Aditi Prabhudeva: ನಟ ದರ್ಶನ್ ಬಗ್ಗೆ ಪರೋಕ್ಷವಾಗಿ ಕಮೆಂಟ್ ಮಾಡಿದ ನಟಿ ಅಧಿತಿ, ದರ್ಶನ್ ವಿರುದ್ಧ ತಿರುಗಿಬಿತ್ತಾ ಚಿತ್ರರಂಗ.

ನಟ ದರ್ಶನ್ ಅವರಿಗೆ ತಾಗುವಂತೆ ಪರೋಕ್ಷವಾಗಿ ಪೋಸ್ಟ್ ಶೇರ್ ಮಾಡಿದ ನಟಿ ಅದಿತಿ ಪ್ತಭುದೇವ

Aditi Prabhudeva Post About Darshan: ಸದ್ಯ ನಟ ದರ್ಶನ್ ಮೇಲಿರುವ ಕೊಲೆ ಕೇಸ್ ತನಿಖೆ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ವಿರುದ್ದ ಟೀಕೆಗಳು ಹೆಚ್ಚಾಗುತ್ತಿದೆ. ರೇಣುಕಾಸ್ವಾಮಿ ಸಾವಿಗೆ ನ್ಯಾಯಕ್ಕಾಗಿ ಹಲವರು ಧ್ವನಿ ಎತ್ತುತ್ತಿದ್ದಾರೆ. ಸ್ಟಾರ್ ಸೆಲೆಬ್ರೆಟಿಗಳು ಕೂಡ ದರ್ಶನ್ ವಿರುದ್ಧ ನಿಂತಿದ್ದಾರೆ. ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಮ್ಯಾ ದರ್ಶನ್ ವಿರುದ್ಧ ಇರುವ ಪೋಸ್ಟ್ ಅನ್ನು ರೀ ಟ್ವೀಟ್ ಮಾಡುವ ಮೂಲಕ ರೇಣುಕಸ್ವಾಮಿ ಪರ ನ್ಯಾಯಕ್ಕಾಗಿ ನಿಂತಿದ್ದರು.

ದರ್ಶನ್ ಗೆ ಕಾನೂನು ರೀತಿಯ ಜವಾವಧಿ ಶಿಕ್ಷೆ ಅಥವಾ ಮರಣ ದಂಡನೆ ಶಿಕ್ಷೆ ಆಗಲೇ ಬೇಕು ಎಂದು ಮಾಡಲಾಗಿರುವ ಟ್ವೀಟ್ ಒಂದನ್ನು ರಮ್ಯಾ ರೀ ಟ್ವೀಟ್ ಮಾಡಿದ್ದು ರೇಣುಕಾ ಸ್ವಾಮಿ ಕುಟುಂಬದ ಪರ ನಿಂತಿದ್ದರು. ಇದೀಗ ರಮ್ಯಾ ದರ್ಶನ್ ವಿರುದ್ಧ ನಿಂತ ಬೆನ್ನಲ್ಲೇ ಸ್ಯಾಂಡಲ್ ವುಡ್ ನ ಇನ್ನೋರ್ವ ಸ್ಟಾರ್ ನಟಿ ಪರೋಕ್ಷವಾಗಿ ದರ್ಶನ್ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

Aditi Prabhudeva Latest News
Image Credit: ottplay

ದರ್ಶನ್ ವಿರುದ್ಧ ತಿರುಗಿಬಿತ್ತಾ ಚಿತ್ರರಂಗ
ನಟಿ ರಮ್ಯಾ ದರ್ಶನ್ ಪರ ಪೋಸ್ಟ್ ಮಾಡಿರುವುದು ಸಾಕಷ್ಟು ವೈರಲ್ ಆಗಿತ್ತು. ಹಾಗೆಯೆ ನವರಸನಾಯಕ ಜಗ್ಗೇಶ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಎಲ್ಲದಕ್ಕೂ ಕೊಲೆಯೇ ಪರಿಹಾರವಲ್ಲ ಎನ್ನುವ ಸಾಲನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅವರು ಕೂಡ ದರ್ಶನ್ ನಡೆಯನ್ನು ಪರೋಕ್ಷವಾಗಿ ವಿರೋಧಿಸಿದ್ದಾರೆ. ಈಗ ಕನ್ನಡದ ಅಪ್ಪಟ ನಟಿ ಅದಿತಿ ಪ್ರಭುದೇವ್ ಕೂಡ ಈ ಸಾಲಿನಲ್ಲಿ ಸೇರಿಕೊಂಡಿದ್ದಾರೆ. ದರ್ಶನ್ ಪ್ರಕರಣದ ಬಗ್ಗೆ ಅದಿತಿ ಪರೋಕ್ಷವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನಟ ದರ್ಶನ್ ಬಗ್ಗೆ ಪರೋಕ್ಷವಾಗಿ ಕಮೆಂಟ್ ಮಾಡಿದ ನಟಿ ಅಧಿತಿ
ಸಂಪತ್ತು ಕಳೆದುಕೊಂಡರೆ ಅದರಿಂದ ನಷ್ಟವಾಗುವುದಿಲ್ಲ. ನೀವು ಆರೋಗ್ಯವನ್ನು ಕಳೆದುಕೊಂಡರ ನೀವು ಏನನ್ನಾದರೂ ಕಳೆದುಕೊಳ್ಳುತ್ತೀರಿ. ಆದರೆ ವ್ಯಕ್ತಿತ್ವವನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ’ ಎಂದು ಇಂಗ್ಲಿಷ್ ಭಾಷೆಯ ನುಡಿಯೊಂದನ್ನು ಹಂಚಿಕೊಂಡು ಧಯಮಯರಾಗಿರಿ ಎಂದು ಹಂಚಿಕೊಂಡಿದ್ದಾರೆ. ಸದ್ಯ ನಟಿ ಅದಿತಿ ಕೂಡ ದರ್ಶನ್ ವಿರುದ್ಧ ನಿಂತಿರುವುದು ವೈರಲ್ ಆಗಿದೆ. ನ್ಯಾಯದ ಪರವಾಗಿ ಧ್ವನಿ ಎತ್ತಿದ ಅದಿತಿ ಪ್ರಭುದೇವ್ ಪೋಸ್ಟ್ ಗೆ ನೋಡುಗರು ಪರ ವಿರೋಧದ ಕಾಮೆಂಟ್ ಮಾಡುತ್ತಿದ್ದಾರೆ.

Join Nadunudi News WhatsApp Group

Aditi Prabhudeva Post About Darshan
Image Credit: Original Source

Join Nadunudi News WhatsApp Group