5G Close: ಏರ್ಟೆಲ್ ಮತ್ತು ಜಿಯೋ ಸಿಮ್ ಬಳಸುವವರಿಗೆ ಬೇಸರದ ಸುದ್ದಿ, ಇನ್ಮುಂದೆ ಸಿಗಲ್ಲ ಅನಿಯಮಿತ 5G

Jio ಮತ್ತು Airtel ಬಳಕೆದಾರರು ಇನ್ನುಮುಂದೆ ಈ ಯೋಜನೆಗಳಲ್ಲಿ 5G ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ

Airtel And Jio Unlimited 5G Recharge Plan Cancel: ದೇಶದಲ್ಲಿ Airtel ಮತ್ತು Jio ಟೆಲಿಕಾಂ ನೆಟ್ವರ್ಕ್ ಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ಈ ಎರಡು ಟೆಲಿಕಾಂ ಕಂಪನಿಗಳು ಬಳಕೆದಾರರಿಗೆ 5G ನೆಟ್ವರ್ಕ್ ಅನ್ನು ನೀಡುತ್ತಿದೆ.

5G ನೆಟ್ವರ್ಕ್ ನ ಮೂಲಕ ಬಳಕೆದಾರರು ಈವರೆಗೆ ಅನಿಯಮಿತ ಡೇಟಾ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸದ್ಯ Jio ಮತ್ತು Airtel ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. Jio ಮತ್ತು Airtel ಬಳಕೆದಾರರು ಇನ್ನುಮುಂದೆ ಈ ಯೋಜನೆಗಳಲ್ಲಿ 5G ಸೇವೆಯನ್ನು ಪಡೆಯಲು ಸಾದ್ಯವಾಗುದಿಲ್ಲ.

Airtel And Jio Unlimited 5G Recharge
Image Credit: Informalnewz

ಶೀಘ್ರದಲ್ಲೇ ದುಬಾರಿಯಾಗಲಿವೆ 5G ಯೋಜನೆಗಳು
Jio ಮತ್ತು Airtel ಕಂಪನಿಗಳು ತನ್ನ 5G ಅನಿಯಮಿತ ಯೋಜನೆಗಳನ್ನು 2024 ಜನವರಿ ಎರಡನೇ ವಾರದಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಈ 5G ರೀಚಾರ್ಜ್ ಯೋಜನೆಗಳನ್ನು 5% ರಿಂದ 10% ರಷ್ಟು ಹೆಚ್ಚಿಸಬಹುದು. ಇದರಿಂದಾಗಿ ಸುಂಕದ ಯೋಜನೆಯ ಆದಾಯವು ಹೆಚ್ಚಾಗಬಹುದು. 5G ಸುಂಕ ಯೋಜನೆಯು 20% ರಷ್ಟು ಹೆಚ್ಚಾಗಬಹುದು. ವರದಿಯ ಪ್ರಕಾರ 5G ಯೋಜನೆಗಳು ಶೀಘ್ರದಲ್ಲೇ ದುಬಾರಿಯಾಗಬಹುದು. ಈ ಯೋಜನೆಗಳು 30% ರಿಂದ 40% ಹೆಚ್ಚಿನ ಡೇಟಾವನ್ನು ನೀಡುವ ನಿರೀಕ್ಷೆಯಿದೆ.

ಇನ್ನುಮುಂದೆ Unlimited 5G ಪ್ಲಾನ್ ಗಳು ಲಭ್ಯವಿರಲ್ಲ
ಕಳೆದ ವರ್ಷದಲ್ಲಿ Jio ಮತ್ತು Airtel ತನ್ನ ಬಳಕೆದಾರರಿಗೆ Unlimited 5G ಪ್ಲಾನ್ ಗಳನ್ನೂ ಉಚಿತವಾಗಿ ನೀಡಿತ್ತು. 5G ಹ್ಯಾಂಡ್ ಸೆಟ್ ಮತ್ತು 5G ಸಿಮ್ ಕಾರ್ಡ್ ಹೊಂದಿರುವವರು ಅನಿಯಮಿತವಾಗಿ 5G ಸೇವೆಯನ್ನು ಆನಂದಿಸುತ್ತಿದ್ದಾರೆ. ಈ ಎರಡು ಟೆಲಿಕಾಂ ಕಂಪನಿಗಳು 5G ಸೇವೆಯನ್ನು ಆರಂಭಿಸಿದ್ದರಿಂದ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗಿ ಮಾರುಕಟ್ಟೆಯಲ್ಲಿ ವಿವಿಧ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ನೂತನ ಮಾದರಿಯ 5G ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಲು ಆರಂಭಿಸಿದ್ದವು.

Airtel And Jio Unlimited 5G Recharge Plan Cancel
Image Credit: Smartprix

5G ನೆಟ್ವರ್ಕ್ ದೇಶದಲ್ಲಿ ಲಭ್ಯವಾದಾಗಿಂದ ಮಾರುಕಟ್ಟೆಯಲ್ಲಿ 5G ಸ್ಮಾರ್ಟ್ ಫೋನ್ ಬೇಡಿಕೆ ಹೆಚ್ಚಾಗುತ್ತಿತ್ತು. ಸದ್ಯ Airtel ಮತ್ತು Jio 5G ಸೇವೆಯನ್ನು ಸ್ಥಗಿತಗೊಳಿಸಲು ಯೋಜನೆ ಹೂಡಿದು ಬಳಕೆದಾರರಿಗೆ ಬೇಸರದ ಸುದ್ದಿ ನೀಡಿದೆ. ಇನ್ನುಮುಂದೆ Airtel ಮತ್ತು Jio ಬಳಕೆದಾರರು ಅನಿಯಮಿತ 5G ಸೇವೆಗಳನ್ನು ಬಳಸಲು ಸಾಧ್ಯವಾಗದೆ ಇರಬಹುದು. ದೇಶದಲ್ಲಿ ಉಚಿತ 5G ಸೇವೆಗಳು ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ.

Join Nadunudi News WhatsApp Group

Join Nadunudi News WhatsApp Group