Ads By Google

Adverse Possession: 12 ವರ್ಷದಿಂದ ಒಂದೇ ಜಾಗದಲ್ಲಿ ಇದ್ದವರಿಗೆ ಕಾನೂನು ಬದಲು, ಬಡವರಿಗೆ ಕೋರ್ಟ್ ಹೊಸ ಆದೇಶ

Adverse Possession Law

Image Credit: Etmoney

Ads By Google

Adverse Possession Law: ಭಾರತೀಯ ಕಾನೂನಿನಲ್ಲಿ ಆಸ್ತಿಗೆ (Property Law) ಸಂಬಂಧಿಸಿದಂತೆ ಅನೇಕ ತಿದ್ದುಪಡಿಯನ್ನು ತರಲಾಗಿದೆ. ಇತ್ತೀಚೆಗಂತೂ ಕೇಂದ್ರ ಸರ್ಕಾರ ಆಸ್ತಿ ಖರೀದಿ ಮತ್ತು ಮಾರಾಟ ನಿಯಮವನ್ನು ಕೂಡ ಬದಲಾಯಿಸುತ್ತಿವೆ. ಇನ್ನು ಸ್ಥಿರಾಸ್ತಿಗಳ ಮಾರಾಟದ ಮಾರ್ಗಸೂಚಿ ದರವನ್ನು ಕೊಡ ಶೇ. 30 ರಷ್ಟು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಸದ್ಯದಲ್ಲೇ ಆಸ್ತಿ ಖರೀದಿಗೆ ದುಬಾರಿಯಾಗಲಿದೆ.

ಇನ್ನು ದೇಶದ್ಲಲಿ ಆಸ್ತಿಗೆ ಸಂಬಂಧಿಸಿದಂತೆ ಕಾನೂನಿನ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳು ದಾಖಲಾಗುತ್ತದೆ. ಒಂದು ಪ್ರಕರಣದ ತನಿಖೆ ನಡೆದ ನಂತರ ಹೊಸ ಹೊಸ ಕಾನೂನು ಹುಟ್ಟಿಕೊಳ್ಳುತ್ತದೆ. ಇನ್ನು ಆಸ್ತಿಯನ್ನು ಹೊಂದಿರುವವರು ಆಸ್ತಿಯ ಬಗ್ಗೆ ಇರುವ ಕಾನೂನಿನ ಪ್ರತಿ ನಿಯಮವನ್ನು ಅರಿತುಕೊಂಡಿರಬೇಕು. ಇಲ್ಲವಾದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.

Image Credit: Agrifarming

ಆಸ್ತಿಯನ್ನು ಬಾಡಿಗೆ ನೀಡುವವರ ಗಮನಕ್ಕೆ
ಸಾಮಾನ್ಯವಾಗಿ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ ಅದನ್ನು ಬಾಡಿಗೆಗೆ ನೀಡಲು ನಿರ್ಧರಿಸುತ್ತಾರೆ. ಇನ್ನು ಕೆಲವು ವಿದೇಶಕ್ಕೆ ಹೋಗಲು ಬಯಸಿದಾಗ ತಮ್ಮ ಆಸಿಯನ್ನು ಬಾಡಿಗೆಗೆ ನೀಡಿ ಹೋಗುವುದು ಸಾಮಾನ್ಯ. ಇನ್ನು ಬಾಡಿಗೆಗೆ ನೀಡುವಾಗ ಮತ್ತು ಬಾಡಿಗೆಗೆ ನೀಡಿದ ನಂತರವೂ ಮಾಲೀಕರು ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು, ಇಲ್ಲದಿದ್ದರೆ ಅವರು ಆಸ್ತಿಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು.

12 ವರ್ಷಗಳವರೆಗೆ ಆಸ್ತಿ ಹೊಂದಿರುವವರು ಆಸ್ತಿಯ ಮಾಲೀಕರಾಗುತ್ತಾರೆಯೇ..?
ಭಾರತ ದೇಶದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳಿವೆ. ಇನ್ನು 12 ವರ್ಷಗಳ ಕಾಲ ನಿರಂತರವಾಗಿ ವಾಸಿಸುವ ನಂತರ, ಬಾಡಿಗೆದಾರ ಆ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು. ಆದರೆ ಇದು ಕೆಲವು ಷರತ್ತುಗಳನ್ನು ಹೊಂದಿದೆ. ಈ ರೀತಿಯ ಆಸ್ತಿ ವಿವಾದಕ್ಕೆ ಒಳಗಾಗುತ್ತದೆ.

Image Credit: Housing

ಉದಾಹರಣೆಗೆ, 12 ವರ್ಷಗಳ ಅವಧಿಯಲ್ಲಿ ಭೂಮಾಲೀಕರು ಸ್ವಾಧೀನಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವನ್ನು ಮಾಡಿಲ್ಲ. ಅಂದರೆ ಹಿಡುವಳಿದಾರನು ನಿರಂತರವಾಗಿ ಆಸ್ತಿಯನ್ನು ಹೊಂದಿದ್ದಾನೆ. ಯಾವುದೇ ವಿರಾಮಗಳು ಇರಬಾರದು. ಹಿಡುವಳಿದಾರನು ಆಸ್ತಿ ಪತ್ರ, ನೀರಿನ ಬಿಲ್, ವಿದ್ಯುತ್ ಬಿಲ್ ಮುಂತಾದ ವಿಷಯಗಳನ್ನು ಸಾಕ್ಷ್ಯವಾಗಿ ಪ್ರಸ್ತುತಪಡಿಸಬಹುದು. ಸುಪ್ರೀಂ ಕೋರ್ಟ್ 12 ವರ್ಷಗಳ ಕಾಲ ಭೂಮಿ ಹೊಂದಿರುವವರನ್ನು ಇನ್ನುಮುಂದೆ ಭೂಮಿಯ ಮಾಲೀಕ ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ.

ಯಾವ ರೀತಿಯ ಭೂಮಿಗೆ ಈ ನಿಯಮ ಅನ್ವಯವಾಗಲಿದೆ
ಇನ್ನು ಸರ್ಕಾರೀ ಭೂಮಿಗೆ 12 ವರ್ಷದ ನಂತರ ಅಧಿಕಾರವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಖಾಸಗಿ ಭೂಮಿಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಭಾರತೀಯ ಕಾನೂನು ಒಬ್ಬ ವ್ಯಕ್ತಿಗೆ 12 ವರ್ಷಗಳ ವರೆಗೆ ಯಾವುದೇ ಭೂಮಿಯ ಮೇಲೆ ತನ್ನ ಹಕ್ಕುಗಳನ್ನು ಪ್ರತಿಪಾದಿಸುವ ಹಕ್ಕನ್ನು ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಯಾವುದೇ ಜಮೀನು ವಿವಾದದಲ್ಲಿದ್ದರೆ, ಒಬ್ಬ ವ್ಯಕ್ತಿಯು ಅದರ ಮೇಲೆ ತನ್ನ ಹಕ್ಕುಗಳನ್ನು ಪ್ರತಿಪಾದಿಸಿ 12 ವರ್ಷಗಳಲ್ಲಿ ಪ್ರಕರಣವನ್ನು ದಾಖಲಿಸಬಹುದು ಮತ್ತು ಅದನ್ನು ನ್ಯಾಯಾಲಯದಿಂದ ಹಿಂದಕ್ಕೆ ಪಡೆಯಬಹುದು. ಇನ್ನು ಬಾಡಿಗೆ ಮನೆಯ ವಿಷಯದಲ್ಲಿ ಕೂಡ ಈ ಕಾನೂನು ಅನ್ವಯ ಆಗಲಿದೆ ಎಂದು ಕಾನೂನು ತಿಳಿಸಿದೆ. 12 ವರ್ಷಗಳ ವರೆಗೆ ಒಂದೇ ಮನೆಯಲ್ಲಿ ಬಾಡಿಗೆ ಇದ್ದು ಅದಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳು ನಿಮ್ಮಬಳಿ ಇದ್ದರೆ ನೀವು ಆ ಮನೆಯ ಮಾಲೀಕರಾಗಬಹುದು.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.