Aindrila Sharma In Hospital: ಕೋಮಾ ತಲುಪುವ ಸ್ಥಿತಿಯಲ್ಲಿ ದೇಶದ ಟಾಪ್ ನಟಿ, ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ.

Aindrila Sharma In Hospital: ಜೀವನದಲ್ಲಿ ಕೆಲವು ಸಮಯದ ನಮಗೆ ತಿಳಿಯದೆ ಕೆಲವು ನಮ್ಮ ಬಳಿ ಬರುತ್ತದೆ. ನಮಗೆ ಹೇಳದೆ ನಮ್ಮಜೊತೆ ಬರುವ ಒಂದು ಗೆಳೆಯ ಅಂದರೆ ಅದೂ ಮಾರಕ ರೋಗಗಳು ಎಂದು ಹೇಳಿದರೆ ತಪ್ಪಾಗಲ್ಲ.

ಈಗಿನ ಕಾಲದಲ್ಲಿ ಜನರ ಜೀವನ ಶೈಲಿಗಳು ರೋಗಗಳನ್ನ ತಮ್ಮತ್ತ ಆಕರ್ಷಣೆ ಮಾಡುತ್ತಿದೆ. ಆಹಾರ ಪೆದ್ದರಿ, ಜನರ ಜೀವನಶೈಲಿ ಮತ್ತು ವಾತಾವರಣಗಳು ಜನರಿಗೆ ನಾನಾ ರೀತಿಯ ರೋಗಗಳು ಬರುವಂತೆ ಮಾಡುತ್ತಿದ್ದೆ. ಇತ್ತೀಚಿನ ದಿನಗಳಲ್ಲಿ ಜನರನ್ನ ಕಾಡುತ್ತಿರುವ ಮಾರಕ ರೋಗ ಅಂದರೆ ಅದು ಕ್ಯಾನ್ಸರ್ (Cancer) ಆಗಿದೆ.

ಸದ್ಯ ವೈದ್ಯಲೋಕ ಮುಂದುವರೆದಿದ್ದು ಕೆಲವು ಕ್ಯಾನ್ಸರ್ ಗಳಿಗೆ ಔಷಗಳನ್ನ ಕಂಡುಹಿಡಿಯಲಾಗಿದೆ. ಕ್ಯಾನ್ಸರ್ ಅನ್ನು ಆರಂಭದಲ್ಲಿ ಗುರುತಿಸಿದರೆ ಅದನ್ನ ಚಿಕಿತ್ಸೆಯ ಮೂಲಕ ಗುಣಮುಖ ಮಾಡಬಹುದು, ಆದರೆ ಕೊನೆಯ ಹಂತವನ್ನ ತಲುಪಿದರೆ ಅದನ್ನ ಗುಣಮುಖ ಮಾಡುವುದು ಬಹಳ ಕಷ್ಟವಾಗಿದೆ.

Actress Aindrila Sharma is undergoing treatment in the hospital due to stroke
Image Credit: timesofindia.indiatimes

ಸದ್ಯ ದೇಶದಲ್ಲಿ ಈಗ ಚಿತ್ರರಂಗದ ಹಲವು ನಟ ನಟಿಯರಿಗೆ ಕ್ಯಾನ್ಸರ್ ರೋಗ ಬಂದಿದ್ದು ಕೆಲವು ನಟ ನಟಿಯರು ಅದನ್ನ ಗುಣಪಡಿಸಿಕೊಂಡರೆ ಕೆಲವು ನಟ ನಟಿಯರು ಅದರಿಂದ ಜೀವವನ್ನ ಕಳೆದುಕೊಂಡಿದ್ದಾರೆ. ಚಿತ್ರರಂಗದ ಖ್ಯಾತ ನಟಿ ಎರಡು ಬಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು ಈಗ ಕೋಮಾ (Coma ) ಹಂತಕ್ಕೆ ತಲುಪುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಕೋಮಾ ಹಂತಕ್ಕೆ ತಲುಪಿದ ಖ್ಯಾತ ನಟಿ ಆಯಂಡ್ರಿಲಾ ಶರ್ಮಾ
ಹೌದು ಬೆಂಗಾಲಿ ಚಿತ್ರರಂಗದಲ್ಲಿ (Bengali Film Industry) ಅಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ನಟಿ ಆಯಂಡ್ರಿಲಾ ಶರ್ಮಾ (Aindrila Sharma) ಅವರು ಎರಡು ಬಾರಿ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದು ಈಗ ಕೋಮಾ ಹಂತಕ್ಕೆ ತಲುಪುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಿದ್ದಾರೆ.

Join Nadunudi News WhatsApp Group

ಹಲವು ಬೆಂಗಾಲಿ ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದ ಖ್ಯಾತ ನಟಿ ಆಯಂಡ್ರಿಲಾ ಶರ್ಮಾ ಅವರು ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.

Actress Aindrila Sharma is in a state of coma in the hospital
Image Credit: timesofindia.indiatimes

ಎರಡು ಬಾರಿ ಕ್ಯಾನ್ಸರ್ ಗೆದ್ದರು ನಟಿ ಆಯಂಡ್ರಿಲಾ ಶರ್ಮಾ
ನಟಿ ಆಯಂಡ್ರಿಲಾ ಶರ್ಮಾ ಅವರು ಚಿತ್ರರಂಗದಲ್ಲಿ ಮಿಂಚುತ್ತಿರುವ ಸಮಯದಲ್ಲಿ ಕ್ಯಾನ್ಸರ್ ಅನ್ನುವ ಮಹಾಮಾರಿ ನಟಿ ಆಯಂಡ್ರಿಲಾ ಶರ್ಮಾ ಅವರು ಅವರನ್ನ ಆವರಿಸಿಕೊಳ್ಳುತ್ತದೆ.

ಆರಂಭದಲ್ಲಿ ಕ್ಯಾನ್ಸರ್ ಗುರುತಿಸಿದ ನಟಿ ಆಯಂಡ್ರಿಲಾ ಶರ್ಮಾ ಅವರು ಭಯಪಡದೆ ಅದಕ್ಕೆ ಸರಿಯಾದ ಚಿಕಿತ್ಸೆಯನ್ನ ಪಡೆದುಕೊಂಡು ಅದರಿಂದ ಗುಣಮುಖರಾದರು. ಒಂದು ಕ್ಯಾನ್ಸರ್ ನಿಂದ ಗುಣಮುಖರಾಗಿ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಆಯಂಡ್ರಿಲಾ ಶರ್ಮಾ ಅವರಿಗೆ ಇನ್ನೊಮ್ಮೆ ಕ್ಯಾನ್ಸರ್ ಕಾಣಿಸಿಕೊಂಡಿತು.

ಎರಡನೆಯ ಬಾರಿ ಕ್ಯಾನ್ಸರ್ ಕಾಣಿಸಿಕೊಂಡ ಸಮಯದಲ್ಲಿ ವೈದ್ಯರು ಕ್ಯಾನ್ಸರ್ ಗದ್ದೆಯನ್ನ ಹೊರತಗೆದು ನಟಿಯ ಪಾರಣವನ್ನ ಉಳಿಸಿದರು. ಎರಡು ಬಾರಿ ಕ್ಯಾನ್ಸರ್ ಗೆದ್ದ ನಟಿ ಆಯಂಡ್ರಿಲಾ ಶರ್ಮಾ ಈಗ ಕೋಮಾ ಹಂತಕ್ಕೆ ಹೋಗುವ ಸಾಧ್ಯತೆ ಇದೆ ವೈದ್ಯರು ಹೇಳುತ್ತಿದ್ದಾರೆ.

Actress Aindrila Sharma is being treated on ventilator in the hospital due to stroke
Image Credit: timesofindia.indiatimes

ಸ್ಟ್ರೋಕ್ ಕಾರಣ ನಟಿ ಕೋಮಾಗೆ ಹೋಗುವ ಸಾಧ್ಯತೆ ಇದೆ
ನಟಿ ಆಯಂಡ್ರಿಲಾ ಶರ್ಮಾ ಅವರಿಗೆ ಈಗ ಸ್ಟ್ರೋಕ್ ಆಗಿದ್ದು ಅವರು ಕೋಮಾ ಹೋಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆಯಂಡ್ರಿಲಾ ಶರ್ಮಾ ಅವರ ದೇಹದ ಕೆಲವು ಭಾಗಗಳು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಹೀಗೆ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ಅವರು ಕೋಮಾ ಹೋಗುವ ಸಾಧ್ಯತೆ ಇದೆ ಬಹಳ ಇದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಸದ್ಯ ನಟಿ ಆಯಂಡ್ರಿಲಾ ಶರ್ಮಾ ಅವರ ಸ್ಥಿತಿ ಬಹಳ ಗಮಭೀರವಾಗಿದ್ದು ಅವರನ್ನ ವೆಂಟಿಲೇಟರ್ ನಲ್ಲಿ ಇಡಲಾಗಿದೆ.

ಸಣ್ಣ ವಯಸ್ಸಿನಲ್ಲಿಯೇ ಹಲವು ಖಾಯಿಲೆಗಳಿಗೆ ನಟಿ ಆಯಂಡ್ರಿಲಾ ಶರ್ಮಾ ಅವರು ಒಳಗಾಗಿದ್ದು ಹಲವು ಅಭಿಮಾನಿಗಳು ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಸದ್ಯ ನಟಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದು ವೈದ್ಯರು ಸೂಕ್ತ ಚಿಕಿತ್ಸೆಯನ್ನ ನೀಡುತ್ತಿದ್ದಾರೆ.

Join Nadunudi News WhatsApp Group