Aishwarya Rai Divorce: ಅಭಿಷೇಕ್ ಬಚ್ಚನ್ ಜೊತೆ ನಟಿ ಐಶ್ವರ್ಯ ರೈ ವಿಚ್ಛೇಧನ, ಸ್ಪಷ್ಟನೆ ನೀಡಿದ ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್ ಜೊತೆ ನಟಿ ಐಶ್ವರ್ಯ ರೈ ವಿಚ್ಛೇಧನ ಬಗ್ಗೆ ಬಿಗ್ ಅಪ್ಡೇಟ್.
Aishwarya Rai And Abhishek Bachchan Divorce: ಸದ್ಯ ಬಾಲಿವುಡ್ ನ ಸ್ಟಾರ್ ನಟ Amitabh Bachchan ಅವರ ಪುತ್ರ Abhishek Bachchan ಹಾಗೂ ಮಾಜಿ ವಿಶ್ವ ಸುಂದರಿ Aishwarya Rai Bachchan ಅವರ ವಿವಾಹ ವಿಚ್ಛೇದನದ ಸುದ್ದಿಗಳು ಸಾಕಷ್ಟು ವೈರಲ್ ಆಗುತ್ತಿದೆ. ಇತ್ತೀಚಿಗೆ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಸೊಸೆ ಐಶ್ವರ್ಯ ರೈ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ ಎನ್ನುವ ಸಿದ್ದಿ ಕೇಳಿಬಂದಿತ್ತು.
ಅಭಿಷೇಕ್ ಬಚ್ಚನ್ ಜೊತೆ ನಟಿ ಐಶ್ವರ್ಯ ರೈ ವಿಚ್ಛೇಧನ
ಈ ಸುದ್ದಿ ವೈರಲ್ ಆಗುತ್ತಿದ್ದಂತೆ Abhishek Bachchan ಹಾಗೂ Aishwarya Rai Bachchan ವಿಚ್ಛೇದನದ ಸುದ್ದಿ ಇನ್ನಷ್ಟು ಕುತೂಹಲ ಮೂಡಿಸಿತ್ತು. Abhishek Bachchan ಹಾಗೂ ಮಾಜಿ ವಿಶ್ವ ಸುಂದರಿ Aishwarya Rai Bachchan ಸದ್ಯದಲ್ಲೇ ವಿಚ್ಛೇಧನ ಪಡೆಯುತ್ತಾರೆ ಎಂಬೆಲ್ಲ ಮಾತುಕತೆ ಸಾಕಷ್ಟು ಕೇಳಿಬಂದಿದೆ. ಸದ್ಯ ಅಭಿಷೇಕ್ ಬಚ್ಚನ್ ಜೊತೆ ನಟಿ ಐಶ್ವರ್ಯ ರೈ ವಿಚ್ಛೇಧನ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ.
ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯ ರೈ ವಿಚ್ಛೇದನ ಪಡೆದುಕೊಳ್ಳುತ್ತಾರಾ..?
ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯ ರೈ ವಿಚ್ಛೇದನ ಸುದ್ದಿ ವೈರಲ್ ಆಗುತ್ತಿದಂತೆ ಈ ಸುದ್ದಿಗೆ ಸ್ಪಷ್ಟನೆ ಎಂಬಂತೆ ಮುಂಬೈನಲ್ಲಿ ನಡೆದ ಧೀರೂಭಾಯಿ ಅಂಬಾನಿ ಇಂಟರ್ ನ್ಯಾಶನಲ್ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಸಮಾರಂಭದಲ್ಲಿ ದಂಪತಿಗಳ ಹಲವಾರು ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ.
View this post on Instagram
ಐಶ್ವರ್ಯಾ ರೈ ತನ್ನ ತಾಯಿ ಬೃಂದ್ಯಾ ರೈ ಜೊತೆ ಕಾರಿನಲ್ಲಿ ಬಂದರು. ಅಭಿಷೇಕ್ ಬಚ್ಚನ್ ತಮ್ಮ ತಂದೆ-ನಟ ಅಮಿತಾಬ್ ಬಚ್ಚನ್ ಮತ್ತು ಸೋದರಳಿಯ ಅಗಸ್ತ್ಯ ನಂದಾ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದರು. ಕಾರಿನಿಂದ ಇಳಿದ ನಂತರ ಐಶ್ವರ್ಯಾ ಯಾರಿಗೋ ಕೈ ಬೀಸಿ ಮುಗುಳ್ನಕ್ಕಳು. ಐಶ್ವರ್ಯ ರೈ ಅವರ ಜೊತೆ ಅಭಿಷೇಕ್, ಅಗಸ್ತ್ಯ ಮತ್ತು ಅಮಿತಾಬ್ ಅವಳೊಂದಿಗೆ ಸೇರಿಕೊಂಡರು.
ವಿಚ್ಛೇಧನದ ಸುದ್ದಿಗೆ ಬ್ರೇಕ್ ನೀಡಿದ ಐಶ್ವರ್ಯ ಹಾಗೂ ಅಭಿಷೇಕ್ ಜೋಡಿ
ಐಶ್ವರ್ಯಾ ಕಪ್ಪು ಮತ್ತು ಗೋಲ್ಡನ್ ಸೂಟ್ ಮತ್ತು ಹೀಲ್ಸ್ ಧರಿಸಿದ್ದರು. ಅವಳು ಮ್ಯಾಚಿಂಗ್ ಬ್ಯಾಗ್ ಹಾಕಿದ್ದರು. ಅಭಿಷೇಕ್ ನೇವಿ ಬ್ಲೂ ಶರ್ಟ್, ಮ್ಯಾಚಿಂಗ್ ಪ್ಯಾಂಟ್ ಮತ್ತು ಸ್ನೀಕರ್ಸ್ ನಲ್ಲಿ ಕಾಣಿಸಿಕೊಂಡರು. ಅಮಿತಾಭ್ ಬಣ್ಣಬಣ್ಣದ ಜಾಕೆಟ್, ಪ್ಯಾಂಟ್ ಮತ್ತು ಶೂ ಧರಿಸಿದ್ದರು. ಅಗಸ್ತ್ಯ ನಂದಾ ಬಿಳಿ ಬಣ್ಣದ ಟಿ-ಶರ್ಟ್, ಡೆನಿಮ್ ಗಳು ಮತ್ತು ಬೂಟುಗಳ ಮೇಲೆ ಬೀಜ್ ಜಾಕೆಟ್ ಅನ್ನು ಆರಿಸಿಕೊಂಡರು. ಒಟ್ಟಾಗಿ ಐಶ್ವರ್ಯ ಹಾಗೂ ಅಭಿಷೇಕ್ ಇವೆಂಟ್ ನಲ್ಲಿ ಮಿಂಚಿದ್ದಾರೆ. ಈ ಮೂಲಕ ವಿಚ್ಛೇಧನನದ ಸುದ್ದಿಗೆ ಬ್ರೇಕ್ ನೀಡಿದ್ದಾರೆ.