Airtel Plan: 21 ದಿನದ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್, ಅನಿಯಮಿತ ಕರೆ ಮತ್ತು 5G ಡೇಟಾ.
ಅತಿ ಕಡಿಮೆ ಬೆಲೆಗೆ ಮೂರೂ ಮಾಸಿಕ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ ಏರ್ಟೆಲ್.
Airtel Monthly Recharge Plan: ಇತ್ತೀಚಿನ ದಿನಗಳಲ್ಲಿ ವಿವಿಧ ಟೆಲಿಕಾಂ ಕಂಪನಿಗಳು ಹಲವು ರೀತಿಯ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಯಾವುದೇ ಟೆಲಿಕಾಂ ಕಂಪನಿಯು ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದರೆ ಅದಕ್ಕಿಂತಲೂ ಸ್ವಲ್ಪ ಕಡಿಮೆ ಬೆಲೆಯಲ್ಲಿ ಇನ್ನೊಂದು ಟೆಲಿಕಾಂ ಕಂಪನಿ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡುತ್ತದೆ.
ಇನ್ನು ದೇಶದಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಭಾರತಿ ಏರ್ ಟೆಲ್ (Airtel) ದಿನನಿತ್ಯ ಬಳಕೆದಾರರಿಗೆ ವಿವಿಧ ಯೋಜನೆಯನ್ನು ಪರಿಚಯಿಸುತ್ತದೆ. ಸಾಮಾನ್ಯವಾಗಿ ಗ್ರಾಹಕರು ಒಂದು ತಿಂಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ. ತಿಂಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಬೆಲೆ ಕಡಿಮೆ ಇರುತ್ತದೆ. ಇದೀಗ ಏರ್ ಟೆಲ್ ತನ್ನ ಗ್ರಾಹಕರಿಗೆ ಮಾಸಿಕ ರಿಚಾರ್ಜ್ ಪ್ಲಾನ್ ಗಳನ್ನೂ ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ.
ಏರ್ ಟೆಲ್ ಗ್ರಾಹಕರಿಗೆ 21 ದಿನದ ಮಾನ್ಯತೆಯ ರಿಚಾರ್ಜ್ ಪ್ಲಾನ್ ಲಭ್ಯ
ಇದೀಗ ಏರ್ ಟೆಲ್ ತನ್ನ ಬಳಕೆದಾರರಿಗಾಗಿ 21 ದಿನದ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದರೆ. ಏರ್ ಟೆಲ್ ಗ್ರಾಹಕರು 209 ರೂ. ಪ್ರಿ ಪೈಡ್ ರಿಚಾರ್ಜ್ ಮಾಡಿಸಿಕೊಳ್ಳುವ ಮೂಲಕ ದಿನನಿತ್ಯ ಉಚಿತ ಕರೆಯ ಜೊತೆ ಡೇಟಾವನ್ನು ಕೂಡ ಪಡೆಯಬಹುದು.
ಈ 209 ಪ್ರಿಪೈಡ್ ಪ್ಲಾನ್ ಬಳಕೆದಾರರಿಗೆ ಪ್ರತಿನಿತ್ಯ 1GB ಡೇಟಾ ಹಾಗೂ ನಿತ್ಯದ ಬಳಕೆಗೆ 100 ಎಸ್ ಎಂಎಸ್ ಗಳನ್ನೂ ನೀಡುತ್ತದೆ. ಇದರ ಜೊತೆ ಉಚಿತ ಹಲೋ ಟ್ಯೂನ್ ಸೇರಿದಂತೆ ಏರ್ ಟೆಲ್ ಥ್ಯಾಂಕ್ಸ್ ಹಾಗೂ ವಿಂಕ್ ಮ್ಯೂಸಿಕ್ ಸೌಲಭ್ಯವನ್ನು ಪಡೆಯಬಹುದು.
ಏರ್ ಟೆಲ್ 155 ರಿಚಾರ್ಜ್ ಪ್ಲಾನ್
ಇನ್ನು ಕೇವಲ 155 ರೂ. ಪ್ರಿಪೈಡ್ ಪ್ಲಾನ್ ನ ಮೂಲಕ ಬಳಕೆದಾರರು 1GB ಡೇಟಾ ಜೊತೆಗೆ ಉಚಿತ ಕರೆ ಹಾಗೂ 300 ಎಸ್ ಎಂಎಸ್ ಸೌಲಭ್ಯವನ್ನು ಪಡೆಯಬಹುದು. ಈ ಪ್ಲಾನ್ ನಲ್ಲಿ ಕೇವಲ 1GB ಡೇಟಾ ಲಾಭವಿರುವ ಕಾರಣ ಡೇಟಾ ಮಿತಿಯ ಅಗತ್ಯವಿರುತ್ತದೆ. ಕಡಿಮೆ ಡೇಟಾ ಬಳಕೆದಾರರಿಗೆ ಈ ಪ್ಲಾನ್ ಸಹಾಯವಾಗುತ್ತದೆ. ಹಲೋ ಟ್ಯೂನ್ ಸೇರಿದಂತೆ ಏರ್ ಟೆಲ್ ಥ್ಯಾಂಕ್ಸ್ ಹಾಗೂ ವಿಂಕ್ ಮ್ಯೂಸಿಕ್ ಸೌಲಭ್ಯವನ್ನು ಪಡೆಯಬಹುದು.
ಏರ್ ಟೆಲ್ ಗ್ರಾಹಕರಿಗೆ 28 ದಿನದ ಮಾನ್ಯತೆಯ ರಿಚಾರ್ಜ್ ಪ್ಲಾನ್ ಲಭ್ಯ
ಇದೀಗ 28 ದಿನದ ಪ್ರಿಪೈಡ್ ಪ್ಲಾನ್ ಅನ್ನು ಏರ್ ಟೆಲ್ ಗ್ರಾಹಕರು ಪಡೆಯಬಹುದಾಗಿದೆ. ಈ 28 ದಿನದ ಮಾನ್ಯತೆಯ ಯೋಜನೆಯನ್ನು ರಿಚಾರ್ಜ್ ಮಾಡಿಸಲು ಬಳಕೆದಾರರು 179 ರೂ. ನೀಡಬೇಕಾಗುತ್ತದೆ.
ಈ ಪ್ಲಾನ್ ಬಳಕೆದಾರರಿಗೆ ಹೆಚ್ಚಿನ ಡೇಟಾವನ್ನು ನೀಡುವುದಿಲ್ಲ. ಬದಲಾಗಿ ಅನಿಯಮಿತ ಕರೆ ಹಾಗೂ 300 ಎಸ್ ಎಂಎಸ್ ನ ಸೌಲಭ್ಯವನ್ನು ನೀಡುತ್ತದೆ. ಉಚಿತ ಹಲೋ ಟ್ಯೂನ್, ಏರ್ ಟೆಲ್ ಥ್ಯಾಂಕ್ಸ್ ಹಾಗೂ ವಿಂಕ್ ಮ್ಯೂಸಿಕ್ ಸೌಲಭ್ಯದ ಜೊತೆಗೆ ಏರ್ ಟೆಲ್ ನ 179 ಯೋಜನೆಯು ಗ್ರಾಹಕರಿಗೆ 2GB ಡೇಟಾವನ್ನು ನೀಡುತ್ತದೆ.