Social Media: ಇದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಿ ಸೋಶಿಯಲ್ ಮೀಡಿಯಾ ಬಳಸುವಂತಿಲ್ಲ, ಹೈಕೋರ್ಟ್ ಆದೇಶ.
Social Media ಬಳಸುತ್ತಿರುವ ಮಕ್ಕಳಿಗೆ ಹೊಸ ನಿಯಮ.
Age Limit For Children’s Social Media Use: ಪ್ರಸ್ತುತ ಜನರಿಗೆ Mobile Phone ಗಳು ಒಂದು ರೀತಿಯಲ್ಲಿ ಅವಿಭಾಜ್ಯ ಅಂಗವಾಗಿದೆ ಎನ್ನಬಹುದು. ಸಣ್ಣ ಮಕ್ಕಳಿಂದ ಹಿಡಿದು ವೃದ್ದರು ಕೂಡ ಅತಿಯಾಗಿ ಮೊಬೈಲ್ ಅನ್ನು ಬಳಸುತ್ತಿದ್ದಾರೆ. ಇನ್ನು ವಯಸ್ಕರು ಮೊಬೈಲ್ ಬಳಸಿದರೆ ಅದರಿಂದ ಉಂಟಾಗುವ ಪರಿಣಾಮವನ್ನು ಎದುರಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಆದರೆ ಸಣ್ಣ ಮಕ್ಕಳಿಗೆ ಮೊಬೈಲ್ ಬಳಕೆಯಿಂದ ಉಂಟಾಗುವ ಸಮಸ್ಯೆಯನ್ನು ಎದುರಿಸುವ ಶಕ್ತಿ ಇರುವುದಿಲ್ಲ.
ಅತಿಯಾದ ಮೊಬೈಲ್ ಬಳಕೆ ಮಕ್ಕಳ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಹೆಚ್ಚು ಮೊಬೈಲ್ ಬಳಸುದರಿಂದ ಭವಿಷ್ಯದಲ್ಲಿ ಮಕ್ಕಳು ಕಣ್ಣಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಪೋಷಕರು ಎಷ್ಟು ಕಡಿವಾಣ ಹಾಕಿದರೂ ಕೂಡ ಮಕ್ಕಳು ಮೊಬೈಲ್ ಬಳಸದೆ ಇರುವುದಿಲ್ಲ.
ಮಕ್ಕಳು ಹೆಚ್ಚಾಗಿ Social ಮೀಡಿಯಾ ಬಳಸುತ್ತಿದ್ದಾರೆ
ಹಿಂದಿನ ಕಾಲದಲ್ಲಿ ಹೊರಗಡೆ ಹೋಗಿ ಆಟ ಆಡಿದರೆ ಇಂದು ಮೊಬೈಲ್ ನಲ್ಲಿ ಒಳಗೆ ಕುಳಿತು ಎಲ್ಲ ರೀತಿಯ ಆಟವನ್ನು ಆಡಲು ಪ್ರಾರಂಭಿಸಿದ್ದಾರೆ. ಕೆಲ ಮಕ್ಕಳು ಮೊಬೈಲ್ ಇಲ್ಲದೆ ಊಟವನ್ನೇ ಮಾಡುವುದಿಲ್ಲ. ಇತ್ತೀಚೆಗಂತೂ Social Media ಬಳಕೆ ಹೆಚ್ಚುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಉಪಯುಕ್ತವಿಲ್ಲದ ಮಾಹಿತಿ ಕೂಡ ತೋರಿಸಲಾಗುತ್ತದೆ.
Social Media ಬಳಸುತ್ತಿರುವ ಮಕ್ಕಳಿಗೆ ಹೊಸ ನಿಯಮ
ಕೆಟ್ಟ ವಿಷಯಗಳು ಸಣ್ಣ ಮಕ್ಕಳ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಅತಿಯಾಗಿ ಮೊಬೈಲ್ ಬಳಸಿದರೆ ಅದು ಮಕ್ಕಳ ಬೆಳೆವಣಿಗೆ ತೊಂದರೆಯಾಗುತ್ತದೆ. ಹೀಗಾಗಿ ಇದೀಗ ಸರ್ಕಾರ ಮಕ್ಕಳು Social Media ಬಳಕೆಗೆ ಕಡಿವಾಣ ಹಾಕಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಮಕ್ಕಳಿಗಾಗಿ ಹೊಸ ನಿಯಮವನ್ನು ಜಾರಿ ಮಾಡಿದೆ. ಮಕ್ಕಳು Social Media ಬಳಸುವುದನ್ನು ಕಡಿಮೆ ಮಾಡುವುದು ಮಕ್ಕಳ ಹಕ್ಕು ಆಯೋಗದ ಉದ್ದೇಶವಾಗಿದೆ.
ಮಕ್ಕಳ ಸೋಶಿಯಲ್ ಮೀಡಿಯಾ ಬಳಕೆಗೆ ವಯೋಮಿತಿ ನಿಗದಿ
ಅಪ್ರಾಪ್ತ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆಯಿಂದಾಗಿ ಶಿಕ್ಷಣದಲ್ಲಿ ಹಿನ್ನಡೆ ಕಾಣುತ್ತಿರುವುದು ಗಮನಕ್ಕೆ ಬಂದಿದೆ. ಸೋಶಿಯಲ್ ಮೀಡಿಯಾ ಬಳಕೆ ಮಕ್ಕಳ ಶಿಕ್ಷಣ ಕಲಿಕೆಯಲ್ಲಿನ ಏಕಾಗ್ರತೆಯನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಹೈಕೋರ್ಟ್ ಮಕ್ಕಳ ಸೋಶಿಯಲ್ ಮೀಡಿಯಾ ಬಳಕೆಗೆ ವಯೋಮಿತಿ ನಿಗದಿ ಮಾಡಿದೆ. ಮತದಾನಕ್ಕೆ 21 ವರ್ಷ ನಿಗದಿ ಮಾಡಿರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದ ಬಳಕೆಗೆ 21 ವರ್ಷ ನಿಗದಿ ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸಲಹೆ ನೀಡಿದೆ.