Halli Haida Rajesh: ರಾಜೇಶ್ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ ಐಶ್ವರ್ಯ, ರಾಜೇಶ್ ಸಾವಿಗೆ ಅಸಲಿ ಕಾರಣ ತಿಳಿಸಿದ ಐಶ್ವರ್ಯ.
ಇದೀಗ ಐಶ್ವರ್ಯ ಅವರು ರಾಜೇಶ್ ಸಾವಿನ ಹಿಂದಿನ ಕಾರಣವನ್ನ ತಿಳಿಸಿದ್ದಾರೆ.
Aishwarya About Rajesh Death: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಗಳಲ್ಲಿ ಹಳ್ಳಿ ಹೈದ ಪ್ಯಾಟಿಗ್ ಬಂದ ರಿಯಾಲಿಟಿ ಶೋ ಕೂಡ ಒಂದಾಗಿದೆ. ಇನ್ನು ಹಳ್ಳಿ ಹೈದ ಪ್ಯಾಟಿಗ್ ಬಂದ ಸೀಸನ್ 1 (Halli Hiada Pyatig Banda Season 1) ರ ವಿನ್ನರ್ ಆಗಿ ರಾಜೇಶ್ (Rajesh ) ಹಾಗೂ ಐಶ್ವರ್ಯ ಗುರಿತಿಸಿಕೊಂಡಿದ್ದಾರೆ.
ರಾಜೇಶ್ ಹಾಗೂ ಐಶ್ವರ್ಯ ಹಳ್ಳಿ ಹೈದ ಪ್ಯಾಟಿಗ್ ಬಂದ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಪರಿಚಯವಾದವರು. ಆದರೆ ಹಳ್ಳಿ ಹೈದ ಪ್ಯಾಟಿಗ್ ಬಂದ ರಿಯಾಲಿಟಿ ಶೋ ಖ್ಯಾತಿಯ ರಾಜೇಶ್ ಅಕಾಲಿಕ ಮರಣ ಹೊಂದಿರುವುದು ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ.
ರಾಜೇಶ್ ಜೊತೆ ಐಶ್ವರ್ಯ (Aishwarya) ಅವರು ಹಳ್ಳಿ ಹೈದ ಪ್ಯಾಟಿಗ್ ಬಂದ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಐಶ್ಆರ್ಯ ಅವರು ರಾಜೇಶ್ ಸಾವಿನ ವಿಚಾರವಾಗಿ ಸಾಕಷ್ಟು ಬಾರಿ ಸುದ್ದಿಯಾಗಿದ್ದರು. ರಾಜೇಶ್ ಮರಣದ ಸುದ್ದಿ ವೈರಲ್ ಆಗುತ್ತಿದ್ದಂತೆ ಐಶ್ವರ್ಯ ರಾಜೇಶ್ ಸಾವಿಗೆ ಕಾರಣ ಎನ್ನುವ ಚರ್ಚೆ ಕೂಡ ಸಾಕಷ್ಟು ನಡೆದಿತ್ತು. ಇದೀಗ ಐಶ್ವರ್ಯ ಅವರು ರಾಜೇಶ್ ಸಾವಿನ ಹಿಂದಿನ ಕಾರಣವನ್ನ ತಿಳಿಸಿದ್ದಾರೆ.
ರಾಜೇಶ್ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ ಐಶ್ವರ್ಯ
ಮೊದಲಿಗೆ ರಾಜೇಶ್ ಇನ್ನಿಲ್ಲ ಎನ್ನುವ ಸತ್ಯವನ್ನು ನನಗು ನಂಬಲು ಆಗಲಿಲ್ಲ. ರಾಜೇಶ್ ಸಾಯುವ ವೇಳೆಯಲ್ಲಿ ನಾನು ಡೈರೆಕ್ಟರ್ ಊರಿನಲ್ಲಿದ್ದೆ. ಇನ್ನು ರಾಜೇಶ್ ಸಾವಿಗೆ ನಾನೇ ಕಾರಣ ಎಂದು ಸಾಕಷ್ಟು ಜನರು ನನಗೆ ಹೇಳಿದ್ದಾರೆ. ಆದರೆ ರಾಜೇಶ್ ಸಾವಿಗೆ ನಾನು ಕಾರಣವಲ್ಲ. ಆಗಾಗ ಮನೆಯವರ ಬಳಿ ನಾನು ಸಾಯುತ್ತೇನೆ ಎಂದು ರಾಜೇಶ್ ಹೆದುರಿಸುತ್ತಿದ್ದ. ಅವತ್ತು ಕೂಡ ಹೆದರಿಸಲು ಹೋಗಿದ್ದಾನೆ.
ರಾಜೇಶ್ ಸಾವಿನ ಹಿಂದಿನ ಕಾರಣ
ಟೆರೇಸ್ ಮೇಲಿಂದ ಬಿದ್ದಿದ್ದರು ಕೈ ಕಾಲು ಕೂಡ ಮುರಿಯುತ್ತಿರಲಿಲ್ಲ. ಆದರೆ ರಾಜೇಶ್ ಸಾವಿನ ಹಿಂದಿನ ದಿನ ಮನೆಯ ಮಾಲೀಕರು ಕಂಪೌಂಡ್ ಗೆ ಹೆಚ್ಚು ಚೂಪಾಗಿರುವ ಗ್ರಿಲ್ ಅನ್ನು ಹಾಕಿಸಿದ್ದರು. ಅದರ ಮೇಲೆ ಬಿದ್ದ ತಕ್ಷಣ ಆ ಕಂಬಿ ರಾಜೇಶ್ ಹೊಟ್ಟೆಗೆ ಚುಚ್ಚಿದೆ, ಈ ಕಾರಣಗಳಿಂದ ರಾಜೇಶ್ ಕೊನೆಯುಸಿರೆಳೆದಿದ್ದಾನೆ. ಅವನ ಸಾವಿಗೆ ಯಾರು ಕಾರಣರಲ್ಲ. ನನಗೆ ಜನರು ತುಂಬಾ ಪ್ರೀತಿ ಕೊಡುತ್ತಾರೆ. ಆದರೆ ಅನೇಕರು ರಾಜೇಶ್ ಸಾವಿಗೆ ನನ್ನ ಹೆಸರನ್ನು ಎಳೆಯುತ್ತಾರೆ.
ರಾಜೇಶ್ ಸಾವಿಗೆ ನಾನು ಕಾರಣವಲ್ಲ
ಏನ್ ರೀ ರಾಜೇಶ್ ನ ಕರೆದುಕೊಂಡು ಬಂದು ಸಾಯಿಸಿ ಬಿಟ್ಟಿದ್ದೀರಾ ಎಂದು ಸುಲಭವಾಗಿ ಹೇಳುತ್ತಾರೆ. ಹೆದರಿಸಲು ಹೋಗಿ ರಾಜೇಶ್ ಸತ್ತಿರುವುದು. ನನಗು ಅವನ ಸಾವಿಗೂ ಯಾವ ಸಂಬಂಧವು ಇಲ್ಲ. ಸಿಟಿಗೆ ರಾಜೇಶ್ ಅವರನ್ನ ಕರೆದುಕೊಂಡು ಬಂದು ಸಾಯಿಸುವಾ ಉದ್ದೇಶ ಯಾರಿಗೂ ಇಲ್ಲ.
ಮಣ್ಣಿನ ಮನೆಯಲ್ಲಿರುವ ಹುಡುಗ ಸಿಟಿಗೆ ಬಂದು ಮನೆ ಖರೀದಿಸಿ ಹೊಸ ಗಾಡಿ ಖರೀಸಿದಿ ಜೀವನ ಚೆನ್ನಾಗಿ ನಡೆಸುತ್ತಿದ್ದ. ಲಕ್ಷ ಲಕ್ಷ ಹಣ ಸಂಪಾದನೆ ಮಾಡುವಷ್ಟರ ಮಟ್ಟಕ್ಕೆ ಹೆಸರು ಮಾಡಿದ. ಸುಮಾರು ಮೂರ್ನಾಲ್ಕು ಸಿನಿಮಾಗಳಿಗೆ ಸಹಿ ಮಾಡಿ ಸಂಪಾದನೆ ಮಾಡಿದ್ದ. ರಾಜೇಶ್ ಸಾವಿಗೆ ನಾನು ಕಾರಣ ಅಲ್ಲ ಎಂದು ಹಲವು ವರ್ಷಗಳ ನಂತರ ಐಶ್ವರ್ಯ ಸ್ಪಷ್ಟನೆ ನೀಡಿದ್ದಾರೆ.