ದೇಶದಲ್ಲಿ ಅತೀ ಹೆಚ್ಚು ಜನರು ಬಳಕೆ ಮಾಡುವ ಸಿಮ್ ಅಂದರೆ ಅದು ಏರ್ಟೆಲ್ ಸಿಮ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ದೇಶದಲ್ಲಿ ಕೂಡ ಏರ್ಟೆಲ್ ಸಿಮ್ ಅನ್ನುವ ಜನಫು ಹೆಚ್ಚು ಬಳಕೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಜಿಯೋ ಸಿಮ್ ಉಚಿತ ಕರೆ ಮತ್ತು ಇಂಟರ್ನೆಟ್ ಸೇವೆಯನ್ನ ಆರಂಭಿಸಿದ ನಂತರ ಭಾರತೀಯ ಏರ್ಟೆಲ್ ಕೂಡ ಅದೆಷ್ಟೋ ಆಫರ್ ಗಳನ್ನ ಕೊಡುವುದರ ಮೂಲಕ ತಮ್ಮ ಗ್ರಾಹಕರಿಗೆ ಬಹಳ ಪ್ರಯೋಜನವನ್ನ ನೀಡಿತ್ತು ಎಂದು ಹೇಳಬಹುದು. ಇಷ್ಟುದಿನ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ರಿಚಾರ್ಜ್ ಸೇವೆಯನ್ನ ನೀಡುವುದರ ಮೂಲಕ ಜನರ ಮನವನ್ನ ಗೆದ್ದಿದ್ದ ಭಾರತೀಯ ಏರ್ಟೆಲ್ ಈಗ ತನ್ನ ಗ್ರಾಹಕರಿಗೆ ದೊಡ್ಡ ಶಾಕಿಂಗ್ ಸುದ್ದಿ ನೀಡಿದೆ ಎಂದು ಹೇಳಬಹುದು.
ಹಾಗಾದರೆ ಏನದು ಶಾಕಿಂಗ್ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಭಾರತದ ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ (Bharti Airtel) ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದು, ಡೇಟಾ ಮತ್ತು ಕರೆಗಳ ದರ (voice and data plan) ಹೆಚ್ಚಳ ಮಾಡಿದೆ. ಹೌದು ಭಾರತೀಯ ವಿವಿಧ ಯೋಜನೆಗಳಿಗೆ ಟೆಲಿಕಾಂ ಆಪರೇಟರ್ ತನ್ನ ಪ್ರೀಪೇಯ್ಡ್ ಯೋಜನೆಯ ಬೆಲೆಗಳನ್ನು ಹೆಚ್ಚಿಸಲಿದೆ ಎಂದು ಭಾರತೀಯ ಏರ್ ಟೆಲ್ ಇಂದು ಘೋಷಿಸಿದೆ.
ಇನ್ನು ಏರ್ಟೆಲ್ ನಿಂದ ಬಂದಿರುವ ಮಾಹಿತಿಯ ಪ್ರಕಾರ, ಏರ್ಟೆಲ್ ತನ್ನ ಪ್ರತಿಯೊಂದು ಹೊಸ ರಿಚಾರ್ಜ್ ನಲ್ಲಿ ಶೇಕಡಾ 20 ರಷ್ಟು ಬೆಲೆಯನ್ನ ಏರಿಕೆ ಮಾಡಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇನ್ನು ಅನಿಯಮಿತ ಕರೆ ಮತ್ತು ಡೇಟಾ ಯೋಜನೆ ಪ್ಯಾಕ್ ಗಳು ಮತ್ತು ಡೇಟಾ ಟಾಪ್ ಅಪ್ ರೀಚಾರ್ಜ್ ಗಳ ಮೇಲೆ ಶೇಕಡಾ 25 ರಷ್ಟು ಹೆಚ್ಚಳ ಮಾಡಲಾಗಿದೆ. ಇನ್ನು ಏರ್ ಟೆಲ್ ನ ಪ್ರವೇಶ ಮಟ್ಟದ ಕರೆ ಯೋಜನೆಯು ಈಗ ಶೇಕಡಾ 25 ರಷ್ಟು ಹೆಚ್ಚಳವಾಗಿದೆ. ಆದರೆ ಹೆಚ್ಚಿನ ಅನಿಯಮಿತ ಕರೆ ಪ್ಯಾಕ್ ಗಳು ಸುಮಾರು ಶೇಕಡಾ 20 ರಷ್ಟು ಏರಿಕೆ ಮಾಡಲಾಗಿದೆ.
ಇನ್ನು ಈ ಹೆಚ್ಚಳದಿಂದ ರೂಪಾಯಿ 79 ಧ್ವನಿ ಯೋಜನೆಗೆ ಇನ್ನುಮುಂದೆ ಜನರು 99 ರೂಪಾಯಿ ವೆಚ್ಚ ಮಾಡಬೇಕು ಮತ್ತು ಉಳಿದ ಯೋಜನೆಗಳು ಕೂಡ ಇದೆ ರೀತಿ ಹೆಚ್ಚಾಗಿದೆ ಎಂದು ಹೇಳಬಹುದು. ಇನ್ನು ಏರ್ಟೆಲ್ ತನ್ನ ರಿಚಾರ್ಜ್ ಸೇವೆಯನ್ನ ಹೆಚ್ಚು ಮಾಡಿದ್ದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಈಹಿಂದೆ ಹೆಚ್ಚಿನ ಜನರು ಬೇರೆಬೇರೆ ಸಿಮ್ ಬಿಟ್ಟು ಸಿರ್ಟೆಲ್ ಗೆ ಬರುತ್ತಿದ್ದರು, ಆದರೆ ರಿಚಾರ್ಜ್ ಬೆಲೆ ಏರಿಕೆ ಜನರ ಮುಖ್ಯ ಬೇಸರಕ್ಕೆ ಕಾರಣವಾಗುವ ಬಹುತೇಕ ಸಾಧ್ಯತೆ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ನೀವು ಕೂಡ ಏರ್ಟೆಲ್ ಸಿಮ್ ಬಳಕೆ ಮಾಡುತ್ತಿದ್ದರೆ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.