Grandchildrens Property Rights Details: ಭಾರತದಲ್ಲಿ ಆಗಾಗ ಆಸ್ತಿ ವಿಚಾರಕ್ಕೆ ಚರ್ಚೆಗಳು ನೆಡೆಯುತ್ತಿರುತ್ತದೆ. ಇದೀಗ ಅಜ್ಜ ಸತ್ತ ನಂತರ ಮೊಮ್ಮಕ್ಕಳಿಗೆ ಪಾಲು ಸಿಗುತ್ತದೆಯೇ ಅನ್ನುವ ಪ್ರಶ್ನೆ ಎದುರಾಗಿದೆ. ತಂದೆ ಈಗಾಗಲೇ ಸತ್ತಿದ್ದರೆ..? ತಂದೆ ಜೀವಂತವಾಗಿದ್ದರೆ..? ಅಜ್ಜಿ ಆಸ್ತಿ..? ಪಿತ್ರರ್ಜಿತ ಆಸ್ತಿ…? ಇವೆರಡಕ್ಕೂ ಭಾರತದಲ್ಲಿ ಬೇರೆ ಬೇರೆ ನಿಯಮಗಳಿವೆ. ಹಿಂದೂ ಉತ್ತರಾಧಿಕಾರ ಕಾಯ್ದೆ 1956 ಮತ್ತು 2005 ರ ದೊಡ್ಡ ತಿದ್ದುಪಡಿಯ ನಂತರ ಈ ಎಲ್ಲ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಇದೀಗ ನಾವು ಆ ನಿಯಮಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಸ್ವಂತ ಆಸ್ತಿ ಮತ್ತು ಪಿತ್ರರ್ಜಿತ ಆಸ್ತಿ
ಸ್ವಂತ ಆಸ್ತಿ ಹಾಗು ಪಿತ್ರರ್ಜಿತ ಆಸ್ತಿಗೆ ವ್ಯತ್ಯಾಸ ಇರುತ್ತದೆ. ಅಜ್ಜ ತಾನು ಸಂಪಾದಿಸಿದ ಆಸ್ತಿ ಮಾತ್ರ ಸ್ವಂತ ಆಸ್ತಿ ಆಗುತ್ತದೆ. ಅಂದರೆ ಅಜ್ಜ ತಾನು ತನ್ನ ಉದ್ಯೋಗದಿಂದ ಗಳಿಸಿರುವಂತ ಆಸ್ತಿ ಆಗಿರುತ್ತದೆ. ಇನ್ನು ಪಿತ್ರರ್ಜಿತ ಆಸ್ತಿ ಅಂದರೆ, ಅಜ್ಜನ ಹಿಂದಿನ 4 ತಲೆಮಾರಿನಿಂದ ಬಂದಂತ ಅವಿಭಜಿತ ಆಸ್ತಿ ಆಗಿರುತ್ತದೆ.
ಅಜ್ಜನ ಸ್ವಂತ ಆಸ್ತಿಯಲ್ಲಿ ಮಕ್ಕಳ ಹಕ್ಕು
ಅಜ್ಜನ ಮರಣದ ನಂತರ ಆತನ ಆಸ್ತಿ ವಾರಸುದಾರರಿಗೆ ಸಮಾನವಾಗಿ ಹಂಚಿಕೆ ಆಗುತ್ತದೆ. ಅಂದರೆ ಅಜ್ಜನ ತಾಯಿ, ಹೆಂಡತಿ, ಮಕ್ಕಳು, ಮೊಮ್ಮಕ್ಕಳಿಗೆ ( ಮೊಮ್ಮಕ್ಕಳ ಅಪ್ಪ ಅಮ್ಮ ಅಜ್ಜನಿಗಿಂತ ಮೊದಲೇ ಸತ್ತಿದ್ದರೆ ಮಾತ್ರ ) ಗೆ ಪಾಲು ಸಿಗುತ್ತದೆ.
ತಂದೆ ಜೀವಂತವಾಗಿದ್ದರೆ ಮೊಮ್ಮಕ್ಕಳಿಗೆ ಪಾಲು ಸಿಗುದಿಲ್ಲ
ತಂದೆ ಜೀವಂತವಾಗಿದ್ದರೆ ಅಜ್ಜನ ಆಸ್ತಿ ಅವರಿಗೆ ಸೇರುತ್ತದೆ, ಹಾಗಾಗಿ ಮೊಮ್ಮೊಕ್ಕಳಿಗೆ ಯಾವುದೇ ಹಕ್ಕು ಇರುವುದಿಲ್ಲ. ಒಂದು ವೇಳೆ ತಂದೆ ಜೀವಂತ ಇಲ್ಲದ ಸಂದರ್ಭದಲ್ಲಿ ಮಾತ್ರ ಅವನ ಅಜ್ಜನ ಆಸ್ತಿ ಮೋಮ್ಮಕ್ಕಳಿಗೆ ಸಿಗುತ್ತದೆ.
ಅಜ್ಜಿಯ ಸ್ವಂತ ಆಸ್ತಿಯಲ್ಲಿ ಮೊಮ್ಮಕ್ಕಳ ಹಕ್ಕು
2005 ರ ತಿದ್ದುಪಡಿ ಪ್ರಕಾರ ಮೊಮ್ಮಕ್ಕಳಿಗೆ ಸಮಾನವಾದ ಹಕ್ಕು ಇರುತ್ತದೆ. ಸತ್ತ ಮಗಳ ಮಕ್ಕಳಿಗೂ ಕೂಡ ಸಮಾನ ಹಕ್ಕು ಇರುತ್ತದೆ.
ಪಿತ್ರರ್ಜಿತ ಆಸ್ತಿಯಲ್ಲಿ ಮಕ್ಕಳ ಹಕ್ಕು
2005 ರ ತಿದ್ದುಪಡಿ ಮತ್ತು 2020 ರ ಸುಪ್ರೀಮ್ ಕೋರ್ಟ್ Vineeta sharma ಅವರ ತೀರ್ಪಿನ ಪ್ರಕಾರ, ಹೆಣ್ಣು ಮಕ್ಕಳು ಕೂಡ ಜನ್ಮ ಸಿದ್ದ ಹಕ್ಕನ್ನು ಪಡೆಯುತ್ತಾರೆ, ಹಾಗೆ ತಂದೆ ಜೀವಂತವಾಗಿದ್ದರು ಅಥವಾ ಜೀವಂತವಾಗಿಲ್ಲದಿದ್ದರು ಕೂಡ ಮೊಮ್ಮಕ್ಕಳು ಪಿತ್ರರ್ಜಿತ ಆಸ್ತಿಗೆ ಜನ್ಮ ಸಿದ್ದ ಹಕ್ಕನ್ನು ಹೊಂದಿರುತ್ತಾರೆ. ಪಿತ್ರರ್ಜಿ ಆಸ್ತಿಯಲ್ಲಿ ಮೊಮ್ಮೊಕ್ಕಳು ಯಾವಾಗ ಬೇಕಾದರೂ ಪಾಲು ಪಡೆದುಕೊಳ್ಳಬಹುದು.
ಅಜ್ಜ ವಿಲ್ ಬರೆದಿಟ್ಟಿದ್ದರೆ..?
ಅಜ್ಜ ಒಂದು ವೇಳೆ ತನ್ನ ಸ್ವಂತ ಆಸ್ತಿಗೆ ವಿಲ್ ಬರೆದಿತ್ತು ಸತ್ತಿದ್ದರೆ, ಅದು ಅಂತಿಮವಾಗಿರುತ್ತದೆ. ಇದರಲ್ಲಿ ಮೊಮ್ಮೊಕ್ಕಳಿಗೆ ಯಾವ ಪಾಲು ಸಿಗುವುದಿಲ್ಲ.
ಮುಸ್ಲಿಂ, ಪಾರ್ಸಿ, ಕ್ರಿಶ್ಚಿಯನ್ ಕುಟುಂಬದ ನಿಯಮ
ಈ ಕಾನೂನು ಹಿಂದೂ, ಜೈನ, ಬೌದ್ಧ ಹಾಗೆ ಸಿಖ್ ಕುಟುಂಬಕ್ಕೆ ಮಾತ್ರ ಅನ್ವಯವಾಗುತ್ತದೆ. ಮುಸ್ಲಿಂ ಕಾನೂನು, Indian Succession Act 1925 ಬೇರೆ ನಿಯಮವನ್ನು ಹೊಂದಿದೆ
Disclaimer: This information is provided for awareness purposes only. For personalised legal advice, consult a qualified professional and refer to official government notifications.

