Airtel: ದೇಶಾದ್ಯಂತ ಏರ್ಟೆಲ್ ಸಿಮ್ ಇದ್ದವರು ಬಹುದೊಡ್ಡ ಸಿಹಿಸುದ್ದಿ, ಕಂಪನಿಯ ಹೊಸ ನಿರ್ಧಾರ.

ಏರ್ಟೆಲ್ ಗ್ರಾಹಕರು 239 ರೂಪಾಯಿಗಳ ಮೇಲಿನ ರಿಚಾರ್ಜ್ ಮೇಲೆ ಉಚಿತವಾಗಿ 5G ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

Airtel 5G Service On 239 Recharge plan: ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ನಿಯಮಿತವಾಗಿ ಹಾಗೂ ನಿರಂತರವಾಗಿ ಯಶಸ್ಸಿನ ಮೆಟ್ಟಿಲನ್ನು ಏರಿಕೊಂಡು ಬರುತ್ತಿರುವಂತಹ ಕಂಪನಿಗಳಲ್ಲಿ ಏರ್ಟೆಲ್(Airtel) ಸಂಸ್ಥೆ ಮೊದಲನೆಯ ಶ್ರೇಣಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ವಿಶೇಷವಾಗಿ ಸದ್ಯದ ಮಟ್ಟಿಗೆ ಭಾರತದಲ್ಲಿ ಅತ್ಯಂತ ವೇಗದ 5ಜಿ ನೆಟ್ವರ್ಕ್ ಅನ್ನು ಹೊಂದಿರುವಂತಹ ಕಂಪನಿಗಳಲ್ಲಿ ಏರ್ಟೆಲ್ ಸಂಸ್ಥೆ ಮೊದಲನೆಯದಾಗಿ ಕಾಣಿಸಿಕೊಳ್ಳುತ್ತದೆ.

Airtel 5G recharge plan
Image Credit: Mysmartprice

ಇನ್ನು ವೇಗವಾದ ಇಂಟರ್ನೆಟ್ ಕನೆಕ್ಟಿವಿಟಿಯನ್ನು ಏರ್ಟೆಲ್ ನೀಡುತ್ತದೆ ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಬಹುಷ್ಯ ಏರ್ಟೆಲ್ ಸಂಸ್ಥೆ 5g ನೆಟ್ವರ್ಕ್ ಗಳಿಗಾಗಿ ಹೆಚ್ಚಿನ ಹಣವನ್ನು ಚಾರ್ಜ್ ಮಾಡಬಹುದು ಎಂಬುದಾಗಿ ಭಾವಿಸಿದ್ದರು ಇದನ್ನು ತಿಳಿ ಪಡಿಸಿದ್ದು ಯಾವುದೇ ಕಾರಣಕ್ಕೂ ವೇಗದ ಇಂಟರ್ನೆಟ್ ಕನೆಕ್ಟಿವಿಟಿ ಗಾಗಿ ಹೆಚ್ಚಿನ ಚಾರ್ಜ್ ಏರ್ಟೆಲ್(Airtel 5G) ಪಡೆದುಕೊಳ್ಳುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.

ಇನ್ನು ನಮ್ಮ ಸಂಸ್ಥೆ ಉಚಿತವಾಗಿ ನೀಡುವುದಕ್ಕಿಂತ ಹೆಚ್ಚಾಗಿ ನ್ಯಾಯಯುತ ಬೆಲೆಯಲ್ಲಿ ನೀಡುವುದನ್ನು ನಂಬುತ್ತದೆ ಎಂಬುದನ್ನು ಕೂಡ ಏರ್ಟೆಲ್ ಸಂಸ್ಥೆಯ ಮುಖ್ಯಸ್ಥರು ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕಂಪನಿ, ಪ್ರತಿ ತಿಂಗಳು ಒಬ್ಬ ಗ್ರಾಹಕರಿಂದ 203 ರೂ ಗಳ ಸರಾಸರಿಯನ್ನು ಕಮಾಯಿ ಮಾಡುತ್ತದೆ ಎನ್ನುವಂತಹ ಮಾಹಿತಿಯನ್ನು ಕೂಡ ಈ ಸಂದರ್ಭದಲ್ಲಿ ತಿಳಿಯಲಾಗಿದೆ.

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಇದು ಪ್ರತಿ ತಿಂಗಳು ಒಬ್ಬರ ಮೂಲಕ ಸರಾಸರಿ 300 ರೂಪಾಯಿಗಳ ಆದಾಯ ಹರಿದು ಬರುವಂತೆ ಮಾಡಬೇಕು ಇದರಿಂದಾಗಿ ಟೆಲಿಕಾಂ ಇಂಡಸ್ಟ್ರಿ ಬೆಳೆಯಬಹುದು ಎನ್ನುವಂತಹ ಮಾತುಗಳನ್ನು ಕೂಡ ಅವರು ಆಡಿದ್ದಾರೆ.

ನಾವು ನಮ್ಮ ಸೇವೆಗಳನ್ನು ಅತ್ಯಂತ ಕೈಗೆಟಕುವ ಬೆಲೆಯಲ್ಲಿ ಹಾಗೂ ಉತ್ತಮ ಗುಣಮಟ್ಟದ ಕ್ವಾಲಿಟಿಯನ್ನು ನೀಡುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಅವರು ಏರ್ಟೆಲ್ ಗ್ರಾಹಕರಿಗೆ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

Airtel 5G Service On 239 Recharge plan
Image Credit: Timesnownews

ಸದ್ಯದ ಮಟ್ಟಿಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಏರ್ಟೆಲ್ ಗ್ರಾಹಕರು(Airtel customers) 239 ರೂಪಾಯಿಗಳ ಮೇಲಿನ ರಿಚಾರ್ಜ್ ಮೇಲೆ ಉಚಿತವಾಗಿ 5G ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ ಎನ್ನುವುದಾಗಿ ತಿಳಿದುಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಜಿಯೋ ಸಂಸ್ಥೆಯ ಪೈಪೋಟಿ ಇದ್ರು ಕೂಡ ಆದಾಯ ಗಳಿಕೆ ವಿಚಾರದಲ್ಲಿ ಏರ್ಟೆಲ್ ಸಂಸ್ಥೆ ಗಣನೀಯವಾಗಿ ಏರಿಕೆಯನ್ನು ಕಾಣುತ್ತಿರುವುದನ್ನು ಕೂಡ ನಾವು ಇಲ್ಲಿ ಪ್ರಮುಖವಾಗಿ ಗಮನ ಹರಿಸಬಹುದಾಗಿದೆ.

Join Nadunudi News WhatsApp Group