Adil Khan Jailed: ಜೈಲಿನಿಂದಲೇ ಆದಿಲ್ ನನಗೆ ಮೆಸೇಜ್ ಮಾಡುತ್ತಿದ್ದಾನೆ, ಆದಿಲ್ ಮೇಲೆ ಆರೋಪ ಮಾಡಿದ ರಾಖಿ ಸಾವಂತ್.
Rakhi Sawant Latest Drama: ಬಾಲಿವುಡ್ (Bollywood)ನ ಖ್ಯಾತ ನಟಿ ರಾಖಿ ಸಾವಂತ್ (Rakhi Sawant) ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಆದಿಲ್ ಖಾನ್ ಅವರನ್ನು ಮದುವೆಯಾದ ನಟಿ ರಾಖಿ ಸಾವಂತ್ ಮದುವೆಯ ನಂತರ ಸಾಕಷ್ಟು ವಿವಾದಗಳನ್ನು ಎದುರಿಸಿದರು. ಆದಿಲ್ ಖಾನ್ ಮೆನೆ ಗಂಭೀರವಾದ ಆರೋಪ ಮಾಡಿ ಅವನನ್ನು ಜೈಲಿಗೆ ಕಳುಹಿಸಿದರು.
ಈ ವಿಚಾರ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಇದೀಗ ಮತ್ತೊಮ್ಮೆ ನಟಿ ರಾಖಿ ಸಾವಂತ್ ಅವರು ಅವರ ಪತಿ ಆದಿಲ್ ಖಾನ್ ಮೇಲೆ ಆರೋಪ ಮಾಡಿದ್ದಾರೆ.
ಬಾಲಿವುಡ್ ನ ಖ್ಯಾತ ನಟಿ ರಾಖಿ ಸಾವಂತ್
ಬಾಲಿವುಡ್ ನನ್ನ ಕರ್ಮಭೂಮಿ, ಮುಂಬೈ ನನ್ನ ಜನ್ಮಭೂಮಿ. ಅಂತೆಯೇ ದುಬೈನಲ್ಲಿಯೂ ನಾನು ಏನಾದರೊಂದು ಮಾಡಬೇಕು. ಬಾಲಿವುಡ್, ಹಾಲಿವುಡ್ ರೀತಿ ದುಬೈನಲ್ಲಿ ದಾಲಿವುಡ್ ಮಾಡಬೇಕು. ಭಾರತದಲ್ಲಿನ ಪತ್ರಕರ್ತರು, ಪಾಪರಾಜಿಗಳ ರೀತಿ ದುಬೈನಲ್ಲಿ ಕೂಡ ಪತ್ರಕರ್ತರು, ಪಾಪರಾಜಿ ಇರಬೇಕು, ಅದಕ್ಕೆ ಏನು ಬೇಕೋ ಅದನ್ನು ನಾನು ನೀಡುತ್ತೇನೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ತನ್ನ ನೋವನ್ನು ಹೇಳಿಕೊಂಡ ನಟಿ ರಾಖಿ ಸಾವಂತ್
ಆದಿಲ್ ಮತ್ತೆ ನನ್ನ ಜೀವನದಲ್ಲಿ ಬರುವುದಕ್ಕೆ ಇಷ್ಟಪಡುತ್ತಿದ್ದಾನೆ. ಅವನು ವಾಪಾಸ್ ಬರುವುದು ನನ್ನನ್ನು ಕೊಲ್ಲುವುದಕ್ಕಾ, ನನ್ನ ಜೀವನ ಹಾಳು ಮಾಡಿದ ಹಾಗೆ ಅವನು ಇನ್ನೊಂದು ಹುಡುಗಿ ಜೀವನ ಹಾಳು ಮಾಡಬಾರದು ಅಂತ ನಾನು ಆದಿಲ್ ಗೆ ವಿಚ್ಚೇಧನ ಕೊಡುವುದಿಲ್ಲ. ಜೇವನದಲ್ಲಿ ನಾನು ಇನ್ನು ಮುಂದೆ ಮಾಡುವೆ ಆಗುವುದಿಲ್ಲ.
ಮಕ್ಕಳ ಬಗ್ಗೆಯೂ ಸಹ ಯೋಚನೆ ಮಾಡುವುದಿಲ್ಲ. ನನ್ನ ಅಕಾಡೆಮಿಯ ಮಕ್ಕಳು ನನ್ನ ಮಕ್ಕಳು ಎಂದು ರಾಖಿ ಸಾವಂತ್ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ನಾನು ಈಗಾಗಲೇ ಸತ್ತು ಹೋಗಿದ್ದೇನೆ, ಹೃದಯವು ಸತ್ತು ಹೋಗಿದೆ. ಆದರೆ ಉಸಿರಾಡುತ್ತಿದ್ದೇನೆ ಅಷ್ಟೇ. ಎಲ್ಲ ಕೆಲಸ ನಿಭಾಯಿಸುವ ಮಹಿಳೆಯರಿಗೆ ನೋವು ಕೊಡಬೇಡಿ, ಹೊಡೆಯಬೇಡಿ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ಆದಿಲ್ ಮೇಲೆ ಮತ್ತೆ ಆರೋಪ ಮಾಡಿದ ನಟಿ ರಾಖಿ ಸಾವಂತ್
ಮೈಸೂರಿನ ಜೈಲಿನಲ್ಲಿದ್ದ ಆದಿಲ್ ನನಗೆ ಮೆಸೇಜ್ ಮಾಡಿ ಒಂದು ಅವಕಾಶ ಕೊಡು ಅಂತ ಕೇಳಿಕೊಂಡಿದ್ದಾನೆ. ನಾನು ಅವನಿಗೆ ಕಾಲಿಗೆ ಬಿದ್ದು ಮನೆಗೆ ಬಾ ಬೇರೆ ಎಲ್ಲ ಬಿಡು ಎಂದರು ಕೇಳಿಲ್ಲ. ಆದಿಲ್ ಖುರಾನ್ ನ ಮೇಲೆ ಆಣೆ ಮಾಡಿ ಸರಿಯಾಗಿ ಇರುತ್ತೇನೆ ಅಂತ ಹೇಳಬೇಕು ಎಂದು ರಾಖಿ ಸಾವಂತ್ ಅವರು ಆದಿಲ್ ಖಾನ್ ಮೇಲೆ ಆರೋಪ ಮಾಡಿದ್ದಾರೆ.