Ajay Rao Retro Story: ಹೊಸ ಸಿನಿಮಾಗೆ ಕಾಲಿಡಲಿದ್ದಾರೆ ಅಜಯ್ ರಾವ್.
Ajay Rao Retro Story: ನಟ ಅಜಯ್ ರಾವ್ (Ajay rao) ಅವರು ಕನ್ನಡದ ಪ್ರಮುಖ ನಟರಲ್ಲಿ ಒಬ್ಬರು. ಕನ್ನಡದ ಹಲವಾರು ಚಿತ್ರದಲ್ಲಿ ನಟಿಸಿ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದಿರುತ್ತಾರೆ. ಅಜಯ್ ರಾವ್ ಅವರು ತಮ್ಮ ಮೊದಲನೇ ಚಿತ್ರ ಏಸ್ ಕ್ಯೂಸ್ ಮೇ ಅಲ್ಲಿ ನಟಿಸಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿರುತ್ತಾರೆ. ಅನಂತರ ಇನ್ನು ಸಾಕಷ್ಟು ಸಿನಿಮಾಗಳನ್ನು ಮಾಡಿರುತ್ತಾರೆ. ಕೃಷ್ಣನ್ ಲವ್ ಸ್ಟೋರಿ , ಕೃಷ್ಣನ್ ಮ್ಯಾರೇಜ್ ಸ್ಟೋರಿ, ತಾಯಿಗೆ ತಕ್ಕ ಮಗ, ದೈರ್ಯಮ್, ಎಂದೆಂದಿಗೂ ಸೇರಿದಂತೆ ಹಲವು ಸಿನಿಮಾಗಳನ್ನು ಮಾಡಿದ್ದಾರೆ.
ಎರಡು ಸಿನಿಮಾಗಳಲ್ಲಿ ನಟ ಅಜಯ್ ರಾವ್
ನಟ ಅಜಯ್ ರಾವ್ ಅವರು ಎರಡು ಸಿನಿಮಾಗಳ ನಡುವೆ ಹಗ್ಗ ಜಗ್ಗಾಟ ನಡೆಸಿದ್ದಾರೆ ಎಂದು ಸುದ್ದಿ ಹರಡಿದೆ. ನವೆಂಬರ್ 14 ರಂದು ಅಜಯ್ ರಾವ್ ಅವರು ಮೈಸೂರಿನಲ್ಲಿ ಮಂಜು ಸ್ವರಾಜ್ ನಿರ್ದೇಶನದ ಸಿನಿಮಾದಲ್ಲಿ ಭಾಗವಹಿಸಲಿದ್ದಾರೆ. ಎರಡು ಸಿನಿಮಾಗಳಲ್ಲಿ ಹಗ್ಗ ಜಗ್ಗಾಟ ನಡೆಸುತ್ತಿದ್ದಾರೆ ಎಂದು ಕೇಳಿಬಂದಿದೆ. ರೆಟ್ರೋ ಲವ್ ಸ್ಟೋರಿ ಅಲ್ಲಿ ಮಿಶಾ ನಾರಂಗ್ (Misha narang) ನಾಯಕಿಯಾಗಿ ನಟಿಸಿದ್ದಾರೆ. ದೆಹಲಿಯ ಮೂಲ ನಟಿ ಈ ಹಿಂದೆ ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಹೆಸರಿಡದ ಚಿತ್ರಕ್ಕೆ ಪದಾರ್ಪಣ ಮಾಡುತ್ತಿದ್ದಾರೆ ಎಂದು ಸುದ್ದಿ ಹರಡಿದೆ.
ಈ ಚಿತ್ರದಲ್ಲಿ ರಂಗಾಯಣ ರಘು (Rangayana raghu) ಜೊತೆಗೆ ಇತರ ನಟರು ಪ್ರಮುಖ ಪಾತ್ರ ಮಡಿಲಿದ್ದಾರೆ. ಇತ್ತೀಚೆಗೆ ನಾಯಕ ನಾಯಕಿ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿತ್ತು. ಈ ಸಿನಿಮಾಗೆ ಮುಂದಿನ ದಿನಗಳಲ್ಲಿ ಇನ್ನಿತರ ಕಲಾವಿದರು ಸೇರಿಕೊಳ್ಳಲಿದ್ದಾರೆ. ಅಜಯ್ ರಾವ್ ನಟನೆಯ ಲವ್ ಸ್ಟೋರಿ ತುಂಬಿರುವ ಚಿತ್ರಕ್ಕೆ ಅಜನೀಶ್ ಲೋಜಕನಾಥ್ (Anish lokanath) ಅವರ ಸಂಗೀತವಿದೆ ಎಂದು ಸುದ್ದಿ ಕೇಳಿಬಂದಿದೆ. ಮೊಬೈಲ್ ಬರುವ ಮೊದಲು ನಡೆದ ಪ್ರೇಮ ಕಥೆ ಈ ಸಿನಿಮಾದ ಸ್ಟೋರಿ.
ಸಿನಿಮಾ ಬಗ್ಗೆ ಅಜಯ್ ರಾವ್ ಅವರ ಮಾತು
ಈ ಸಿನಿಮಾ ರೆಟ್ರೋ ಕಾಲದ ಕಥೆ ಆಗಿದೆ ಈ ಸಿನಿಮಾದಲ್ಲಿ ನನ್ನ ಪಾತ್ರ ಸಾಕಷ್ಟು ಆಸಕ್ತಿದಾಯಕ ವಾಗಿದೆ ಎಂದು ಅಜಯ್ ರಾವ್ ಹೇಳಿದ್ದಾರೆ. ಈ ಸಿನಿಮಾಗೆ ಲೋಹಿತ್ ನಂಜುಂಡಯ್ಯ (lohith nanjundaya) ನಿರ್ದೇಶನ ಮಾಡಲಿದ್ದಾರೆ. ಸಿನಿಮಾಗೆ ಸಂಬಂದಿಸಿದ ಎಲ್ಲ ವಿವರಗಳನ್ನು ಶೆಡ್ಯೂಲ್ ಮುಗಿದ ನಂತರ ಬಹಿರಂಗ ಪಡಿಸಲಿದ್ದಾರೆ. ಇನ್ನೊಂದು ವಿಷಯ ಏನೆಂದರೆ ನಿರ್ದೇಶಕ ಪವನ್ ಬ್ಯಾಟ್ ಅವರ ಕಟಿಂಗ್ ಶಾಪ್ ಸಿನಿಮಾದಲ್ಲಿ ಅಜಯ್ ರಾವ್ ನಟಿಸಲಿದ್ದಾರೆ. ಸದ್ಯ ಈ ಸಿನಿಮಾದ ಟೀಸರ್ ನವೆಂಬರ್ 20 ರಂದು ಬಿಡುಗಡೆ ಆಗುತ್ತದೆ.
ನಟ ಅಜಯ್ ರಾವ್ ಅವರ ಈ ಸಿನಿಮಾ ಬಹಳ ಕೂತುಹಲ ಮೂಡಿಸಿದೆ. ಇಷ್ಟುಬಾರಿ ಮಡಿದ ಸಿನಿಮಗಳಿಗಿಂತ ಈ ಸಿನಿಮಾ ಬಹಳ ಅದ್ಭುತವಾಗಿ ತೆರೆಯ ಮೇಲೆ ಬರಲಿದೆ. ಇದಲ್ಲದೆ ಈ ಸಿನಿಮಾ ಕೈಗೊಂಡು ನಟ ಅಜಯ್ ರಾವ್ ಬಹಳ ಖುಷಿಯಲ್ಲಿದಾರೆ. ಇವರ ಅಭಿಮಾನಿಗಳು ಬಹಳ ಕಾತೂರದಿಂದ ಈ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ.