Adopted Child: ದತ್ತು ಮಕ್ಕಳ ಆಸ್ತಿ ವರ್ಗಾವಣೆ ಮೇಲೆ ಹೊಸ ನಿಯಮ ಜಾರಿಗೆ, ಮಹತ್ವದ ತೀರ್ಪು ನೀಡಿದ ಕೋರ್ಟ್.
ಇದೀಗ ದತ್ತು ಮಕ್ಕಳಿಗೆ ದತ್ತು ಪಡೆದವರ ಆಸ್ತಿಯಲ್ಲಿ ಎಷ್ಟರ ಮಟ್ಟಿಗೆ ಪಾಲು ಇರುತ್ತದೆ.
Adopted Child Property Right: ಇನ್ನು ಭಾರತದ ಕಾನೂನಿನಲ್ಲಿ ಆಸ್ತಿಯ ಹಕ್ಕುಗಳ ಬಗ್ಗೆ ಸಾಕಷ್ಟು ತೀರ್ಪುಗಳನ್ನು ನೀಡಲಾಗಿದೆ. ಭಾರತೀಯ ಕಾನೂನಿನ ನಿಯಮದ ಪ್ರಕಾರ ಆಸ್ತಿ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ.
ಮಕ್ಕಳಿಗೆ ಹೆತ್ತವರ ಆಸ್ತಿಯಲ್ಲಿ ಎಷ್ಟು ಪಾಲು ಇರುತ್ತದೆ ಎನ್ನುವ ಬಗ್ಗೆ ಕಾನೂನು ಈಗಾಗಲೇ ಮಾಹಿತಿಯನ್ನು ನೀಡಿದೆ. ಇದೀಗ ದತ್ತು ಮಕ್ಕಳಿಗೆ (Adopted Child) ದತ್ತು ಪಡೆದವರ ಆಸ್ತಿಯಲ್ಲಿ ಎಷ್ಟರ ಮಟ್ಟಿಗೆ ಪಾಲು ಇರುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ದತ್ತು ಪಡೆದ ಮಗುವಿಗೆ ಆಸ್ತಿಯಲ್ಲಿ ಪಾಲು ಎಷ್ಟು
ಭಾರತೀಯ ಕಾನೂನಿನ ಪ್ರಕಾರ ಹೆತ್ತವರ ಆಸ್ತಿಯಲ್ಲಿ ಮಕ್ಕಳಿಗೆ ಸಮಪಾಲು ನೀಡಲಾಗುತ್ತದೆ. ಹೆಣ್ಣು ಮಗುವಿಗೂ ಕೂಡ ತಂದೆ ತಾಯಿಯ ಆಸ್ತಿಯ ಸಮಪಾಲನ್ನು ನೀಡಬೇಕು ಎಂದು ಕೋರ್ಟ್ ಈಗಾಗಲೇ ಆದೇಶವನ್ನು ಹೊರಡಿಸಿದೆ. ಇನ್ನು ದೇಶದೆಲ್ಲೆಡೆ ಸಾಕಷ್ಟು ಜನರು ಮಕ್ಕಳನ್ನು ದತ್ತು ಪಡೆಯುತ್ತಾರೆ. ಈ ಹಿಂದೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವ ಕಾನೂನು ಇತ್ತು. ಆದರೆ ಇದೀಗ ನ್ಯಾಯಾಲಯ ದತ್ತು ಪಡೆದ ಮಗುವಿಗೆ ಆಸ್ತಿಯಲ್ಲಿ ಎಷ್ಟು ಪಾಲಿದೆ ಎನ್ನುವ ಬಗ್ಗೆ ಆದೇಶವನ್ನು ಹೊರಡಿಸಿದೆ.
ದತ್ತು ಮಕ್ಕಳು ಕಾನೂನು ಬದ್ದ ಉತ್ತರಾಧಿಕಾರಿಯಾಗುತ್ತಾರೆ
ಕಾನೂನಿನ ಪ್ರಕಾರ ಮಕ್ಕಳನ್ನು ದತ್ತು ಪಡೆದ ಮೇಲೆ ಮಗ ಕಾನೂನುಬದ್ಧ ಉತ್ತರಾಧಿಕಾರಿಯಾಗಿರುತ್ತಾನೆ. ಹಿಂದೂ ಉತ್ತರಾಧಿಕಾರ ಕಾಯಿದೆಯು ಹಿಂದೂ, ಬೌದ್ಧ, ಸಿಖ್ ಮತ್ತು ಜೈನ ಧರ್ಮದ ಜನರಿಗೆ ಅನ್ವಯಿಸುತ್ತದೆ. ಹಾಗೆಯೇ ತಾಯಿ ಕೂಡ ದತ್ತು ಮಗನ ಆಸ್ತಿಯಲ್ಲಿ ಹಕ್ಕುದಾರಳಾಗಿರುತ್ತಾಳೆ.
ದತ್ತು ಮಕ್ಕಳಿಗೆ ದತ್ತು ಪಡೆದವರ ಆಸ್ತಿಯಲ್ಲಿ ಪಾಲು ಇರುತ್ತದೆ. ದತ್ತು ಪಡೆದ ಮಗು ಹೆಣ್ಣಾಗಲಿ ಗಂಡಾಗಲಿ ದತ್ತು ಪಡೆದವರ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕಿರುತ್ತದೆ ಎಂದು ನ್ಯಾಯಾಲಯ ಆದೇಶ ನೀಡಿದೆ. ಪೋಷಕರು ಯಾವುದೇ ರೀತಿಯ ವಿಲ್ ಅನ್ನು ಬರೆಯದೆ ಇದ್ದರೆ ಮಕ್ಕಳಿಗೆ ಆಸ್ತಿಯ ಹಕ್ಕು ದೊರೆಯುತ್ತದೆ. ಮಗುವನ್ನು ದತ್ತು ತೆಗೆದುಕೊಳ್ಳುವ ಕಾನೂನು ಪ್ರಕ್ರಿಯೆಯು ಪೂರ್ಣಗೊಂಡಾಗ ಆ ಮಗುವಿಗೆ ಎಲ್ಲಾ ಹಕ್ಕುಗಳು ಸಿಗುತ್ತದೆ. ಆ ಮಗುವು ದತ್ತು ಪಡೆದ ಪೋಷಕರ ಆಸ್ತಿಯಲ್ಲಿ ಹಕ್ಕನ್ನು ಹೊಂದುತ್ತಾಳೆ.