Car Rules: ಹೊಸ ಕಾರ್ ಖರೀದಿ ಮಾಡುವವರಿಗೆ ಹೊಸ ರೂಲ್ಸ್, ಕೇಂದ್ರ ಸರ್ಕಾರದ ಇನ್ನೊಂದು ಘೋಷಣೆ.
ಕಾರುಗಳ ಏರ್ ಬ್ಯಾಗ್ ಕುರಿತಂತೆ ನಿತಿನ್ ಗಡ್ಕರಿ ಹೊಸ ಆದೇಶವನ್ನ ಹೊರಡಿಸಿದ್ದಾರೆ.
6 Air Bag Rules: ಕೇಂದ್ರ ರಸ್ತೆ ಸಾರಿಗೆ ಸಚಿವ Nitin Gadkari ಅವರು ಇತ್ತೀಚಿಗೆ ವಾಹನದ ಮಾಲೀಕರಿಗೆ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದ್ದಾರೆ. ವಾಹನ ಸವಾರರು ಕೇಂದ್ರ ಪ್ರತಿಯೊಂದು ನಿಯಮವನ್ನು ಪಾಲಿಸಬೇಕಿದೆ. ಇನ್ನು ರಸ್ತೆ ಸಂಚಾರಿ ನಿಯಮದ ಯಾವುದೇ ನಿಯಮವನ್ನು ವಾಹನ ಸವಾರರು ನಿರ್ಲಕ್ಷಿಸಿದರೆ ಅಂತವರ ವಿರುದ್ಧ ಕೇಂದ್ರ ಸರ್ಕಾರ (Central Government) ಕ್ರಮ ಕೈಗೊಳ್ಳುತ್ತದೆ.
ಇನ್ನು ದೇಶದಲ್ಲಿ ಹೆಚ್ಚುತ್ತಿರುವ Traffic ಸಮಸ್ಯೆಯ ನಿಯಂತ್ರಣಕ್ಕಾಗಿ ಈಗಾಗಲೇ ಹೊಸ ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. Traffic ನಿಯಂತ್ರಣದ ಜೊತೆಗೆ ವಾಯುಮಾಲಿನ್ಯದ ನಿಯಂತ್ರಣ ಕೂಡ ಕೇಂದ್ರ ಸರ್ಕಾರದ್ದಾಗಿದೆ.
ಈಗಾಗಲೇ ದೇಶದಲ್ಲಿ Ethanal ಚಾಲಿತ ವಾಹನಗಳ ಬಿಡುಗಡೆಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ Ethanal ಚಾಲಿತ ವಾಹನ ರಸ್ತೆಗಿಳಿಯಲಿದೆ. ಇದೀಗ ಕಾರು ಉತ್ಪಾದಕ ಕಂಪನಿಗಳಿಗೆ ನಿತಿನ್ ಗಡ್ಕರಿ ಅವರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.
ಕಾರು ಉತ್ಪಾದಕ ಕಂಪನಿಗಳಿಗೆ ಮಹತ್ವದ ಮಾಹಿತಿ ನೀಡಿದ Nitin Gadkari
ವಾಹನ ಸವಾರರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಈ ಹಿಂದೆ ಕಾರು ಉತ್ಪಾದಕ ಕಂಪನಿಗಳಿಗೆ ವಿವಿಧ ನಿಯಮವನ್ನು ಜಾರಿಗೊಳಿಸಿತ್ತು. ಕಳೆದ ವರ್ಷದಲ್ಲಿ ನಿತಿನ್ ಗಡ್ಕರಿ ಅವರು ಕಾರು ಉತ್ಪಾದಕರಿಗೆ 6 air Bag ಅನ್ನು ಗ್ರಾಹಕರ ಸುರಕ್ಷೆತೆಗಾಗಿ ಅಳವಡಿಸಬೇಕು ಎಂದು ನಿಯಮವನ್ನು ರೂಪಿಸಲಾಗಿತ್ತು. ಇನ್ನು 2023 ರ ಅಕ್ಟೋಬರ್ 1 ರಿಂದ ಕಾರುಗಳಲ್ಲಿ 6 air Bag ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇದೀಗ ಈ ನಿಯಮದಲ್ಲಿ ನಿತಿನ್ ಗಡ್ಕರಿ ಅವರು ಮಹತ್ವದ ಬದಲಾವಣೆಯನ್ನು ತಂದಿದ್ದಾರೆ.
ಇನ್ನುಮುಂದೆ ಕಾರುಗಳಿಗೆ 6 Air Bag ಕಡ್ಡಾಯವಿಲ್ಲ
ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಪ್ಯಾಕ್ಚರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದೊಂದಿಗೆ ಗಡ್ಕರಿ ಅವರು ಮಾತನಾಡಿದ್ದಾರೆ. “ನಾವು BNCAP ವ್ಯವಸ್ಥೆಯನ್ನು ಪರಿಚಯಿಸಲಿದ್ದೇವೆ. ಇದು 5 Star Safety rating ಸಾಧಿಸಲು 6 air Bag ಬಯಸುತ್ತದೆ. ಇದರಿಂದಾಗಿ ಸಹಜವಾಗಿಯೇ ಉತ್ಪಾದಕ ಕಂಪನಿಗಳು 6 Air Bag ಅಳವಡಿಸುವಂತೆ ಒತ್ತಡ ಸೃಷ್ಟಿಸಲಿದೆ” ಎಂದಿದ್ದಾರೆ.
ಇದೀಗ ಜನರು ಎಚ್ಚರಿಕೆಯಿಂದ ಇದ್ದಾರೆ. ಯಾವುದೇ ಮಾದರಿ 6 Air Bag ಹೊಂದಿದ್ದಾರೆ ಅಂತಹ ಕಾರನ್ನು ಖರೀದಿಸಲು ಇಷ್ಟಪಡುತ್ತಾರೆ. ಇದನ್ನು ನಿರ್ಧರಿಸುವುದು ಉತ್ಪಾದಕರು ಮತ್ತು ಜನರಿಗೆ ಬಿಟ್ಟಿದ್ದು. ಕಾರುಗಳಲ್ಲಿ ‘6 Air Bag ಅನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸುವುದಿಲ್ಲ’ ಎಂದು ನಿತಿನ್ ಗಡ್ಕರಿ ಅವರು ಘೋಷಣೆ ಹೊರಡಿಸಿದ್ದಾರೆ.