Aishwarya Rai: ಮದುವೆಗೆ ಐಶ್ವರ್ಯ ರೈ ಧರಿಸಿದ್ದ ಸೀರೆ ಬೆಲೆ ಎಷ್ಟು, ದುಬಾರಿ ಸೀರೆಯಲ್ಲಿ ಮಿಂಚಿದ್ದ ವಿಶ್ವ ಸುಂದರಿ.
ತನ್ನ ಮದುವೆಗೆ ದುಬಾರಿ ದುಬಾರಿ ಬೆಲೆಯ ಸೀರೆಯುಟ್ಟು ಜನರ ಕಣ್ಣು ಕುಕ್ಕುವಂತೆ ಮಾಡಿದ್ದರು ನಟಿ ಐಶ್ವರ್ಯ ರೈ.
Aishwarya Rai And Abhishek Bachchan Marriage: ಐಶ್ವರ್ಯ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ (Abhishek Bachchan) ಬಾಲಿವುಡ್ (Bollywood) ನ ನಂಬರ್ ಒನ್ ಜೋಡಿಯಾಗಿದ್ದಾರೆ. ಈ ಜೋಡಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಈ ಜೋಡಿ ತಮ್ಮ ದಾಂಪತ್ಯ ಜೀವನದಲ್ಲಿ 16 ವರ್ಷ ಪೂರೈಸಿದ್ದಾರೆ. ಏಪ್ರಿಲ್ 20-2007 ರಂದು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಹಸೆಮಣೆ ಏರಿದ್ದರು. ಇದೀಗ ನಟಿ ಐಶ್ವರ್ಯ ರೈ ಅವರು ಮದುವೆಯಲ್ಲಿ ಧರಿಸಿದ ಸೀರೆಯ ಬೆಲೆ ಎಷ್ಟು ಎಂಬುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರೀತಿಸಿ ಮದುವೆಯಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್ ಅವರು ನಟಿ ಐಶ್ವರ್ಯ ರೈ ಅವರಿಗೆ ಮೊದಲು ಪ್ರಪೋಸ್ ಮಾಡಿದರು. ಐಶ್ವರ್ಯ ಕೂಡ ಇವರ ಪ್ರಪೋಸಲ್ ಒಪ್ಪಿಕೊಂಡು ನಂತರ ಇಬ್ಬರು ಪ್ರೀತಿಸಿ ಮದುವೆಯಾದರು. ಏಪ್ರಿಲ್ 20 ರಂದು ಮುಂಬೈನಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿವಾಹವು ಅದ್ದೂರಿಯಾಗಿ ನಡೆಯಿತು. ಇವರಿಬ್ಬರ ಮದುವೆಗೆ ಸುಮಾರು 6 ರಿಂದ 7 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮದುವೆಯಲ್ಲಿ ದುಬಾರಿ ವೆಚ್ಚದ ಸೀರೆ ಧರಿಸಿದ ನಟಿ ಐಶ್ವರ್ಯ ರೈ
ಮದುವೆಯಲ್ಲಿ ಐಶ್ವರ್ಯ ರೈ ಧರಿಸಿದ್ದ ಕಾಂಚೀವರಂ ಸೀರೆಗೆ ಸುಮಾರು 75 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದಲ್ಲದೆ ಕೋಟ್ಯಾಂತರ ಮೌಲ್ಯದ ಚಿನ್ನಾಭರಣಗಳನ್ನು ಧರಿಸಿದ್ದರು. ಬಾಲಿವುಡ್ ಮತ್ತು ರಾಜಕೀಯ ಜಗತ್ತಿನ ಹಲವು ದೊಡ್ಡ ವ್ಯಕ್ತಿಗಳು ಮದುವೆ ಸಾಕ್ಷಿಯಾಗಿದ್ದಾರೆ.
ಮದುವೆಯಾದ ಒಂದೇ ವರ್ಷದಲ್ಲಿ ಐಶ್ವರ್ಯ ಮತ್ತು ಅಭಿಷೇಕ್ ಅವರು ಆರಾಧ್ಯ ಎಂಬ ಮುದ್ದಾದ ಮಗಳು ಜನಿಸಿದ್ದಾರೆ. ಇದೀಗ ಈ ಜೋಡಿ ಮುದ್ದಾದ ಮಗಳ ಜೊತೆ ತಮ್ಮ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ.