Adipurush: ಬಿಡುಗಡೆಗೂ ಮುನ್ನವೇ ದಾಖಲೆ ನಿರ್ಮಾಣ ಮಾಡಿದ ಆದಿಪುರುಷ್, ದಾಖಲೆಗಳೂ ಉಡೀಸ್.

ಬಿಡುಗಡೆಗೂ ಮುನ್ನವೇ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರ ದಾಖಲೆಯನ್ನ ನಿರ್ಮಾಣ ಮಾಡಿದೆ.

Actor Prabhas Adipurush Movie Trailer: ಟಾಲಿವುಡ್ ನ ಖ್ಯಾತ ನಟ ಪ್ರಭಾಸ್  (Prabhas) ಇದೀಗ ಸುದ್ದಿಯಲ್ಲಿದ್ದಾರೆ. ಪ್ರಭಾಸ್ ನಟನೆಯ ಆದಿಪುರುಷ ಚಿತ್ರ ರಿಲೀಸ್ ಗು ಮುನ್ನ ಬಾರಿ ಸದ್ದು ಮಾಡುತ್ತಿದೆ. ಬಾಹುಬಲಿ ಚಿತ್ರ ಪ್ರಭಾಸ್ ಅವರ ಸಿನಿ ಪಯಣಕ್ಕೆ ಮಹತ್ತರ ತಿರುವನ್ನು ನೀಡಿದೆ.

ಇನ್ನು ಈ ಸಿನಿಮಾದ ನಂತರ ನಟ ಪ್ರಭಾಸ್ ಅವರು ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಇದೀಗ ಆದಿಪುರುಷ  (Adipurush) ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ.

Actor Prabhas Adipurush Movie Trailer
Image Credit: news18

ನಟ ಪ್ರಭಾಸ್ ನಟನೆಯ ಅನೇಕ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳು ಸೋಲು ಕಂಡಿದ್ದರು ಇನ್ನು ಕೆಲವು ಸಿನಿಮಾಗಳು ಜನಪ್ರಿಯತೆ ಪಡೆದಿದೆ.

ಇನ್ನು ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾ ಚಿತ್ರೀಕರಣ ಪೂರ್ತಿಗೊಂಡಿದ್ದು ಮೊನ್ನೆ ಅಷ್ಟೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಇನ್ನು ಪ್ರಭಾಸ್ ನಟನೆಯ ಆದಿಪುರುಷ ಚಿತ್ರ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ಮೂಲಕವೇ ಟಾಲಿವುಡ್ ನಲ್ಲಿ ಹೊಸ ಅಲೆ ಎಬ್ಬಿಸಲು ಪ್ರಾರಂಭಿಸಿದೆ.

ರಾಮನ ಪಾತ್ರದಲ್ಲಿ ಪ್ರಭಾಸ್
ಇನ್ನು ಆದಿಪುರುಷ ಸಿನಿಮಾ 700 ಕೋಟಿಗಿಂತ ಹೆಚ್ಚು ಬಜೆಟ್ ನಲ್ಲಿ ಚಿತ್ರೀಕರಣಗೊಂಡಿದೆ. ನಟ ಪ್ರಭಾಸ್ ಈ ಸಿನಿಮಾದಲ್ಲಿ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಕೃತಿ ಸನೋನ್ ಸೀತೆಯಾಗಿ ಪ್ರಭಾಸ್ ಗೆ ಜೋಡಿಯಾಗಲಿದ್ದಾರೆ.

Join Nadunudi News WhatsApp Group

ಇನ್ನು ಸೈಫ್ ಅಲಿ ಖಾನ್ ರಾವಣ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ರಾಮಾಯಣ ಕಥೆಯನ್ನು ಹೊಂದಿರುವ ಈ ಸಿನಿಮಾವನ್ನು ನೋಡಲು ಮತ್ತು ನಟ ಪ್ರಭಾಸ್ ಅವರ ರಾಮನ ಪಾತ್ರವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Prabhas starrer Adipurush produced the record before its release.
Image Credit: koimoi

ಬಿಡುಗಡೆಗೂ ಮುನ್ನವೇ ದಾಖಲೆ ನಿರ್ಮಾಣ ಮಾಡಿದ ಆದಿಪುರುಷ ಚಿತ್ರ
ಆದಿಪುರುಷ ಚಿತ್ರದ ಟ್ರೈಲರ್ ಭರ್ಜರಿ ದಾಖಲೆ ಬರೆಯುತ್ತಿದೆ. ವಿಎಫ್ ಎಕ್ಸ್, ಮ್ಯೂಸಿಕ್ ನಿಂದ ಟ್ರೈಲರ್ ಎಲ್ಲರ ಗಮನ ಸೆಳೆಯುತ್ತಿದೆ. ಅನೇಕ ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿದ್ದು, 70 ಮಿಲಿಯನ್ ಗು ಹೆಚ್ಚು ವೀಕ್ಷಣೆ ಕಂಡಿದೆ.

ಇನ್ನು ಆದಿಪುರುಷ ಟ್ರೈಲರ್ ಈ ವರ್ಷದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಚಿತ್ರ ಎನ್ನುವ ಹೆಗ್ಗಳಿಕೆಯನ್ನು ಪಡೆದಿದೆ. ಯೂಟ್ಯೂಬ್ ನಲ್ಲಿ ಆದಿಪುರುಷ ಚಿತ್ರದ ಟ್ರೈಲರ್ ಟ್ರೆಂಡಿಂಗ್ ನಲ್ಲಿ ನಂಬರ್ ಒನ್ ಸ್ಥಾನವನ್ನು ಗಿಟ್ಟಿಸಿದೆ.

Join Nadunudi News WhatsApp Group