Aditi Prabhudeva Mother: ಮದುವೆಯಾದ ಬಳಿಕ ನಟಿ ಅದಿತಿ ಬದಲಾಗಿದ್ದಾರಾ, ಸ್ಪಷ್ಟನೆ ನೀಡಿದ ಅದಿತಿ ತಾಯಿ.

Actress Aditi Prabhudeva And Her Mother: ಕನ್ನಡ ಚಿತ್ರರಂಗದ ಖ್ಯಾತ ನಟಿ ಅದಿತಿ ಪ್ರಭುದೇವ (Aditi Prabhudeva) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಅದಿತಿ ಪ್ರಭುದೇವ 2022 ನವೆಂಬರ್ ನಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಇದೀಗ ನಟಿ ಅದಿತಿ ಪ್ರಭುದೇವ ಸಂಸಾರದ ಜೊತೆ ಅನೇಕ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಕನ್ನಡದ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ನಟಿ ಅದಿತಿ ಪ್ರಭುದೇವ. ಇದೀಗ ಅದಿತಿ ಪ್ರಭುದೇವ ಅವರ ಮದುವೆ ನಂತರದ ಜೀವನದ ಬಗ್ಗೆ ಅವರ ತಾಯಿ ಮಾತನಾಡಿದ್ದಾರೆ.

Mother Aditi Prabhudeva spoke about her daughter
Image Credit: instagram

ಅದಿತಿ ಬಗ್ಗೆ ಮಾತನಾಡಿದ ತಾಯಿ
ನಟಿ ಅದಿತಿ ಪ್ರಭುದೇವ ಮದುವೆಯಾದ ಬಳಿಕ ಬದಲಾಗಿದ್ದಾರೆ ಎನ್ನುವುದರ ಬಗ್ಗೆ ಅವರ ತಾಯಿ ಈಗ ಸ್ಪಷ್ಟನೆ ನೀಡಿದ್ದಾರೆ. ಮದುವೆ ನಂತರ ಅದಿತಿ ಪ್ರಭುದೇವ ಅವರು ಮತ್ತೆ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ.

ಪತಿ ಯಶಸ್ ಅವರನ್ನು ಸಹ ಸಿನಿಮಾ ಸೆಟ್ ಗೆ ಕರೆದುಕೊಂಡು ಹೋಗಿದ್ದಾರೆ. ನಟಿ ಅದಿತಿ ತಮ್ಮ ವೈವಾಹಿಕ ಬದುಕು ಮತ್ತು ನಟನೆ ಎರಡನ್ನು ಸಹ ಸಮಾನವಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಇದೀಗ ಮಗಳ ಬಗ್ಗೆ ಅದಿತಿ ತಾಯಿ ಮಾತನಾಡಿದ್ದಾರೆ.

Aditi Prabhudeva's mother clarified that Diti Prabhudeva has changed after marriage
Image Credit: instagram

ತಾಯಿಗೆ ಪ್ರಶ್ನೆ ಮಾಡಿದ ನಟಿ ಅದಿತಿ ಪ್ರಭುದೇವ

Join Nadunudi News WhatsApp Group

ನಟಿ ಅದಿತಿ ತಮ್ಮ ತಾಯಿಗೆ ಮದುವೆ ಆದ ಮೇಲೆ ನನ್ನಲ್ಲಿ ಏನು ಬದಲಾವಣೆ ಆಗಿದೆ ಅಂತ ಪ್ರಶ್ನೆ ಕೇಳುತ್ತಾರೆ. ತುಂಬಾ ಜನರು ನನ್ನನ್ನು ಕೇಳಿದ್ದಾರೆ ಏನು ಬದಲಾವಣೆ ಇದೆ ನಿಮ್ಮ ಜೀವನದಲ್ಲಿ ಅಂತ. ವಯಕ್ತಿಕವಾಗಿ ನನಗೆ ಯಾವ ಬದಲಾವಣೆಗಳು ಕಾಣಿಸಿಲ್ಲ. ಆದರೆ ತಾಯಿಯಾಗಿ ನಿಮ್ಮ ಪ್ರಕಾರ ನಾನು ಏನಾದರೂ ಬದಲಾಯಿಸಿಕೊಳ್ಳಬೇಕು ಅಂತಿದ್ದರೆ ನೀವು ನನಗೆ ಯಾವ ವಿಚಾರದಲ್ಲಿ ಬದಲಾಗಬೇಕು ಎಂದು ಹೇಳುತ್ತೀರಾ ಎಂದು ತಾಯಿಗೆ ಅದಿತಿ ಮರು ಪ್ರಶ್ನೆ ಮಾಡಿದ್ದಾರೆ.

Aditi Prabhudeva cooked with her mother
Image Credit: youtube

ಇದಕ್ಕೆ ಅದಿತಿ ತಾಯಿ ನಿನ್ನಲ್ಲಿ ಏನು ಬದಲಾಗಿಲ್ಲ. ಮದುವೆಗೂ ಮುನ್ನ ನೀನು ಹೈಪರ್ ಆಕ್ಟಿವ್ ಆಗಿದ್ದೆ ಈಗ ಹೈಪರ್ ಕಡಿಮೆ ಮಾಡಿ ಆಕ್ಟಿವ್ ಆಗಿರುವೆ ಅಷ್ಟೇ. ಆರಾಮ್ ಆಗಿತ್ತು ಎಂದು ಅದಿತಿ ತಾಯಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Join Nadunudi News WhatsApp Group