್ತೆ ನಮ್ಮಿಬ್ಬರ ಸಂಬಂಧ ಎಂದು ಆದಿ ಲೋಕೇಶ್ ಖಾಸಗಿ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Join Nadunudi News WhatsApp Group

Adi Lokesh About Pavithra Lokesh Movie
Image Credit: Publictv

ಪವಿತ್ರ ಲೋಕೇಶ್ ಮತ್ತು ತಮ್ಮ ಫ್ಯಾಮಿಲಿ ಬಗ್ಗೆ ಹೇಳಿಕೊಂಡ ನಟ ಆದಿ ಲೋಕೇಶ್
ಅಕ್ಕನ ಕೆಲಸದ ಬಗ್ಗೆ ನಾನು ಕೇಳುವುದಿಲ್ಲ, ನನ್ನ ಕೆಲಸದ ಬಗ್ಗೆ ಅಕ್ಕನು ಕೇಳಲ್ಲ, ನಾವು ಜಸ್ಟ್ ಅಕ್ಕ ತಮ್ಮ. ಎಲ್ಲಾ ಬರ್ತ್ ಡೇ ಗಳನ್ನೂ ಮತ್ತು ಹಬ್ಬಗಳನ್ನು ಒಟ್ಟಿಗೆ ಆಚರಣೆ ಮಾಡುತ್ತೇವೆ. ಆದರೆ ವೃತ್ತಿ ಜೀವನವನ್ನು ಮಾತನಾಡುವುದಿಲ್ಲ. ಅಕ್ಕ ಮಾತ್ರವಲ್ಲ ನನ್ನ ಹೆಂಡತಿ ಕೂಡ ಸಿನಿಮಾ ಬಗ್ಗೆ ಮಾತನಾಡುವುದಿಲ್ಲ, ಯಾಕೆ ಈ ರೀತಿ ಹೇಳುತ್ತಿರುವೆ ಅಂದರೆ ಸುಮಾರು 3 ತಿಂಗಳು ಕಾಲ ನಾವು ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತೀವಿ.

ಮನೆಗೆ ಬಂದಾಗ ಒಬ್ಬರಿಗೊಬ್ಬರು ಸಮಯ ಕೊಡಬೇಕು. ಅವರು ನಮ್ಮನ್ನು ಮಿಸ್ ಮಾಡಿಕೊಳ್ಳುತ್ತಾರೆ. ಹೀಗಿರುವಾಗ ಮನೆಗೆ ಬಂದು ಸಿನಿಮಾ ಮಾತನಾಡಿತ್ತಿದ್ದರೆ ಆ ಮೂರೂ ತಿಂಗಳು ಅವರು ಎದುರಿಸಿದ ಕಷ್ಟ ಸುಖಗಳು ಗೊತ್ತಾಗುವುದಿಲ್ಲ.

Adi Lokesh About Pavithra Lokesh Movie
Image Credit: News18

ನಾವು ತಿಳಿದುಕೊಳ್ಳಬೇಕು. ಅರ್ಥ ಮಾಡಿಕೊಳ್ಳಬೇಕು ಒಂದು ಸೆಕೆಂಡ್ ಜೀವನದಲ್ಲಿ ಮಿಸ್ ಮಾಡಿಕೊಂಡರೆ ಮತ್ತೆ ಸಿಗುವುದಿಲ್ಲ. ಫ್ಯಾಮಿಲಿ ಜೊತೆಗೆ ಹೆಚ್ಚಿಗೆ ಸಮಯ ಕಳೆಯಬೇಕು. ಇದ್ದಾಗ ಸಮಯ ಕೊಡಿ, ಇಲ್ಲದಿದ್ದಾಗ ಸುಮ್ಮನೆ ಯಾಕೆ ಮಿಸ್ ಮಾಡಿಕೊಳ್ಳುತ್ತೀರಾ ಎಂದು ಆದಿ ಲೋಕೇಶ್ ಹೇಳಿದ್ದಾರೆ.

Join Nadunudi News WhatsApp Group