Aishwarya Rai Horoscope: ವಿಚ್ಛೇಧನ ಸುದ್ದಿ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಐಶ್ವರ್ಯ ರೈ ಜಾತಕ, ವಿಶೇಷ ಜಾತಕದ ನಟಿ
ನಟಿ ಐಶ್ವರ್ಯ ರೈ ಜಾತಕದ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ
Aishwarya Rai Horoscope Update: ಇತೀಚಿನ ದಿನಗಳಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ (Abhishek Bachchan) ಹಾಗು ನಟಿ ಐಶ್ವರ್ಯ ರೈ (Aishwarya Rai) ಅವರ ವಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಪ್ರೀತಿಸಿ ಮದುವೆ ಆದ ಈ ಜೋಡಿಗೆ ಆರಾಧ್ಯ ಎನ್ನುವ ಮಗಳಿದ್ದು, ಸಧ್ಯಕ್ಕೆ ಈ ಜೋಡಿಯ ಬಗ್ಗೆ ಗಾಸಿಪ್ ಗಳು ತುಂಬಾನೇ ಕೇಳಿಬರುತ್ತಿದೆ.
ಹೌದು ನಟ ಅಭಿಷೇಕ್ ಬಚ್ಚನ್ ಹಾಗು ನಟಿ ಐಶ್ವರ್ಯ ರೈ ಅವರ ನಡುವೆ ಬಿರುಕು ಮೂಡಿದೆ ಈ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂಥೆಲ್ಲಾ ಸುದ್ದು ಹರಿದಾಡುತ್ತಿದೆ. ಈ ಸುದ್ದಿ ಬಗ್ಗೆ ಸ್ವತಃ ಈ ಜೋಡಿ ಎಲ್ಲಿಯೂ ಮಾತಾಡಿಲ್ಲ. ಪ್ರಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮಿಯವರು ಐಶ್ವರ್ಯ-ಅಭಿಷೇಕ್ ವಿಚ್ಛೇಧನದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ನಟಿ ಐಶ್ವರ್ಯಾ ರೈ ಯಶಸ್ಸಿಗೆ ಅವರ ಜಾತಕವೇ ಕಾರಣ
ಕರ್ನಾಟಕದ ಮುಲ್ಕಿ ಎಂಬ ಸಣ್ಣ ಪಟ್ಟಣದಿಂದ ಬಂದ ದೇಶದ ಪ್ರಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮಿಯವರು ಐಶ್ವರ್ಯ-ಅಭಿಷೇಕ್ ವಿಚ್ಛೇದನದ ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿ ಮಾಡಿದ ಪ್ರಕಾರ, ಐಶ್ವರ್ಯಾ ಜಾತಕದಲ್ಲಿ ‘ಕುಜ ದೋಷ’ ಮತ್ತು ‘ರಾಜಯೋಗ’ ಎರಡೂ ಇದ್ದು, ಈಕೆಯ ಜಾತಕ 600 ವರ್ಷಕ್ಕೊಮ್ಮೆ ರೂಪುಗೊಳ್ಳುವಂತಹದ್ದಾಗಿದೆ ಎಂದಿದ್ದಾರೆ. ಇದೇ ಕಾರಣದಿಂದ ವಿಶ್ವಸುಂದರಿ ಪಟ್ಟಕ್ಕೇರಿದ್ದರಂತೆ ಐಶ್ವರ್ಯ ರೈ.
ದೇವರೇ ಒಂದುಗೂಡಿಸಿದ ಜೋಡಿ
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ದೇವರೇ ಖುದ್ದು ಮಾಡಿದ ಜೋಡಿಯಂತೆ. ಇವರ ಮಧ್ಯೆ ಎಷ್ಟೇ ಜಗಳ ಆದರೂ ಬೇರೆ ಮಾಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.”ದೇವರೇ ಇವರಿಬ್ಬರನ್ನು ಒಂದು ಮಾಡಿರೋದು. ಹೀಗಾಗಿ ಯಾರೂ ಕೂಡ ಈ ಸಂಬಂಧವನ್ನು ಹಾಳು ಮಾಡಲು ಸಾಧ್ಯವಿಲ್ಲ” ಎಂಬರ್ಥದಲ್ಲಿ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗಿದೆ. ಚಂದ್ರಶೇಖರ ಸ್ವಾಮಿಯವರ ಖ್ಯಾತಿ ಅಂತಿಂಥದಲ್ಲ. ವಿಜಯ್ ಮಲ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಸಹ ಇವರ ಬಳಿ ಭವಿಷ್ಯ ಕೇಳುತ್ತಾರೆ ಎನ್ನಲಾಗಿದೆ.