Airtel Plan: 35 ದಿನ ಉಚಿತ ಕೆರೆ ಮತ್ತು ಅನಿಯಮಿತ ಡೇಟಾ, ಏರ್ಟೆಲ್ ಗ್ರಾಹಕರಿಗೆ ಅಗ್ಗದ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ.
35 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದ ಏರ್ಟೆಲ್.
Airtel Recharge Plan For 35 Days: ದೇಶದಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಭಾರತಿ ಏರ್ ಟೆಲ್ (Airtel) ದಿನನಿತ್ಯ ಬಳಕೆದಾರರಿಗೆ ವಿವಿಧ ಯೋಜನೆಯನ್ನು ಪರಿಚಯಿಸುತ್ತದೆ. ಏರ್ ಟೆಲ್ ತನ್ನ ಗ್ರಾಹಕರಿಗೆ ಇದುವರೆಗೂ 35 ದಿನಗಳ ಯೋಜನೆಯನ್ನು ಬಿಡುಗಡೆ ಮಾಡಿಲ್ಲ.
ಆದರೆ ಇದೀಗ ಏರ್ ಟೆಲ್ ಬಳಕೆದಾರರಿಗೆ 35 ದಿನದ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡಿದೆ. ಏರ್ ಟೆಲ್ ಬಳಕೆದಾರರು ಮಾಸಿಕ ಅವಧಿ ಮುಗಿದ ನಂತರ ಇನ್ನು 5 ದಿನಗಳ ಮಾನ್ಯತೆಯವರೆಗೂ ಯೋಜನೆಯ ಲಾಭವನ್ನು ಪಡೆಯಬಹುದು.
35 ದಿನಗಳ ಕಡಿಮೆ ಬೆಲೆಯ ರಿಚಾರ್ಜ್ ಘೋಷಿಸಿದ ಏರ್ಟೆಲ್
ಇತ್ತೀಚಿನ ದಿನಗಳಲ್ಲಿ ವಿವಿಧ ಟೆಲಿಕಾಂ ಕಂಪನಿಗಳು ಹಲವು ರೀತಿಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಯಾವುದೇ ಟೆಲಿಕಾಂ ಕಂಪನಿಯು ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದರೆ ಅದಕ್ಕಿಂತಲೂ ಸ್ವಲ್ಪ ಕಡಿಮೆ ಬೆಲೆಯಲ್ಲಿ ಇನ್ನೊಂದು ಟೆಲಿಕಾಂ ಕಂಪನಿ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಘೋಷಿಸುತ್ತಿದೆ.
ಈವರೆಗೆ ಏರ್ ಟೆಲ್ ಬಳಕೆದಾರರು 24, 28, 20, 30 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಲಭ್ಯವಿತ್ತು. ಇದೀಗ 35 ದಿನಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆಗೊಂಡಿದ್ದು ಗ್ರಾಹಕರು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.
ಏರ್ ಟೆಲ್ 289 ರಿಚಾರ್ಜ್ ಪ್ಲಾನ್
ಇದೀಗ 35 ದಿನದ ಪ್ರಿಪೈಡ್ ಪ್ಲ್ಯಾನ್ ಅನ್ನು ಏರ್ ಟೆಲ್ ಗ್ರಾಹಕರು ಪಡೆಯಬಹುದಾಗಿದೆ. ಈ 35 ದಿನದ ಮಾನ್ಯತೆಯ ಯೋಜನೆಯನ್ನು ರಿಚಾರ್ಜ್ ಮಾಡಿಸಲು ಬಳಕೆದಾರರು 289 ರೂ. ಪಾವತಿಸಬೇಕಾಗುತ್ತದೆ. ಈ ಪ್ಲಾನ್ ಬಳಕೆದಾರರಿಗೆ ಹೆಚ್ಚಿನ ಡೇಟಾವನ್ನು ನೀಡುವುದಿಲ್ಲ. ಬದಲಾಗಿ ಅನಿಯಮಿತ ಕರೆ ಹಾಗೂ 300 ಎಸ್ ಎಂಎಸ್ ನ ಸೌಲಭ್ಯವನ್ನು ನೀಡುತ್ತದೆ.
ಉಚಿತ ಹಲೋ ಟ್ಯೂನ್, ಏರ್ ಟೆಲ್ ಥ್ಯಾಂಕ್ಸ್ ಹಾಗೂ ವಿಂಕ್ ಮ್ಯೂಸಿಕ್ ಸೌಲಭ್ಯದ ಜೊತೆಗೆ ಏರ್ ಟೆಲ್ ನ 289 ಯೋಜನೆಯು ಗ್ರಾಹಕರಿಗೆ 4GB ಡೇಟಾವನ್ನು ನೀಡುತ್ತದೆ. ಕಡಿಮೆ ಡೇಟಾ ಬಳಕೆದಾರರಿಗೆ ಈ ಯೋಜನೆಯು ಉತ್ತಮ ಆಯ್ಕೆಯಾಗಿರುತ್ತದೆ. ಇನ್ನು ಕೇವಲ 289 ರೂ. ರಿಚಾರ್ಜ್ ಮಾಡುವ ಮೂಲಕ ನೀವು ಏರ್ ಟೆಲ್ ಸಿಮ್ ಅನ್ನು 35 ದಿನಗಳವರೆಗೂ ಸಕ್ರಿಯವಾಗಿರಿಸಿಕೊಳ್ಳಬಹುದು.
ಏರ್ ಟೆಲ್ ಗ್ರಾಹಕರಿಗೆ 209 ರೂ. ರಿಚಾರ್ಜ್ ಪ್ಲ್ಯಾನ್ ಲಭ್ಯ
ಇದೀಗ ಏರ್ ಟೆಲ್ ತನ್ನ ಬಳಕೆದಾರರಿಗಾಗಿ 21 ದಿನದ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದರೆ. ಏರ್ ಟೆಲ್ ಗ್ರಾಹಕರು 209 ರೂ. ಪ್ರಿ ಪೈಡ್ ರಿಚಾರ್ಜ್ ಮಾಡಿಸಿಕೊಳ್ಳುವ ಮೂಲಕ ದಿನನಿತ್ಯ ಉಚಿತ ಕರೆಯ ಜೊತೆ ಡೇಟಾವನ್ನು ಕೂಡ ಪಡೆಯಬಹುದು. ಈ 209 ಪ್ರಿಪೈಡ್ ಪ್ಲ್ಯಾನ್ ಬಳಕೆದಾರರಿಗೆ ಪ್ರತಿನಿತ್ಯ 1GB ಡೇಟಾ ಹಾಗೂ ನಿತ್ಯದ ಬಳಕೆಗೆ 100 ಎಸ್ ಎಂಎಸ್ ಗಳನ್ನೂ ನೀಡುತ್ತದೆ.