Ads By Google

Ahoratra And Darshan: ದರ್ಶನ್ ಜನರನ್ನು ವಶೀಕರಣ ಮಾಡುತ್ತಿದ್ದಾರೆ, ಆರೋಪ ಮಾಡಿದ ಅಹೋರಾತ್ರ.

ahoratra and darshan
Ads By Google

Ahoratra And Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರ ಕ್ರಾಂತಿ (Kranti)  ಚಿತ್ರದ ಬಗ್ಗೆ ಅಹೋರಾತ್ರ ಇದೀಗ ಕಿಡಿಕಾರಿದ್ದಾರೆ.

ಕ್ರಾಂತಿ ಸಿನಿಮಾವನ್ನು ಶಾಲಾ ಮಕ್ಕಳಿಗೆ ಎಂದು ಹೇಳಿಕೊಂಡು ಜನರನ್ನು ವಶೀಕರಣ ಮಾಡುತ್ತಿದ್ದೀರಿ ಎಂದು ಅಹೋರಾತ್ರ ದರ್ಶನ್ ಅವರನ್ನು ನಿಂದಿಸುತ್ತಿದ್ದಾರೆ. ಈ ವಿಷಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Image Credit: timesofindia.indiatimes

ಕ್ರಾಂತಿ ಚಿತ್ರವನ್ನು ನಿಂದಿಸಿದ ಅಹೋರಾತ್ರ (Ahoratra) 
ಕ್ರಾಂತಿ ಚಿತ್ರದಲ್ಲಿನ ಪುಷ್ಪವತಿ ಹಾಡಿನ ಬಗ್ಗೆ ಅಹೋರಾತ್ರ ಕಿಡಿಕಾರಿದ್ದಾರೆ. ಕ್ರಾಂತಿ ಚಿತ್ರದಲ್ಲಿ ಪುಷ್ಪವತಿ ಹಾಡಿನಲ್ಲಿ , ಹೆಣ್ಣನ್ನು ಅಕ್ಕನ ಗಂಡನನ್ನು ಕದ್ದು ಬಯಸುವ ಹೆಣ್ಣಾಗಿ ತೋರಿಸಿ ಲೇವಡಿ ಮಾಡಲಾಗಿದೆ.

ನಿಮ್ಮ ಹಾಡುಗಳಲ್ಲಿ ಏನು ನೀತಿ ಇದೆ? ನಿನಗೆ ನಾಚಿಕೆಯಾಗಬೇಕು ಆಗ ತಾನೇ ಮೈ ನೆರೆದಿರುವ ಹೆಣ್ಣನ್ನು ಪುಷ್ಪವತಿ ಎನ್ನುತ್ತಾರೆ.. ಆದರೆ ಅದನ್ನು ವಿಕೃತವಾಗಿ ತೋರಿಸಿದ್ದೀರಿ. ಕ್ರಾಂತಿ ಸಿನಿಮಾವನ್ನು ಶಾಲಾ ಮಕ್ಕಳಿಗೆ ಎಂದು ಹೇಳಿಕೊಂಡು ಜನರನ್ನು ವಶೀಕರಣ ಮಾಡುತ್ತಿದ್ದೀರಿ ಎಂದು ಅಹೋರಾತ್ರ ಅವರು ದರ್ಶನ್ ಅವರನ್ನು ನಿಂದಿಸುತ್ತಿದ್ದಾರೆ.

Image Credit: filmibeat

ಸುದೀಪ್  (Sudeep) ಅವಹೇಳನ ಮಾಡಿದ್ದ ಅಹೋರಾತ್ರ
ಕೆಲವು ದಿನಗಳ ಹಿಂದೆ ನಟ ಕಿಚ್ಚ ಸುದೀಪ್ ಅವರ ಬಗ್ಗೆ ಕೂಡ ಅಹೋರಾತ್ರ ಅವಹೇಳನ ಮಾಡಿದ್ದರು. ರಮ್ಮಿ ಜಾಹಿರಾತು (Rummy Advertisement) ನಲ್ಲಿ ನಟಿಸಿದ್ದಕೆ ಕಿಚ್ಚ ಸುದೀಪ್ ಅವರನ್ನು ಅಹೋರಾತ್ರ ನಿಂದಿಸಿದ್ದರು. ಇದೀಗ ದರ್ಶನ್ ಅವರ ಕ್ರಾಂತಿ ಚಿತ್ರದ ಬಗ್ಗೆ ಕೂಡ ಅವಹೇಳನ ಮಾಡುತ್ತಿದ್ದಾರೆ.

ದರ್ಶನ ಅವರನ್ನು ಏಕವಚನದಲ್ಲಿ ನಿಂದಿಸಿದ ಅಹೋರಾತ್ರ
ಇತ್ತೀಚೆಗೆ ಕ್ರಾಂತಿ ಸಿನಿಮಾದ ಸಂದರ್ಶನದಲ್ಲಿ ದರ್ಶನ್ ಅದ್ರಷ್ಟ ದೇವತೆಯ ಬಗ್ಗೆ ಮಾತನಾಡಿದ್ದಕ್ಕೆ ದರ್ಶನ್ ಅವರನ್ನು ಏಕವಚನದಿಂದ ನಿಂದಿಸಿದ್ದಾರೆ. ದರ್ಶನ್ ಅವರನ್ನು ರೌಡಿ ಬಾಸ್ ಎಂದು ಕರೆದಿದ್ದರು.

Image Credit: ottplay

ವೇದ ಸಿನಿಮಾವನ್ನು ಹೋಲಿಸಿ ಕ್ರಾಂತಿ ಸಿನಿಮಾದ ಬಗ್ಗೆ ಮಾತನಾಡಿದ ಅಹೋರಾತ್ರ
ಯೋಗರಾಜ್ ಭಟ್ (Yograj Bhat) , ಸುದೀಪ್, ದರ್ಶನ್ ಅವರನ್ನು ನಿಂದಿಸುತ್ತಾ ಕ್ರಾಂತಿ ಸಿನಿಮಾಗೆ ವೇಧ ಸಿನಿಮಾವನ್ನು ಹೋಲಿಸುತ್ತಾ ಮಾತನಾಡಿದ್ದಾರೆ. ‘ವೇದ ಸಿನಿಮಾ ಮಾಡಿದ್ದಕಾಗಿ ನಿಮಗೆ ಧನ್ಯವಾದಗಳು.

ನೋಡಿದರೆ ಇಂತಹ ಸಿನಿಮಾ ನೋಡಬೇಕು. ನೀವೆಲ್ಲರೂ ಈ ಚಿತ್ರದ ಹೀರೋಯಿನ್ ನ ಕಾಲ ಕೆಳಗೆ ತೋರಬೇಕು. ಹೆಣ್ಣನ್ನು ನಿಂದಿಸುವವರಿಗೆ ಉತ್ತರಿಸಲು ಇದೊಂದು ಸಿನಿಮಾ ಸಾಕು’.

Image Credit: ottplay

“ಇಂದಿನ ಕೆಲವು ಹೀರೋಗಳು ಕನಿಷ್ಠ ಜಿರೊಗಳು ಆಗದೆ ಅದಕ್ಕಿಂತ ಕಡಿಮೆ ಆಗಿದ್ದಾರೆ. ಸಮಾಜವನ್ನು ನಾಶ ಮಾಡುತ್ತಿರುವ ನಿಮಗೆಲ್ಲರಿಗೂ ವೇದ ಸಿನಿಮಾ ಪಾಠವಾಗಲಿದೆ. ಸಿನಿಮಾದಲ್ಲಿ ನಾಯಕ ನಾಯಕಿ ಅತ್ಯದ್ಭುತ. ಹೊಲಮನೆಯ ಹೆಣ್ಣಾದರೇನು? ಅರಮನೆಯ ಹೆಣ್ಣಾದರೇನು? ಹೆಣ್ಣು ಹೆಣ್ಣೇ. ವೇದ ಚಿತ್ರದಲ್ಲಿ ಹೆಣ್ಣು ನಿಂದನೆಯ ಬಗ್ಗೆ ಬಹಳ ಚೆನ್ನಾಗಿ ತೋರಿಸಲಾಗಿದೆ.

ಈ ಚಿತ್ರದ ಎಲ್ಲ ನಟರಿಗೂ ನನ್ನ ನಮನಗಳು. ಇಂತಹ ಚಿತ್ರಗಳನ್ನು ಎಲ್ಲರು ಬೆಳೆಸಬೇಕು. ಆದರೆ ಕ್ರಾಂತಿ ಚಿತ್ರದ ಹಾಡಿನಲ್ಲಿ ಭಟ್ಟರು ಅಸಭ್ಯ ಸಾಲುಗಳನ್ನು ಬರೆದಿದ್ದಾರೆ ಎಂದು ಹೇಳುವ ಮೂಲಕ ಯೋಗರಾಜ್ ಭಟ್ ಅವರನ್ನು ಕೂಡ ಅಹೋರಾತ್ರ ನಿಂದಿಸಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field