Jio v/s Airtel: ಮೊಬೈಲ್ ರಿಚಾರ್ಜ್ ಮಾಡುವವರಿಗೆ ಇಂದು ಕೊನೆಯ ದಿನಾಂಕ, 3 ರಿಂದ ಹೊಸ ರೂಲ್ಸ್

ಏರ್ಟೆಲ್ ಮತ್ತು Jio ರಿಚಾರ್ಜ್ ಮಾಡುವವರಿಗೆ ನಾಳೆಯಿಂದ ಹೊಸ ರೂಲ್ಸ್

Jio And  Airtel Recharge Price Hike: ಪ್ರಸ್ತುತ ದೇಶದಲ್ಲಿ ಜನಪ್ರಿಯ ಟೆಲಿಕಾಂ ಕಂಪನಿಯಾದ Jio ಮತ್ತು Airtel ತನ್ನ ರಿಚಾರ್ಜ್ ದರವನ್ನು ಹೆಚ್ಚಿಸುವ ಮೂಲಕ ತನ್ನ ಬಳಕೆದಾರರಿಗೆ ಶಾಕ್ ನೀಡಿದೆ. ಜಿಯೋ ಮತ್ತು ಏರ್ಟೆಲ್ ಬಳಕೆದಾರರು ಇನ್ನುಮುಂದೆ ಹೆಚ್ಚಿನ ಹಣ ನೀಡಿ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ.

ಅದಾಗ್ಯೂ, ಜಿಯೋ ಮತ್ತು ಏರ್ಟೆಲ್ ಬಳಕೆದಾರರು ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಲು ಕೊನೆಯ ಅವಕಾಶ ಕೂಡ ಇದೆ. ಟೆಲಿಕಾಂ ಕಂಪನಿಗಳ ರಿಚಾರ್ಜ್ ದರ ಈ ದಿನದಿಂದ ದುಬಾರಿಯಾಗಲಿದ್ದು, ಬಳಕೆದಾರರು ಈ ದಿನದೊಳಗೆ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಬಹುದು.

airtel and jio recharge price
Image Credit: Original Source

ಮೊಬೈಲ್ ರಿಚಾರ್ಜ್ ಮಾಡುವವರಿಗೆ ಇಂದು ಕೊನೆಯ ದಿನಾಂಕ
ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಸಂತೋಷಪಡಿಸಲು ದೀರ್ಘಾವಧಿಯ ಮಾನ್ಯತೆಯೊಂದಿಗೆ ರೀಚಾರ್ಜ್ ಯೋಜನೆಗಳನ್ನು ನೀಡಿವೆ. ಈ ಯೋಜನೆಗಳ ಜೊತೆಗೆ ಅನೇಕ ಕಂಪನಿಗಳು ಅನೇಕ OTT ಗಳನ್ನು ಉಚಿತವಾಗಿ ನೀಡಿವೆ. ಈ ಕೊಡುಗೆಗಳು ಈಗಲೂ ಹಾಗೆಯೇ ಇರುತ್ತವೆ. ಆದರೆ ರೀಚಾರ್ಜ್ ಮೊತ್ತ ಹೆಚ್ಚಾಗುತ್ತದೆ. Jio, Airtel ಮತ್ತು Vi ಇತ್ತೀಚೆಗೆ 84 ದಿನಗಳ ಮಾನ್ಯತೆಯೊಂದಿಗೆ 719 ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿವೆ. ಈ ರೀಚಾರ್ಜ್ ಅನೇಕ ಉಪಯೋಗಗಳನ್ನು ಹೊಂದಿದೆ. ಈಗ ಈ ರೀಚಾರ್ಜ್ ಯೋಜನೆಗಳ ಬೆಲೆಯೂ ಹೆಚ್ಚಾಗಲಿದೆ. ನಾವೀಗ ಈ ಲೇಖನದಲ್ಲಿ ಹೆಚ್ಚಾಗಿರುವ 719 ರೀಚಾರ್ಜ್ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ.

ಜುಲೈ 3 ರಿಂದ ಹೊಸ ರೂಲ್ಸ್
•Jio ಮತ್ತು Airtel ನ ರೀಚಾರ್ಜ್ ಯೋಜನೆಗಳು ಜುಲೈ 3, 2024 ರಿಂದ ದುಬಾರಿಯಾಗಲಿವೆ. ನೀವು ಜಿಯೋ 719 ರಿಚಾರ್ಜ್ ಮಾಡಿಸಿಕೊಂಡರೆ, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ ಒಟ್ಟು 2GB , 5G ವೇಗದ ಡೇಟಾ, 100 SMS ಸೌಲಭ್ಯವನ್ನು 84 ದಿನಗಳ ಅವಧಿಗೆ ಆನಂದಿಸಬಹುದಿತ್ತು. ಆದರೆ ಜುಲೈ 3 ರಿಂದ ಈ ಯೋಜನೆಯಲ್ಲಿ 140 ರೂ. ಹೆಚ್ಚಾಗಲಿದೆ. ಅಂದರೆ ಜುಲೈ 3 ರಿಂದ ಈ ಯೋಜನೆಯ ಬೆಲೆ ರೂ. 859 ರೂ. ಆಗಲಿದೆ.

airtel and jio recharge plans
Image Credit: Original Source

•ಇನ್ನು ರೂ. 719 ಏರ್‌ಟೆಲ್ ರೀಚಾರ್ಜ್ ಯೋಜನೆಯು 84 ದಿನಗಳವರೆಗೆ 1.5GB ದೈನಂದಿನ ಡೇಟಾವನ್ನು ನೀಡುತ್ತದೆ. ಇದು ಅನಿಯಮಿತ ಧ್ವನಿ ಕರೆಗಳನ್ನು ಮತ್ತು 100 ದೈನಂದಿನ SMS ಅನ್ನು ಸಹ ನೀಡುತ್ತದೆ. ಇತರ ಪ್ರಯೋಜನಗಳು ರಿವಾರ್ಡ್ಸ್ ಮಿನಿ ಚಂದಾದಾರಿಕೆ, ವೈಂಕ್ ಸಂಗೀತ, ಅನಿಯಮಿತ 5G ಡೇಟಾ ಮತ್ತು ಉಚಿತ ಹಲೋ ಟ್ಯೂನ್‌ಗಳನ್ನು ಒಳಗೊಂಡಿವೆ. ಆದರೆ ಜುಲೈ 3 ರಿಂದ ಈ ಯೋಜನೆಯಲ್ಲಿ ಈ ಎಲ್ಲ ಸೌಲಭ್ಯಗಳು ಲಭ್ಯವಿದ್ದು, ಯೋಜನೆಯ ದರ ಹೆಚ್ಚಾಗಲಿದೆ. ಜುಲೈ 3 ರಿಂದ ಈ ಯೋಜನೆಯಲ್ಲಿ 140 ರೂ. ಹೆಚ್ಚಾಗಲಿದ್ದು, ಈ ಯೋಜನೆಯ ಬೆಲೆ ರೂ. 859 ಆಗಲಿದೆ.

Join Nadunudi News WhatsApp Group

 

Join Nadunudi News WhatsApp Group