Airtel Plan: ಏರ್ಟೆಲ್ ಗ್ರಾಹಕರಿಗೆ ಇನ್ನೊಂದು ಹೊಸ ರಿಚಾರ್ಜ್, 25GB ಡೇಟಾ ಜೊತೆಗೆ ಉಚಿತ ಕರೆ ಮತ್ತು SMS
30 ದಿನದ ಮಾನ್ಯತೆಯ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದ Airtel.
Airtel Monthly Plan: ದೇಶದೆಲ್ಲೆಡೆ ಇದೀಗ ವಿವಿಧ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳು ವಿವಿಧ ರೀತಿಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಬಳಕೆದಾರರ ಅನುಕೂಲಕ್ಕಾಗಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಟೆಲಿಕಾಂ ಕಂಪನಿಗಳು ಪರಿಚಯಿಸುತ್ತಿದೆ. ದೇಶದಲ್ಲಿ Airtel ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದರೆ ತಪ್ಪಾಗಲಾರದು.
ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ Airtel ಇದೀಗ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ವಿವಿಧ ರೀತಿಯ ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಓಟಿಟಿ ಸೌಲಭ್ಯದ ಜೊತೆಗೆ ಹೆಚ್ಚಿನ ಡೇಟಾ ಸೌಲಭ್ಯವನ್ನು ನೀಡುತ್ತಿದೆ. ಗ್ರಾಹಕರಿಗೆ ಅನುಕೂಲವಾಗಲು Airtel ಇದೀಗ 30 ದಿನದ ಮಾನ್ಯತೆಯ ಹೊಸ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ.
30 ದಿನಗಳ ಮಾನ್ಯತೆಯ ಹೊಸ ರಿಚಾರ್ಜ್ ಪ್ಲ್ಯಾನ್
Airtel ತನ್ನ ಗ್ರಾಹಕರಿಗಾಗಿ 30 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ರೂ. 296 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಹೆಚ್ಚಿನ ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನಿಮಗೆ 25GB ಡೇಟಾ ಲಭ್ಯವಿದೆ. ದಿನನಿತ್ಯ ಬಳಕೆಗೆ ಡೇಟಾ ಮಿತಿ ಇರುವುದಿಲ್ಲ.
ಇನ್ನು 25GB ಡೇಟಾವನ್ನು ಸಂಪೂರ್ಣವಾಗಿ ಒಂದೇ ದಿನದಲ್ಲಿ ಬೇಕಾದರೂ ಬಳಸಿಕೊಳ್ಳುವ ಅವಕಾಶವಿದೆ. ಇನ್ನು ಕಡಿಮೆ ಡೇಟಾ ಬಳಕೆದಾರರಿಗೆ ಈ ಯೋಜನೆ ಉತ್ತಮ ಎನ್ನಬಹುದು. ಇನ್ನು Airtel ಸಿಮ್ ಅನ್ನು ಸಕ್ರಿಯವಾಗಿರಿಸಿಕೊಳ್ಳಲು ಕೂಡ ಈ ಪ್ಲ್ಯಾನ್ ಬೆಸ್ಟ್ ಆಗಿದೆ.
ಸದ್ಯ ಕೆಲವು ಕೆಡೆ Airtel 5G ಸೇವೆಯನ್ನು ನೀಡುತ್ತಿದೆ. ನೀವು 296 ರಿಚಾರ್ಜ್ ಮೂಲಕ 5G ಸೇವೆಯನ್ನು ಆನಂದಿಸಬಹುದು.ಇನ್ನು 25GB ಡೇಟಾ ಬಳಕೆಯ ನಂತರ 64kbps ವೇಗದಲ್ಲಿ ಇಂಟರ್ನೆಟ್ ಬಳಸಬಹುದು. ಇದರ ಜೊತೆಗೆ ವಿಂಕ್ ಮ್ಯೂಸಿಕ್ ಉಚಿತ ಪ್ರವೇಶ ಮತ್ತು ಉಚಿತ ಹಲೋ ಟ್ಯೂನ್ ಹಾಗೆಯೆ 3 ತಿಂಗಳ ಪೂರಕ ಅಪೊಲೊ 24|7 ಸರ್ಕಲ್ ಸದಸ್ಯತ್ವವನ್ನು ಪಡೆಯಬಹುದು.
Airtel 319 ರೂ. ಯೋಜನೆ
ಏರ್ ಟೆಲ್ ತನ್ನ ಗ್ರಾಹಕರಿಗಾಗಿ 30 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ರೂ. 319 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಏರ್ ಟೆಲ್ ನ ಈ 319 ಪ್ಲ್ಯಾನ್ ಬಳಕೆದಾರರಿಗೆ ಪ್ರತಿ ನಿತ್ಯ 2GB ಡೇಟಾವನ್ನು ನೀಡುತ್ತದೆ.