Airtel: ಏರ್ಟೆಲ್ ಸಿಮ್ ಬಳಸುವವರಿಗೆ ಬೇಸರದ ಸುದ್ದಿ, ಸಡನ್ ಈ ಸೇವೆ ನಿಲ್ಲಿಸಿದ ಏರ್ಟೆಲ್.
ಏರ್ ಟೆಲ್ ಗ್ರಾಹಕರಿಗೆ ಬೇಸರದ ಸುದ್ದಿ, ಈ ಪ್ಲ್ಯಾನ್ ನಲ್ಲಿ ಇನ್ನುಮುಂದೆ ಈ ಸೇವೆ ಇಲ್ಲ.
Airtel Recharge Plan: ಜನಪ್ರಿಯ ಟೆಲಿಕಾಂ ಕಂಪನಿಯಾದ ಏರ್ ಟೆಲ್ (Airtel) ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಏರ್ ಟೆಲ್ ಹೊಸ ಹೊಸ ಯೋಜನೆಗಳನ್ನು ಬಿಡುಗಡೆಗೊಳಿಸುವುದರ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಹೇಳಬಹುದು.
ನಂಬರ್ ಒನ್ ಟೆಲಿಕಾಂ ಕಂಪನಿಯಾದ ಜಿಯೋಗೆ ಏರ್ ಟೆಲ್ ಪೈಪೋಟಿ ನೀಡುತ್ತಲೇ ಬರುತ್ತಿದೆ. ಇದೀಗ ಏರ್ ಟೆಲ್ ಕಂಪನಿ ತನ್ನ ಗ್ರಾಹಕರಿಗೆ ಬೇಸರದ ಉದ್ದಿ ಒಂದು ಹೊರ ಹಾಕಿದೆ. ಇದೀಗ ಏರ್ ಟೆಲ್ ತನ್ನ ಪ್ರಮುಖ ರಿಚಾರ್ಜ್ ಪ್ಲ್ಯಾನ್ ಅನ್ನು ತೆಗೆದು ಹಾಕಿದೆ. ಈ ಯೋಜನೆಯನ್ನು ತೆಗೆದುಹಾಕಿದ್ದು ಇನ್ನು ಮುಂದಿನ ದಿನದಲ್ಲಿ ಏರ್ ಟೆಲ್ ಹೊಸ ಯೋಜನೆಯನ್ನು ಜಾರಿಗೆ ತರುವ ಸಾಧ್ಯವಿದೆ ಎನ್ನಲಾಗುತ್ತಿದೆ.
ತನ್ನ ರಿಚಾರ್ಜ್ ಪ್ಯಾನ್ ನಲ್ಲಿ ಡಿಸ್ನಿ + ಹಾಟ್ ಸ್ಟಾರ್ ಅನ್ನು ತೆಗೆದುಹಾಕಿದ ಏರ್ ಟೆಲ್
ಏರ್ ಟೆಲ್ ತನ್ನ ಜನರಿಪ್ರಿಯಾ ಪ್ಲ್ಯಾನ್ ಗಳಲ್ಲಿ ಒಂದಾದ 399 ರೂಪಾಯಿ ರಿಚಾರ್ಜ್ ಪ್ಲ್ಯಾನ್ ನಲ್ಲಿ ಡಿಸ್ನಿ + ಹಾಟ್ ಸ್ಟಾರ್ ನ ಮೊಬೈಲ್ ನ ಪ್ರಯೋಜನವನ್ನು ತೆಗೆದುಹಾಕಿದೆ. ಈ ಸೌಲಭ್ಯ ಈವರೆಗೂ ಲಭ್ಯ ಇತ್ತು. ಅದರಲ್ಲೂ ಈ ಪ್ರೀಪೈಡ್ ಯೋಜನೆಯೊಂದಿಗೆ ರಿಚಾರ್ಜ್ ಮಾಡುವ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಡಿಸ್ನಿ + ಹಾಟ್ ಸ್ಟಾರ್ ಸೇವೆ ಪಡೆಯಲು ಅರ್ಹರಾಗಿದ್ದರು. ಆದರೆ ಈಗ ಏರ್ ಟೆಲ್ ನ ಈ ಯೋಜನೆಯಿಂದ ಪ್ರಯೋಜನವನ್ನು ತೆಗೆದುಹಾಕಿದೆ.
ಇನ್ನು ಏರ್ ಟೆಲ್ 3 ಪ್ಲ್ಯಾನ್ ಗಳ ಪ್ರಯೋಜನವನ್ನು ನೀಡಿದೆ. 3359 ರೂಪಾಯಿಗಳು. 839 ರೂಪಾಯಿಗಳು ಮತ್ತು 499 ರೂಪಾಯಿಗಳು. ಈ ಪ್ಯಾನ್ ಗಳು ಬಳಕೆದಾರರಿಗೆ ಅತ್ತ್ಯುತ್ತಮ ಸೇವೆಗಳನ್ನು ನೀಡಲಿದೆ. ಅನಿಯಮಿತ ಕರೆ ಸೌಲಭ್ಯ, 5 G ಡೇಟಾ ಸೌಲಭ್ಯ ಸೇರಿವೆ.
ಏರ್ ಟೆಲ್ ನ 399 ರೂಪಾಯಿ ಪ್ಲ್ಯಾನ್ ನಲ್ಲಿ ಡಿಸ್ನಿ + ಹಾಟ್ ಸ್ಟಾರ್ ಅನ್ನು ನೀಡುವುದಿಲ್ಲ. ಆದರೆ 3 GB ದೈನಂದಿನ ಡೇಟಾ ಅನಿಯಮಿತ ವಾಯ್ಸ್ ಕಾಲ್ ಪ್ರತಿದಿನ 100 SMS ನೊಂದಿಗೆ 5 G ಡೇಟಾ ಕೊಡುಗೆಯನ್ನು ಇದರಲ್ಲಿ ನೀಡಲಾಗುತ್ತದೆ. ಇನ್ನು ಈ ರಿಚಾರ್ಜ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ.
ಏರ್ ಟೆಲ್ ನ 499 ರೂಪಾಯಿ ಪ್ಲ್ಯಾನ್
ಏರ್ ಟೆಲ್ ನ 499 ರೂಪಾಯಿ ಪ್ಲ್ಯಾನ್ ನಲ್ಲಿ ಡಿಸ್ನಿ + ಹಾಟ್ ಸ್ಟಾರ್ 3 ತಿಂಗಳವರೆಗೆ ಲಭ್ಯವಿದೆ. ಆದರೆ 3 GB ದೈನಂದಿನ ಡೇಟಾ ಅನಿಯಮಿತ ವಾಯ್ಸ್ ಕಾಲ್ ಪ್ರತಿದಿನ 100 SMS ನೊಂದಿಗೆ 5 G ಡೇಟಾ ಕೊಡುಗೆಯನ್ನು ಇದರಲ್ಲಿ ನೀಡಲಾಗುತ್ತದೆ. ಇನ್ನು ಈ ರಿಚಾರ್ಜ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ.
ಏರ್ ಟೆಲ್ ನ 839 ರೂಪಾಯಿ ಪ್ಲ್ಯಾನ್
ಏರ್ ಟೆಲ್ 839 ರೂಪಾಯಿ ಗಳ ಪ್ಯಾನ್ ನಲ್ಲಿ ಬಳಕೆದಾರರು 2 GB ದೈನಂದಿನ ಡೇಟಾವನ್ನು ಪಡೆಯಬಹುದು. ಈ ಯೋಜನೆ ಪ್ರತಿದಿನ 100 SMS ಸೌಲಭ್ಯ ಹೊಂದಿದೆ. ಬಳಕೆದಾರರಿಗೆ ರಿವಾರ್ಡ್ಸ್‌ಮಿನಿ ಚಂದಾದಾರಿಕೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 3 ತಿಂಗಳವರೆಗೆ ಪ್ರವೇಶ ಲಭ್ಯವಾಗಲಿದ್ದು, ಅಪೊಲೊ 24|7 ಸರ್ಕಲ್, ಉಚಿತ ಹೆಲೊಟ್ಯೂನ್ಸ್ ಮತ್ತು ವಿಂಕ್ ಸಂಗೀತಕ್ಕೆ ಚಂದಾದಾರಿಕೆ ಸಹ ಇದೆ. ಈ ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಏರ್ ಟೆಲ್ ನ 3359 ರೂಪಾಯಿ ಪ್ಲ್ಯಾನ್
ಏರ್ ಟೆಲ್ 3359 ರೂಪಾಯಿ ಪ್ಲ್ಯಾನ್ ಪ್ರತಿದಿನ 2 .5 GB ಡೇಟಾವನ್ನು ನೀಡುತ್ತದೆ. ಇದರಲ್ಲಿ 100 SMS ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಸಹ ಲಭ್ಯ ಇದೆ. ಈ ಯೋಜನೆ 365 ದಿನ ವ್ಯಾಲಿಡಿಟಿಯೊಂದಿಗೆ ಬರುತ್ತದೆ.