ದೇಶದಲ್ಲಿ ಅಪಘಾತಗಳು ಯಾವ ಪ್ರಾಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ಸಮ್ನಾಯವಾಗಿ ಎಲ್ಲರಿಗೂ ತಿಳಿದೇ ಇದೆ ಎಂದು ಹೇಳಬಹುದು. ಅದೆಷ್ಟೋ ಜನರು ಅಪಘಾತದ ಕಾರಣ ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಸರಿಯಾಗಿ ವಾಹನ ಚಾಲನೆ ಮಾಡಲು ಬಾರದೆ ಇರುವುದು ಮತ್ತು ಸರಿಯಾದ ಸುರಕ್ಷತೆ ಇಲ್ಲದೆ ಇರುವುದು ಜನರ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಿದೆ ಎಂದು ಹೇಳಬಹುದು. ಇನ್ನು ವಾಹನ ತಯಾರಿಕಾ ಕಂಪನಿಗಳು ಈಗ ಜನರ ಸುರಕ್ಷತೆಯ ಕಡೆ ಹೆಚ್ಚಿನ ಗಮನವನ್ನ ಕೊಡುತ್ತಿದ್ದು ತಮ್ಮ ವಾಹನಗಳಲ್ಲಿ ಸುರಕ್ಷತಾ ಕವಚವನ್ನ ಹೆಚ್ಚು ಹೆಚ್ಚು ಅಳವಡಿಸುತ್ತಿದ್ದಾರೆ ಎಂದು ಹೇಳಬಹುದು.
ಇನ್ನು ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ನಾವು ಕಾರುಗಳಲ್ಲಿ ಏರ್ ಬ್ಯಾಗ್ ಇರುವುದನ್ನ ನೋಡಿರುತ್ತೇವೆ ಮತ್ತು ಈ ಏರ್ ಬ್ಯಾಗ್ ಅಪಘಾತದ ಸಮಯದಲ್ಲಿ ತೆರೆದುಕೊಂಡು ಜನರ ಪ್ರಾಣವನ್ನ ಕಾಪಾಡುವಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ ಎಂದು ಹೇಳಬಹುದು. ಇನ್ನು ಈಗ ಕಾರುಗಳಲ್ಲಿ ಮಾತ್ರವಲ್ಲದೆ ಈಗ ಬೈಕ್ ಮತ್ತು ಸ್ಕೂಟರ್ ಗಳಲ್ಲಿ ಏರ್ ಬ್ಯಾಗ್ ಅಳವಡಿಸಲು ಪ್ರತಿಷ್ಠಿತ ಕಂಪನಿಯೊಂದು ತೀರ್ಮಾನ ಮಾಡಿದ್ದು ಇನ್ನೇನು ಕೆಲವೇ ಸಮಯದಲ್ಲಿ ತಮ್ಮ ವಾಹನಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಹೇಳಬಹುದು. ಹಾಗಾದರೆ ಏರ್ ಬ್ಯಾಗ್ ಹೊಂದಿರುವ ಆ ಸ್ಕೂಟರ್ ಮತ್ತು ಬೈಕ್ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ರೇಸಿಂಗ್ ಕಾರಿನಲ್ಲಿ ಚಾಲಕನ ಹೆಲ್ಮೆಟ್ ಅನ್ನು ನೀವು ನೋಡಿರಬೇಕು, ಆದರೆ ದ್ವಿಚಕ್ರ ವಾಹನಗಳಿಗೂ ಏರ್ ಬ್ಯಾಗ್ ಸೌಲಭ್ಯವಿದ್ದರೆ ಹೇಗಿರುತ್ತದೆ ಎಂದು ಯೋಚಿಸಿದ್ದೀರಾ. ವಾಸ್ತವವಾಗಿ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ ಜನರ ಸುರಕ್ಷತೆಗಾಗಿ ಏರ್ ಬ್ಯಾಗ್ ಪರಿಕಲ್ಪನೆಯನ್ನು ತರಲಾಯಿತು, ಇದು ಕಾರುಗಳ ಮೇಲೆ ಯಶಸ್ವಿ ಪ್ರಯತ್ನವಾಗಿದೆ ಮತ್ತು ಈಗ ಈ ಪ್ರಯೋಗವನ್ನು ದ್ವಿಚಕ್ರ ವಾಹನಗಳಲ್ಲೂ ಬಳಸುವ ಯೋಜನೆ ಇದೆ. ಪಿಯಾಜಿಯೊ ಮತ್ತು ಆಟೋಲಿವ್ ದ್ವಿಚಕ್ರ ವಾಹನಗಳಿಗೆ ಏರ್ ಬ್ಯಾಗ್ ಅಳವಡಿಸಲು ಮುಂದಾಗಿದೆ. ದ್ವಿಚಕ್ರ ವಾಹನಗಳಿಗೆ ಏರ್‌ಬ್ಯಾಗ್‌ಗಳನ್ನು ತಯಾರಿಸಲು ಈಗ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಎರಡೂ ಕಂಪನಿಗಳು ಇತ್ತೀಚೆಗೆ ಘೋಷಿಸಿದ್ದವು.
ಇನ್ನು ವರದಿಯ ಪ್ರಕಾರ, ಎರಡೂ ಕಂಪನಿಗಳು ಈ ತಂತ್ರಜ್ಞಾನದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ಅಪಘಾತದ ಸಂದರ್ಭದಲ್ಲಿ ಈ ಏರ್‌ಬ್ಯಾಗ್ ಸೆಕೆಂಡುಗಳಲ್ಲಿ ತೆರೆಯುತ್ತದೆ ಮತ್ತು ಅದರ ಪ್ರಯಾಣಿಕರು ಇದರಿಂದ ಸಾಕಷ್ಟು ಸುರಕ್ಷತೆಯನ್ನು ಪಡೆಯುತ್ತಾರೆ. ಆಟೋಲಿವ್ ಕಂಪನಿಯು ಹೆಚ್ಚಿನ ಜೀವಗಳನ್ನು ಉಳಿಸಲು ಮತ್ತು ಸಮಾಜಕ್ಕೆ ಜಾಗತಿಕ ಲೇಬಲ್ ಜೀವರಕ್ಷಕ ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆ. ದ್ವಿಚಕ್ರ ವಾಹನಗಳಿಗೆ ಏರ್‌ಬ್ಯಾಗ್‌ಗಳನ್ನು ರಚಿಸುವುದು 2030 ರ ವೇಳೆಗೆ ವರ್ಷಕ್ಕೆ 100,000 ಜೀವಗಳನ್ನು ಉಳಿಸುವ ನಮ್ಮ ಗುರಿಯತ್ತ ಪ್ರಮುಖ ಹೆಜ್ಜೆಯಾಗಿದೆ ಎಂದು ಕಂಪನಿ ತಿಳಿಸಿದೆ. ಆಧುನಿಕ ಸ್ಕೂಟರ್‌ಗಳು ಮತ್ತು ಬೈಕ್‌ಗಳು ಈಗಾಗಲೇ ಎಬಿಎಸ್‌ನಂತಹ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಅದರ ನಂತರ ಏರ್‌ಬ್ಯಾಗ್‌ಗಳನ್ನು ಸೇರಿಸುವುದರಿಂದ ಈಗ ರಸ್ತೆಯಲ್ಲಿ ಸವಾರರ ಸುರಕ್ಷತೆಯನ್ನು ಬಲಪಡಿಸುತ್ತದೆ ಎಂದು ಹೇಳಬಹುದು.