Airtel Plan: 56 ದಿನ ಉಚಿತ ಡೇಟಾ ಮತ್ತು ಕರೆ, ಗ್ರಾಹಕರಿಗೆ ಹೊಸ ಅಗ್ಗದ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ Airtel.

ಗ್ರಾಹಕರಿಗೆ 56 ದಿನಗಳ ಇನ್ನೊಂದು ರಿಚಾರ್ಜ್ ಘೋಷಣೆ ಮಾಡಿದ Airtel

Airtel 56 Days Recharge Plan: ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ ಏರ್ ಟೆಲ್ (Airtel) ಇದೀಗ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ವಿವಿಧ ರೀತಿಯ ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಓಟಿಟಿ ಸೌಲಭ್ಯದ ಜೊತೆಗೆ ಹೆಚ್ಚಿನ ಡೇಟಾ ಸೌಲಭ್ಯವನ್ನು ನೀಡುತ್ತಿದೆ. ದೇಶದಲ್ಲಿ Airtel ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದರೆ ತಪ್ಪಾಗಲಾರದು.

ಇದೀಗ ಏರ್ ಟೆಲ್ ತನ್ನ ಗ್ರಾಹಕರಿಗೆ ಪ್ರತಿನಿತ್ಯ 3GB ಡೇಟಾ ನೀಡುವ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆಗೊಳಿಸಿದೆ. Airtel ಬಳಕೆದಾರರು ಇದೀಗ ನೂತನ Airtel Black ಯೋಜನೆಯಲ್ಲಿ ಅನಿಯಮಿತ ಕರೆ, 5G ಡೇಟಾ, Wi -Fi , Smart TV , OTT ಸೇರಿದಂತೆ ಇನ್ನಿತರ ಏರ್ಟೆಲ್ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. Airtel ಬಳಕೆದಾರರು ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದು ಯೋಜನೆಯ ಲಾಭ ಪಡೆದುಕೊಳ್ಳಿ.

Airtel Prepaid Recharge Plans
Image Credit: Happycredit

Airtel ಗ್ರಾಹಕರಿಗಾಗಿ 56 ದಿನದ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಘೋಷಣೆ
ಏರ್ ಟೆಲ್ ಗ್ರಾಹಕರಿಗಾಗಿ ಏರ್ ಟೆಲ್ ಇದೀಗ 699 ರಿಚಾರ್ಜ್ ಪ್ಲ್ಯಾನ್ ಅನ್ನು ನೀಡಿದೆ. ಏರ್ ಟೆಲ್ 699 ಯೋಜನೆಯಿಂದಾಗಿ ನೀವು ಅನಿಯಮಿತ ಕರೆಯ ಸೌಲಭ್ಯವನ್ನು ಪಡೆಯಬಹುದು. ಅನಿಯಮಿತ ಕರೆಯ ಜೊತೆಗೆ ಪ್ರತಿನಿತ್ಯ 100 SMS ಕೂಡ ಲಭ್ಯವಿದೆ. ಪ್ರತಿನಿತ್ಯ ನೀವು 3GB ಡೇಟಾವನ್ನು ಪಡೆಯಬಹುದು.

ಹಾಗೆಯೆ ಏರ್ ಟೆಲ್ ನ ಈ 699 ಪ್ಲಾನ್ ನಿಮಗೆ 56 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಮನೆಯ ಸ್ಮಾರ್ಟ್ ಟಿವಿ ಮತ್ತು ಫೈಬರ್ ಬ್ರಾಡ್ಬ್ಯಾಂಡ್ ಸೇವೆಗಳನ್ನು ಬಯಸುವ ಗ್ರಾಹಕರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ. ಇನ್ನು ಇದ್ರ ಜೊತೆಗೆ ರೂ. 300 ಮೌಲ್ಯದ TV ಚಾನೆಲ್ ಗಳೊಂದಿಗೆ DTH ಸಂಪರ್ಕವನ್ನು ಪಡೆಯಬಹುದು. ಇನ್ನು Disney Hotstar, Airtel Xtreme Premium ಸೇರಿದಂತೆ ಇನ್ನಿತರ OTT ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು.

Airtel 56 Days Recharge Plan
Image Credit: Haribhoomi

ಏರ್ ಟೆಲ್ 799 ರೂ. ಯೋಜನೆ
ಏರ್ ಟೆಲ್ ತನ್ನ ಗ್ರಾಹಕರಿಗಾಗಿ 90 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ರೂ. 799 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನಿಮಗೆ ಪ್ರತಿನಿತ್ಯ 1.5GB ಡೇಟಾ ಲಭ್ಯವಿದೆ. Disney Plus Hotstar , X Stream Mobile Pack and Wink Music Premium, Free Apollo 24/7 Circle, Hello Tunes ಈ ಯೋಜನೆಯಲ್ಲಿ ಲಭ್ಯವಿದೆ.

Join Nadunudi News WhatsApp Group

Join Nadunudi News WhatsApp Group