Airtel Recharge: ಏರ್ಟೆಲ್ ಸಿಮ್ ಬಳಸುವವರಿಗೆ ಬೇಸರದ ಸುದ್ದಿ, ಈ 2 ಜನಪ್ರಿಯ ರಿಚಾರ್ಜ್ ಬೆಲೆ ಏರಿಕೆ

ಈ ಎರಡು ಪ್ಲಾನ್ ಗಳ ಬೆಲೆ ಹೆಚ್ಚಳ ಮಾಡಿದ ಏರ್ಟೆಲ್

Airtel Recharge Plan Price Hike: ದೇಶದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ Airtel ಆಗಾಗ ಹೊಸ ಹೊಸ ಪ್ರೀಪೈಡ್ ಪ್ಲಾನ್ ಗಳನ್ನೂ ಪರಿಚಯಿಸುತ್ತ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಮಾಡುಕೊಡುತ್ತಿದೆ. ಇನ್ನು ದೇಶದಲ್ಲಿ ಏರ್ಟೆಲ್ 5G ಸೇವೆಯನ್ನು ನೀಡುತ್ತಿದೆ. ಈ ಕಾರಣಕೆ ಏರ್ಟೆಲ್ ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಏರ್ಟೆಲ್ ತನ್ನ ಗ್ರಾಹಕರಿಗಾಗಿ ಅತಿ ಕಡಿಮೆ ಬೆಲೆಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ರಿಚಾರ್ಜ್ ಪ್ಲಾನ್ ಗಳನ್ನೂ ಪರಿಚಯಿಸುತ್ತಿದೆ.

ಸದ್ಯ ಅನೇಕ ಪ್ರೀಪೈಡ್ ಯೋಜನೆಗಳನ್ನು ಪರಿಚಯಿಸಿರುವ Airtel ಇದೀಗ ತನ್ನ ಗ್ರಾಹಕರಿಗೆ ಬೇಸರದ ಸುದ್ದಿಯನ್ನು ನೀಡಿದೆ. ಹೌದು, ಏರ್ಟೆಲ್ ಇದೀಗ ತನ್ನ ಎರಡು ಜನಪ್ರಿಯ ರಿಚಾರ್ಜ್ ಪ್ಲಾನ್ ಗಳ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಏರ್ಟೆಲ್ ಯಾವ ಯಾವ ರಿಚಾರ್ಜ್ ಪ್ಲಾನ್ ಗಳ ದರವನ್ನು ಹೆಚ್ಚಿಸಿದೆ ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Airtel Recharge Plan Price Hike
Image Credit: Gizbot

ಏರ್ಟೆಲ್ ನ ಈ ಎರಡು ಪ್ಲಾನ್ ಗಳ ಬೆಲೆ ಹೆಚ್ಚಳ
ಏರ್‌ ಟೆಲ್ ಈಗ ತನ್ನ ಪ್ರಿಪೇಯ್ಡ್ ಪಟ್ಟಿಯಿಂದ ರೂ. 118 ಮತ್ತು ರೂ. 289 ಯೋಜನೆಗಳನ್ನು ತೆಗೆದುಹಾಕಿದೆ. ಈಗ ಅದೇ ಪ್ರಯೋಜನಗಳನ್ನು ಪಡೆಯಲು ಬಳಕೆದಾರರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಅಂದರೆ ನೀವು ಕ್ರಮವಾಗಿ ರೂ.129 ಮತ್ತು ರೂ. 329 ಗಳ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಮೂಲಕ ನೀವು ಹಳೆಯ ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳನ್ನು ಪಡೆಯಬಹುದು.

Airtel 129 Recharge Plan Details
ಏರ್‌ಟೆಲ್‌ನ ಈ ರೂ. 129 ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರು ಒಟ್ಟು 12GB ಡೇಟಾವನ್ನು ಪಡೆಯಬಹುದು. ಯಾವುದೇ ಸಕ್ರಿಯ ಯೋಜನೆಯೊಂದಿಗೆ ಬಳಕೆದಾರರು ಈ ರೀಚಾರ್ಜ್ ಅನ್ನು ಪಡೆಯಬಹುದು. ಈ ಮೊದಲ 118 ರೂ. ಯೋಜನೆಯಲ್ಲಿ 1GB ಡೇಟಾಗೆ 9.83 ರೂ. ಖರ್ಚಾಗುತ್ತಿತ್ತು. ಆದರೆ ಈಗ ಗ್ರಾಹಕರು 1GB ಡೇಟಾಗೆ 10.75 ರೂ. ಖರ್ಚು ಮಾಡಬೇಕಾಗುತ್ತದೆ.

Airtel 129 Recharge Plan Details
Image Credit: Economic Times

Airtel 329 Recharge Plan Details
Airtel 329 ಯೋಜನೆಯು 35 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದು ಅನಿಯಮಿತ ಧ್ವನಿ ಕರೆ, ಉಚಿತ ರಾಷ್ಟ್ರೀಯ ರೋಮಿಂಗ್, 300 ಉಚಿತ SMS ಮತ್ತು ಒಟ್ಟು 4GB ಡೇಟಾದೊಂದಿಗೆ ಬರುತ್ತದೆ. ಇದರ ಹೊರತಾಗಿ ಬಳಕೆದಾರರು ಈ ಪ್ರಿಪೇಯ್ಡ್ ಯೋಜನೆಯಲ್ಲಿ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ ನ ಉಚಿತ ಚಂದಾದಾರಿಕೆ ಮತ್ತು ಅಪೊಲೊ 24|7 ಸರ್ಕಲ್‌ ನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

Join Nadunudi News WhatsApp Group

Airtel 329 Recharge Plan Details
Image Credit: Guardian

Join Nadunudi News WhatsApp Group